ಧಾರವಾಡ 09 : ಚಿಲಿಪಿಲಿ ಪ್ರಕಾಶನ ಧಾರವಾಡದ ಅಡಿಯಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಭಾರತಿ ಬಡಿಗೇರ ಅವರ ದ್ವೀತಿಯ ಕವನ ಸಂಕಲನ ಸಂತಿ ಚೀಲ ಇದೇ ದಿ-10 ರಂದು ,ಬೆಳಿಗ್ಗೆ -10:30 ಕ್ಕೆ,ಕರ್ನಾಟಕದ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಭವನದಲ್ಲಿ ಬಿಡುಗಡೆಯಾಗಲಿದೆ.ಈ ಕವನ ಸಂಕಲನದಲ್ಲಿ ನಾಡಿನ ಮತ್ತು ದೇಶದ ಮಹಾನ್ ವ್ಯಕ್ತಿಗಳ ಕುರಿತು ಹಾಗೂ ತಂದೆ,ತಾಯಿ,ಗುರು ,ಮೌಲ್ಯಗಳು, ಹಬ್ಬ -ಹರಿದಿನಗಳು,ನಮ್ಮ ಸಂಸ್ಕೃತಿ – ಸಂಸ್ಕಾರ ,ಕನ್ನಡ ನಾಡು-ನುಡಿ ಕುರಿತು ಮಕ್ಕಳಿಗೆ ಜಾಗೃತಿ,ಅರಿವು ಮೂಡಿಸುವ ಹಲವಾರು ಕವನಗಳು ಇವೆ. ಎಂದು ಕ ವಿ ವ ಸಂಘದ ಪ್ರಧಾನ ಕಾಯ೯ದಶಿ೯ ಶಂಕರ ಹಲಗತ್ತಿ ತಿಳಸಿದರು , ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮೌಲ್ಯಗಳು ಕುಸಿತವಾಗುತ್ತಿರುವ ಈ ಸಂದರ್ಭದಲ್ಲಿ ಮಕ್ಕಳಲ್ಲಿ ಮೌಲ್ಯಗಳನ್ನು ರೂಢಿಸಲು ದೇಶಭಕ್ತಿ, ನಾಡಭಕ್ತಿ ಒಡಮೂಡಲು ಜೊತೆಗೆ ಮಕ್ಕಳಿಗೆ ಓದುವ ಅಭಿರುಚಿ ಬೆಳೆಸುವ ಉದ್ದೇಶವಿದೆ.

ಈ ಕಾರ್ಯಕ್ರಮದಲ್ಲಿ ಧಾರವಾಡದ ಶಿಕ್ಷಣ ಚಿಂತಕ ಎಂ.ಎಂ.ಚಿಕ್ಕಮಠ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.ಸಾಹಿತಿಗಳಾದ ಚನ್ನಪ್ಪ ಅಂಗಡಿಯವರು ಕವನ ಸಂಕಲನ ಲೋಕಾರ್ಪಣೆ ಮಾಡಲಿದ್ದಾರೆ.ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ,ಸಾಹಿತಿ ಪ್ರಜ್ಞಾ ಮತ್ತಿಹಳ್ಳಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಧಾರವಾಡ ಚಿಲಿಪಿಲಿ ಪ್ರಕಾಶನದ ಪ್ರಕಾಶಕರಾದ ಜಗದೀಶ ಬರದೇಲಿ,ಧಾರವಾಡ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕಕುಮಾರ ಸಿಂದಗಿ, ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ಅಡಿವೇರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಪುಸ್ತಕ ಪರಿಚಯವನ್ನು ಶಿಕ್ಷಕ ಸಾಹಿತಿ ಮಹಾಂತೇಶ ಹುಬ್ಬಳ್ಳಿ ಮಾಡಲಿದ್ದಾರೆ.ಕವನ ಸಂಕಲನದ ಕವಯತ್ರಿ ಭಾರತಿ ಬಡಿಗೇರ ಉಪಸ್ಥಿತರಿರುವರು.

ಪತ್ರಿಕಾ ಗೋಷ್ಠಿಯಲ್ಲಿರುವವರು
ಶಂಕರ ಹಲಗತ್ತಿ,ಭಾರತಿ ಬಡಿಗೇರ, ಪ್ರಮಿಳಾ ಜಕ್ಕಣ್ಣವರ,ಮೌನೇಶ್ವರ ಕಮ್ಮಾರ,ಸಂತೋಷ ಕರಮಳ್ಳವರ, ಎನ್.ಬಿ.ದ್ಯಾಪೂರ.
ಇದ್ದರು.