ರಂಗಭೂಮಿಯು ಮಕ್ಕಳ ವ್ಯಕ್ತಿತ್ವದ ವಿಕಸನಕ್ಕೆ ಪೂರಕ ಸಂಪರ್ಕ ಕಲೆಯಾಗಿದೆ – ಮಾರ್ತಾಂಡಪ್ಪ ಕತ್ತಿ.

ಧಾರವಾಡ : ರಂಗಭೂಮಿಯು ವ್ಯಕ್ತಿತ್ವದ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಒಂದು ಪ್ರಮುಖ ಕಲಾ ಪ್ರಕಾರವಾಗಿದೆ. ಬದುಕಿನ ಆಯಾಮಗಳನ್ನು ಮತ್ತು ಶಿಕ್ಷಣದ ಪರಿಣಾಮಕಾರಿ ಬೋಧನೆ ಮತ್ತು ಪರಿಹಾರಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ರಂಗಭೂಮಿ ಉತ್ತಮ ಮಾದ್ಯಮವಾಗಿ ಕಾರ್ಯ ಮಾಡುತ್ತದೆ ಎಂದು ಸಾಹಿತಿ ಮಾರ್ತಾಂಡಪ್ಪ ಕತ್ತಿ ಹೇಳಿದರು.

ಅವರು ಸಿದ್ದರಾಮೇಶ್ವರ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ 2 ನೇ ವರ್ಷದ ಬಿಎಡ್ ಪ್ರಶಿಕ್ಷಣಾರ್ಥಿಗಳ ಪಠ್ಯಾಧಾರಿತ ಕಲೆ ಮತ್ತು ನಾಟಕೋತ್ಸವಕ್ಕೆ ಉದ್ಘಾಟನೆ ಮಾಡಿ ಮಾತನಾಡುತ್ತಾ ರಂಗಭೂಮಿಯು ಮಕ್ಕಳ ವ್ಯಕ್ತಿತ್ವದ ವಿಕಸನಕ್ಕೆ ಪೂರಕ ಸಂಪರ್ಕ ಕಲೆಯಾಗಿದೆ. ರಂಗಭೂಮಿಯ ಹಿನ್ನೆಲೆ ಪ್ರತಿಯೊಂದು ಹೆಜ್ಜೆಗೆ ಆಧಾರಸ್ಥಂಬವಾಗಿ ನಿಲ್ಲುತ್ತದೆ. ಹಾಗಾಗಿ ಶಿಕ್ಷಕರಾಗುವವರು ರಂಗಭೂಮಿಯ ಜ್ಞಾನದಿಂದ ಉತ್ತಮ ಶಿಕ್ಷಕರಾಗಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ಗಿರೀಜಾ ಹಿರೇಮಠ ಉತ್ತಮ ಭೋದನೆ ಮಾಡಲು ಪಠ್ಯ ಮತ್ತು ನಾಟಕದ ಪರಿಕಲ್ಪನೆಯ ಜ್ಞಾನ ಆಳವಾಗಿ ಇದ್ದಾಗ ಮಾತ್ರ ಸಮರ್ಥವಾಗಿ ಮಕ್ಕಳ ಆಳಕ್ಕೆ ಪಾಠ ಮಾಡಲು ಸಹಾಯಕವಾಗುತ್ತದೆ ಎಂದು ಹೇಳಿದರು.

ಗಾಯಕ ಪ್ರೇಮಾನಂದ ಶಿಂದೆ ರಂಗಗೀತಗಳನ್ನು ಹಾಡಿ ವಿದ್ಯಾರ್ಥಿಗಳಿಗೆ ರಂಗಗೀತೆಗಳ ಮಹತ್ವ ಸಾರಿದರು.

ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಮತ್ತು ಬಿಸಿಎ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ಕೆ.ಆರ್ ಹಿರೇಮಠ, ಉಪನ್ಯಾಸಕರಾದ ಎಸ್ ಎಮ್ ಕೊಟಬಾಗಿ, ಗಿರೀಜಾ ಸುಂಕದ, ಉಮಾ ಮಠ ಉಪಸ್ಥಿತಿ ಇದ್ದರು.

ಮಾಹಾವಿದ್ಯಾಲಯ ವಿದ್ಯಾರ್ಥಿಗಳು ಒಟ್ಟು ಎಂಟು ತಂಡಗಳಲ್ಲಿ ಎಂಟು ನಾಟಕಗಳನ್ನು ಪ್ರದರ್ಶನ ನೀಡಿದರು.

ಒಟ್ಟು ಎರಡು ನೂರು ವಿದ್ಯಾರ್ಥಿಗಳು ಇದ್ದರು. ಉಪನ್ಯಾಸಕರಾದ ಜಯಶೀಲಾ ಜೆ ಎಚ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎರಡನೇ ವರ್ಷದ ವಿದ್ಯಾರ್ಥಿಗಳಾದ ಸಂಜನಾ ಹಾಗೂ ಸಂಗಡಿಗರು ಪ್ರಾರ್ಥನೆ ನಡೆಸಿಕೊಟ್ಟರು. ಮಧು ಪೂಜಾರಿ ನಿರೂಪಿಸಿದರು. ಸಿದ್ದಮ್ಮ ದೊಡಮನಿ ವಂದಿಸಿದರು.

  • Related Posts

    ಡಾ ಬಿ ಎಂ ಪಾಟೀಲ್ ರವರ ಅಭಿನಂದನೆ ಮತ್ತು ಸದ್ಗುಣ ಸಿರಿ ಗ್ರಂಥ ಬಿಡುಗಡೆ ಕಾರ್ಯಕ್ರಮ.

    ಧಾರವಾಡ 29 : ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಡಾ ಬಿ ಎಂ ಪಾಟೀಲ್ ಅಭಿನಂದನಾ ಸಮಿತಿ ಧಾರವಾಡ, ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯದ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ, ಧಾರವಾಡ ಖೇಲ್ ಕರ್ನಾಟಕ ದೈಹಿಕ…

    ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ – ಸೂಕ್ತ ಕ್ರಮಕ್ಕೆ – ಬಸವರಾಜ ಕೊರವರ ಆಗ್ರಹ.

    ಧಾರವಾಡ 29 : ಧಾರವಾಡ ಅರಣ್ಯ ವಲಯದ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಟಾವಣೆ ಮಾಡಿ, ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಿರುವ ಖಾಸಗಿ ವ್ಯಕ್ತಿಗಳು ಹಾಗೂ ಅದಕ್ಕೆ ಸಹಕಾರ ನೀಡಿರುವ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಜನಜಾಗೃತಿ…

    RSS
    Follow by Email
    Telegram
    WhatsApp
    URL has been copied successfully!