ಧಾರವಾಡ : ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರ ಇರಬೇಕು. ಸಂಚಾರಿ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು. ತಂದೆ ತಾಯಿ, ಗುರು ಹಿರಿಯರಿಗೆ ಗೌರವ ನೀಡಬೇಕೆಂದು ಅಪರಾಧ ಮತ್ತು ಸಂಚಾರಿ ವಿಭಾಗದ ಉಪ ಪೊಲೀಸ್ ಆಯುಕ್ತರಾದ ರವೀಶ್ ಸಿ.ಆರ್. ಹೇಳಿದರು.
ಅವರು, ಡಾ.ಡಿ.ಜಿ.ಶೆಟ್ಟಿ ಎಜುಕೇಶನ್ ಸೊಸೈಟಿಯ ಟಿ.ಎಂ.ಶೆಟ್ಟಿ ಮೆಮೋರಿಯಲ್ ಇಂಡಿಪೆಂಡೆಂಟ್ ಪಿ.ಯು. ಕಾಲೇಜ್, ಆರ್.ಎಸ್ ಶೆಟ್ಟಿ ಕಾಲೇಜ್ ಆಫ್ ಕಾಮರ್ಸ್ ಹಾಗೂ ರುಕ್ಮಿಣಿ ಶೆಟ್ಟಿ ಮೆಮೋರಿಯಲ್, ಸುಧಾಕರ್ ಶೆಟ್ಟಿ ಬಿಸಿಎ ಕಾಲೇಜುಗಳ ಆಶ್ರಯದಲ್ಲಿ ಸಂಚಾರಿ ನಿಯಮಗಳ ಪಾಲನೆ ಮತ್ತು ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಯಾವಾಗಲೂ ಸರಿ, ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಒಳ್ಳೆಯ ಮಾರ್ಗದತ್ತ ನಡೆಯಬೇಕು. ತಂದೆ ತಾಯಿಗಳು ಮಕ್ಕಳ ಬಗ್ಗೆ ಅಪಾರವಾದ ಕನಸನ್ನು ಕಂಡಿರುತ್ತಾರೆ. ಅವರ ಕನಸನ್ನು ಈಡೇರಿಸಿ ಅವರಿಗೆ ಋಣಿಯಾಗಿರಬೇಕು ಅಂತಾ ಹೇಳಿದರು.
ಮುಖ್ಯ ಅತಿಥಿಯಾಗಿ ರಾಯಲ್ ರಿಡ್ಸ್ ಮುಖ್ಯ ಆಡಳಿತ ಅಧಿಕಾರಿಯಾದ ಮಂಜುರಾಮ್ ಶೆಟ್ಟಿ ಮಾತನಾಡಿ ಅಪರಾಧ ಮತ್ತು ಸಂಚಾರಿ ವಿಭಾಗದ ಉಪ ಪೊಲೀಸ್ ಆಯುಕ್ತರಾದ ರವೀಶ್ ಸಿ.ಆರ್. ಅವರ ಬಗ್ಗೆ ಪರಿಚಯಿಸಿದರು.
ಡಾ.ಡಿ.ಜಿ.ಶೆಟ್ಟಿ ಎಜುಕೇಶನಲ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಡಿ.ಜಿ.ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರೋ. ರಶ್ಮಿ ಮಂಜುರಾಮ ಶೆಟ್ಟಿ, ಡಾ.ಎಸ್.ಎಂ.ಸಾಲಿಮಠ, ಪ್ರೊ.ಜಿ.ಎ.ಎಲಿಗಾರ, ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.