ಅವಳಿ ನಗರದ ಕಾನೂನು ಸುವ್ಯವಸ್ಥೆ ಕಾಪಾಡಲು, ಮಾದಕ ವಸ್ತುಗಳ ಮುಕ್ತ, ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಕ್ರಮ ಕೈಕೊಂಡಿದ್ದು 45 ಜನ ಗಡಿಪಾರು ಮಾಡಿದ ಆಯುಕ್ತ ಎನ್ ಶಶಿಕುಮಾರ

ಧಾರವಾಡ  : ಹುಬ್ಬಳ್ಳಿ ಧಾರವಾಡ ಅವಳನಗರದಲ್ಲಿ ನಡೆದಿರುವ, ಕೊಲೆ, ಸುಲಿಗೆ, ಕೊಲೆಗೆ ಪ್ರಯತ್ನ, ಸರಗಳ್ಳತನ, ಮಾದಕ ವಸ್ತು ಮಾರಾಟ/ಸೇವನೆ, ಭೂ ಮಾಫಿಯಾ, ಮಹಿಳೆ ಮತ್ತು ವಿದ್ಯಾರ್ಥಿನಿಯರ ಅಪಹರಣ, ಚುಡಾಯಿಸುವುದು ಅಲ್ಲದೆ ಸಂಘಟಿತ ಅಪರಾಧಗಳಾದ, ಮಟಕಾ, ಗ್ಯಾಂಬ್ಲಿಂಗ್‌, ಕ್ರಿಕೇಟ ಬೆಟ್ಟಿಂಗ್‌ ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ, ಸಮಾಜದ ಸ್ವಾಸ್ಥ್ಯ ಹಾಳುಮಾಡುವ, ಮುಂಡ ಹುಡುಗರ/ರೌಡಿ ಜನರ ಗುಂಪು ಕಟ್ಟಕೊಂಡು ತಿರುಗಾಡುತ್ತಾ ಸಾರ್ವಜನಿಕರಲ್ಲಿ ಭಯ ಮತ್ತು ಭೀತಿಯನ್ನು ಹುಟ್ಟು ಹಾಕಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಮಾಡಬಲ್ಲ ಅಪಾಯಕಾರಿ ಮನುಷ್ಯರಾಗಿ ಸಮಾಜಕ್ಕೆ ಗಂಡಾಂತರಕಾರಿಯಾಗಿರುವ ಇವರ ವಿರುದ್ಧ ಮುಂಜಾಗ್ರತಾ ಕ್ರಮದ ಅವಶ್ಯಕತೆ ಇರುತ್ತದೆ.

To maintain law and order in the twin cities, drug free, safety of women and children, Commissioner N Sasikumar has deported 45 people.

ಈ ಹಿನ್ನೆಲೆಯಲ್ಲಿ ಸುಮಾರು 2-3 ತಿಂಗಳುಗಳಿಂದ ಸ್ಥಳೀಯ ಅಧಿಕಾರಿಗಳೊಂದಿಗೆ ಇವರ ವಿರುದ್ಧ ಇರುವ ಪ್ರಕರಣಗಳನ್ನು ವಿಮರ್ಶೆ (ರಿವೀವ್) ಮಾಡಿದ್ದು ಈ ಆರೋಪಿತರ ಮೇಲೆ ಗಡಿಪಾರು ಮಾಡುವ ಅವಶ್ಯಕತೆ ಕಂಡುಬಂದಿದ್ದರಿಂದ,

ಕರ್ನಾಟಕ ಪೊಲೀಸ್ ಕಾಯ್ದೆ-1963 ಕಲಂ 55 ಮತ್ತು 56 ರ ಅಡಿಯಲ್ಲಿ ಕ್ರಮ ಕೈಕೊಂಡಿದ್ದು ಇರುತ್ತದೆ. ಮುಂದುವರೆದು ಕಾನೂನು ಸುವ್ಯವಸ್ಥೆ ಕಾಪಾಡಲು, ಮಾದಕ ವಸ್ತುಗಳ ಮುಕ್ತ, ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಕ್ರಮ ಕೈಕೊಂಡಿದ್ದು ಈ ಪ್ರಕ್ರಿಯೇ (ಗಡಿಪಾರು) ಮುಂದುವರೆಯುತ್ತದೆ.

ಈ ಗಡಿಪಾರು ವ್ಯಕ್ತಿಗಳ ನಿರ್ದಿಷ್ಟ ಅವಧಿವರೆಗೆ ಇದ್ದು, ಗಡಿಪಾರು ವ್ಯಕ್ತಿಗಳ ಚಲನವಲನಗಳ ಮತ್ತು ಇವರ ಕಾರ್ಯಚಟುವಟಿಕೆಗಳ ಮೇಲೆ ಸೂಕ್ತ ನಿಗಾವಹಿಸಿ ಈ ಕಛೇರಿಗೆ ಮಾಹಿತಿ ತಿಳಿಸುವಂತೆ “ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ.”

To maintain law and order in the twin cities, drug free, safety of women and children, Commissioner N Sasikumar has deported 45 people.

ಗಡಿಪಾರಾದ ವ್ಯಕ್ತಿಗಳು ನಗರದಲ್ಲಿ ಕಂಡುಬಂದಲ್ಲಿ, ಸಾರ್ವಜನಿಕರು ಹಾಗೂ ಮನೆಯ ಅಕ್ಕ-ಪಕ್ಕದ ಜನರು, ಸ್ಥಳೀಯ ಪೊಲೀಸ್ ಠಾಣೆಗಳಿಗೆ, ನಗರ ನಿಸ್ತಂತು ಕೊಠಡಿ (ಪೋನ ನಂ.100, 2233555) ಹಾಗೂ “112 ವಾಹನಕ್ಕೆ” ತಿಳಿಸುವ ಜವಾಬ್ದಾರಿ ಆಗಿರುತ್ತದೆ, ಈ ಪ್ರಕ್ರಿಯೆಗೆ ನಿಮ್ಮ ಸಹಕಾರ ಕೂಡ ಅವಶ್ಯ ವಿರುತ್ತದೆ.

  • Related Posts

    ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ

    ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…

    ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ

    ಧಾರವಾಡ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ ಶಾಖೆಯ 2024 2025 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಂಗಳವಾರ, ದಿ 04 ರಂದು ಮುಂಜಾನೆ 10:30 ಗಂಟೆಗೆ ಕನ್ನಡ ಕುಲಪುರೋಹಿತ ಆಲೂರು ವಂಕಟರಾವ ಸಾಂಸ್ಕೃತಿಕ ಭವನದಲ್ಲಿ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ…

    RSS
    Follow by Email
    Telegram
    WhatsApp
    URL has been copied successfully!