
ಅಧಿಕಾರ ಸ್ವೀಕರಿಸಿದ ಶಿವಲೀಲಾ ವಿನಯ ಕುಲಕರ್ಣಿ
ಬೆಂಗಳೂರು : ಬೆಂಗಳೂರಿನ ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಛೇರಿಯಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.
ಈ ಸಂಧರ್ಭದಲ್ಲಿ ಮಾನ್ಯ ಅರಣ್ಯ ಸಚಿವರಾದ ಈಶ್ವರ ಖಂಡ್ರೆ,ಶಾಸಕರಾದ ಎನ್ ಎಚ ಕೋನರಡ್ಡಿ, ವಿಧಾನ ಪರಿಷತ್ ಸದಸ್ಯರಾದ ಸಲೀಮ ಅಹ್ಮದ,ಚನ್ನಗಿರಿ ಶಾಸಕರಾದ ಬಸವರಾಜ ಶಿವಗಂಗಾ ಶುಭ ಹಾರೈಸಿದರು.
ಅಧಿಕಾರ ವಹಿಸಿಕೊಂಡು ಮಾತನಾಡಿದ ಶಿವಲೀಲಾ ಕುಲಕರ್ಣಿಯವರು,ನಮ್ಮ ಕ್ಷೇತ್ರದ ಜನರ ಆಶಿರ್ವಾದದಿಂದ,ಹಾಗೂ ಮಾನ್ಯ ಮಾಜಿ ಸಚಿವ ವಿನಯ ಕುಲಕರ್ಣಿಯವರ ಪಕ್ಷ ನಿಷ್ಠೆಯನ್ನು ಪರಿಗಣಿಸಿ ನನ್ನನ್ನು ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರನ್ನಾಗಿ ನಿಯುಕ್ತಿ ಮಾಡಿದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೂ, ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರವರಿಗೂ ಹಾಗೂ ಪಕ್ಷದ ಎಲ್ಲ ಮುಖಂಡರಿಗೂ ಮೊದಲನೆಯದಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಈಗಾಗಲೇ ಧಾರವಾಡ ಗ್ರಾಮೀಣ ವ್ಯಾಪ್ತಿಯ ಒಂಭತ್ತು ವಾರ್ಡುಗಳಿಗೆ ಒಳಚರಂಡಿ ಕಾಮಗಾರಿಗೆ 179 ಕೋಟಿ ಅನುದಾನ ನೀಡಿದ್ದು ಕರ್ನಾಟಕ ರಾಜ್ಯದ ವಿವಿದೆಡೆ ಕೂಡ ಅನುದಾನ ನೀಡಿದ್ದು ಕಾಮಗಾರಿಗಳು ಚಾಲ್ತಯಲ್ಲಿವೆ,ಮುಂದಿನ ದಿನಗಳಲ್ಲಿ ಮಾನ್ಯ ಸಚಿವರಾದ ಭೈರತಿ ಸುರೇಶವರು ಹಾಗೂ ಮಾಜಿ ಅಧ್ಯಕ್ಷ ವಿನಯ ಕುಲಕರ್ಣಿಯರ ಸಲಹೆ ಸೂಚನೆಯಂತೆ ಕಾರ್ಯನಿರ್ವಹಿಸುತ್ತೇನೆ,ಹಾಗೇಯೇ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು,ಒಳಚರಂಡಿ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಸದಾ ಶ್ರಮಿಸುತ್ತೇನೆ ಎಂದರು.
ಈ ಸಂಧರ್ಭದಲ್ಲಿ ವನ್ಯಜೀವಿ ಮಂಡಳಿ ಸದಸ್ಯೆ ವೈಶಾಲಿ ಕುಲಕರ್ಣಿ,ದೀಪಾಲಿ ಕುಲಕರ್ಣಿ ,ಹೇಮಂತ ಕುಲಕರ್ಣಿ ಸೇರಿದಂತೆ,ಪಕ್ಷದ ಮುಖಂಡರು,ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.