ಧಾರವಾಡ  : ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಕೇಂದ್ರ ಕಚೇರಿ ಕೊಪ್ಪಳ ಇದರ ಆಡಳಿತ ಮಂಡಳಿ ಚುನಾವಣೆ 2025 ರ ಚುನಾವಣೆ ಫಲಿತಾಂಶದಲ್ಲಿ ಧಾರವಾಡ ಸಾಮಾನ್ಯ ಕ್ಷೇತ್ರದಿಂದ ಆಡಳಿತ ಮಂಡಳಿ ನಿರ್ದೇಶಕರಾಗಿ ಶೇಖರ್ ನೀಲಪ್ಪ ಕವಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಹಾಯಕ ರಿಟರ್ನಿಂಗ್ ಅಧಿಕಾರಿ ಶ್ರೀದೇವಿ ಕುಲಕರ್ಣಿ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶಿವಾನಂದ ಕವಳಿ, ರಾಜಶೇಖರ ಉಪ್ಪಿನ, ವೀರೇಶ ಕೇಲಗೇರಿ, ಈರಪ್ಪ ಕವಳಿ, ಪ್ರವೀಣ ಕವಳಿ, ಶಿವಕುಮಾರ ಕುಂಬಾರಿ, ಅಶೋಕ ಶೆಟ್ಟರ್, ಪ್ರಥಮ ಕವಳಿ, ಮಹೇಶ ಬಿಳಿಹಾಳ ಸೇರಿದಂತೆ ಇತರರಿದ್ದರು.