ಧಾರವಾಡ 14 : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ಪ್ರತ್ಯೇಕ ಮಾಡುವದರ ಈಗಾಗಲೇ ಪಾಲಿಕೆಯಲ್ಲಿ ಸರ್ವಾನುಮತದಿಂದ ನಿರ್ಣಯವನ್ನು ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೂ ಕೂಡ ಧಾರವಾಡದ ಪ್ರತ್ಯೇಕ ಮಹಾನಗರ ಪಾಲಿಕೆಯ ಹೋರಾಟಗಾರರು ಅನಾವಶ್ಯಕ ಪ್ರಹ್ಲಾದ ಜೋಶಿ ಮತ್ತು ಅರವಿಂದ ಬೆಲ್ಲದವರ ಮೇಲೆ ಆರೋಪ ಮಾಡುವದು ಸರಿಯಲ್ಲ. ಅರವಿಂದ ಬೆಲ್ಲದರವರು ಪ್ರತ್ಯೇಕ ಪಾಲಿಕೆಗೆ ವಿಧಾನಸಭೆಯಲ್ಲಿ ಪ್ರಸ್ತಾವನೆ ಮಾಡಿದವರಲ್ಲಿ ಮೊದಲಿಗರು. ಅರವಿಂದ ಬೆಲ್ಲದರವರು ಹಾಗೂ ಪ್ರಹ್ಲಾದ ಜೋಶಿಯವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸುವ ಹೇಳಿಕೆ ಸರಿಯಲ್ಲ.

ಇದು ರಾಜಕೀಯ ಪೇರಿತವಾದಂತ ಹೇಳಿಕೆಯಂದು ಅನಿಸುತ್ತದೆ ಎಂದರು, ಹುಬ್ಬಳ್ಳಿ ಮತ್ತು ಧಾರವಾಡ ನೂರಾರು ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ ಅವಳಿ ಮಹಾನಗರ ಎಂದೆ ಖ್ಯಾತಿಯಾಗಿದೆ. ಧಾರವಾಡ ಮಹಾನಗರ ಸಿವಿಲ್ ಆಸ್ಪತ್ರೆ, ಐ.ಐ.ಟಿ, ಹೈಕೊರ್ಟ್, ಐ.ಐ.ಐ.ಟಿ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯಗಳನ್ನು ಮತ್ತು ಐತಿಹಾಸಿಕ ಮುರುಘಾಮಠವನ್ನು ಹೊಂದಿದೆ. ಧಾರವಾಡವು ವಿದ್ಯಾಕಾಶಿ ಅಂತಾ ಪ್ರಸಿದ್ಧವಾಗಿದೆ. ನಾವು ಈಗಾಗಲೇ ಮಹಾನಗರವನ್ನು ಪ್ರತ್ಯೇಕ ಪಾಲಿಕೆ ಮಾಡುವುದರ ಬಗ್ಗೆ ನಿರ್ಣಯ ತೆಗೆದುಕೊಂಡಾಗಿದೆ. ಆದರೆ ಆಗುವದಕ್ಕಿಂತಾ ಮುಂಚೆ ಇದು ಆತುರದ ನಿರ್ಧಾರವಂತು ಆಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ಪ್ರತ್ಯೇಕ ಮಾಡುವ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಮುಂದೆ ಇದನ್ನು ಚರ್ಚೆಗೆ ಇಡಬೇಕಾಗಿತ್ತು, ಅವಳಿನರದಲ್ಲಿರತಕ್ಕಂತಹ ಚೇಂಬರ ಆಫ್ ಕಾಮರ್ಸ, ಇಂಡಸ್ಟ್ರೀಯಲ್ ಅಸೋಸಿಯೇಶನ್, ಸಂಘ-ಸಂಸ್ಥೆಗಳು, ವಕೀಲರ ಸಂಘಗಳು, ಡಾಕ್ಟರ್ ಅಸೋಸಿಯೇಶನ್, ಎಪಿಎಂಸಿ ವರ್ತಕರು, ಅವಳಿನಗರದ ದಿನನಿತ್ಯದ ವಾಣಿಜ್ಯ ವರ್ತಕರು, ಸಾಹಿತಿಗಳು, ಅನೇಕ ಪ್ರಬುದ್ಧರನ್ನು ಕರೆದು ಚರ್ಚಿಸಿ ನಿರ್ಧಾರಮಾಡಬೇಕಾಗಿತ್ತು.

ಆದರೆ ಈ ಕೂಡಲೇ ಮಹಾನಗರ ಪ್ರತ್ಯೇಕವಾಗಬೇಕೆಂಬುವದರ ತರಾತುರಿಯಲ್ಲಿ ಪಾಲಿಕೆಯಲ್ಲಿ ನಾವೇಲ್ಲರು ನಿರ್ಣಯ ತೆಗೆದುಕೊಂಡಿರುತ್ತೇವೆ. ರಾಜ್ಯ ಸರಕಾರ ಪ್ರತ್ಯೇಕ ಮಹಾನಗರ ಪಾಲಿಕೆಘೋಷಣೆ ಮಾಡಿದರು ಸನ್ 2024-25 ನೇ ಸಾಲಿನ ಬಜೆಟನಲ್ಲ ಪ್ರತ್ಯೇಕ ಪಾಲಿಕೆ ನಿರ್ವಹಣೆಗೆ ಯಾವುದೇ ಬಜೆಟ್ (ನಿಧಿಯನ್ನು) ಕಾಯ್ದಿರಿಸಿರುವುದಿಲ್ಲ. ಎಂದು ಆರೋಪಿಸಿದರು, ಅಂದರೆ ಅವರಿಗೆ ಪ್ರತ್ಯೇಕ ಪಾಲಿಕೆ ಮಾಡಲು ಮನಸ್ಸಿಲ್ಲ ಎಂದು ತೋರುತ್ತದೆ. ಆದರೂ ಕೂಡ ಬಿಜೆಪಿ ಪಕ್ಷ ಹಾಗೂ ಪಕ್ಷದ ನಾಯಕರು ಪ್ರಹ್ಲಾದ ಜೋಶಿಯವರು. ಅರವಿಂದ ಬೆಲ್ಲದರವರು ಮತ್ತು ಮಹೇಶ ಟೆಂಗಿನಕಾಯಿಯವರು ಎಲ್ಲಿಯೂ ಕೂಡ ಅದಕ್ಕೆ ವಿರೋಧವನ್ನು ವ್ಯಕ್ತಪಡಿಸಿಲ್ಲ.

ಪಲ್ಲಾದ ಜೋಶಿಯವರು, ಅರವಿಂದ ಬೆಲ್ಲದರವರು ಸ್ವತಃ ಮಹಾನಗರ ಪಾಲಿಕೆ ವಿಂಗಡಿಸಲು ಒಪ್ಪಿಗೆ ಕೊಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಕೂಡ ರಾಜಕೀಯ ಪ್ರೇರಿತವಾದಂತಹ ಹೇಳಿಕೆಯನ್ನು ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ಹೋರಾಟ ಸಮಿತಿಯವರು ವಿನಾಕಾರಣ ಬಿಜೆಪಿಯ ನಾಯಕರುಗಳಾದ ಪ್ರಹ್ಲಾದ ಜೋಶಿಯವರು ಹಾಗೂ ಅರವಿಂದ ಬೆಲ್ಲದರವರ ಮೇಲೆ ಆರೋಪ ಮಾಡುವದನ್ನು ಬಿಡಬೇಕು ಮತ್ತು ಈಗಾಗಲೇ ನಾವು ಮಹಾನಗರ ಪಾಲಿಕೆಯಿಂದ ನಿರ್ಣಯ ತೆಗೆದುಕೊಂಡು ಅದನ್ನು ಸರ್ಕಾರಕ್ಕೆ ಕಳುಹಿಸಿದ್ದೇವೆ.

ಸರ್ಕಾರದವರು ಮುಂದೆ ಅದರ ಬಗ್ಗೆ ಏನು ಕ್ರಮವಹಿಸಬೇಕೆಂಬುದನ್ನು ಅವರು ನಿರ್ಣಯವನ್ನು ತೆಗೆದುಕೊಳ್ಳಬೇಕು. ರಾಜ್ಯಪಾಲರಿಗೆ ಸರ್ಕಾರ ಕಳುಹಿಸಿದ್ದೇ ಆದಲ್ಲಿ ಕಾನೂನು ಅಡಿಯಲ್ಲಿ ರಾಜ್ಯಪಾಲರು ಕ್ರಮಕೈಗೊಳ್ಳುತ್ತಾರೆ. ಆದರೆ ರಾಜ್ಯಪಾಲರ ಮತ್ತು ಮಹಾನಗರ ಪಾಲಿಕೆಯ ಪ್ರತ್ಯೇಕದರ ಬಗ್ಗೆ ನಮ್ಮ ಯಾವುದೇ ವಿರೋಧವಿಲ್ಲ. ಆದರೆ ಇಗಿರುವಂತಹ ಚುನಾಯಿತ ಸದಸ್ಯರು ಮಹಾನಗರ ಪಾಲಿಕೆಯ 82 ಸದಸ್ಯರನ್ನು ಎಲ್ಲೋ ಒಂದೇಡೆ ಕತ್ತಲಲ್ಲಿಟ್ಟು ಅವರ 5 ವರ್ಷ ಅವಧಿ ಮುಗಿಯುವದಕ್ಕಿಂತ ಮುಂಚೆನೆ ಮಹಾನಗರ ಪಾಲಿಕೆಯನ್ನು ಸರ್ಕಾರ ವಿಸರ್ಜಿಸಿ ಪ್ರತ್ಯೇಕ ಮಾಡಬೇಕೆನ್ನುವ ನಿರ್ಣಯವನ್ನು ತೆಗೆದುಕೊಳ್ಳಲು ಮುಂದಾಗಿದೆ.

ನಮ್ಮ 82 ಸದಸ್ಯರ ಆಡಳಿತಾವಧಿ ಮುಗಿದ ನಂತರ ಸರ್ಕಾರ ಇದನ್ನು ಪ್ರತ್ಯೇಕ ಮಾಡುವದು ಸೂಕ್ತ ಎಂಬುದಷ್ಟೇನಮ್ಮ ವಾದ ಎಂದರು. ಆದ್ದರಿಂದ ಈ ಹೇಳೀಕೆ ಸರಿಯಲ್ಲಾ, ಈ 82 ಸದಸ್ಯರ ಅವಧಿ ಮುಗಿದ ಮೇಲೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಮಾಡಲಿಕ್ಕೆ ಸರ್ಕಾರಕ್ಕೆ ಇನ್ನೂ 2 ವರ್ಷ ಅವಧಿ ಇದೆ.

ಸರ್ಕಾರ ಈ ನಿಟ್ಟಿನಲ್ಲಿ ಕರ್ತವ್ಯವನ್ನು ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಈಗ ಇದ್ದಂತಹ ಸದಸ್ಯರನ್ನು ಮೊಟಕುಗೊಳಿಸದೇ ಇರುವುದು ಸೂಕ್ತ. ಆದ್ದರಿಂದ ಅನಾವಶ್ಯಕವಾಗಿ ಇಂತಹ ಹೇಳಿಕೆಯಗಳನ್ನು ನೀಡುತ್ತಿರುವುದು ರಾಜಕೀಯ ಪ್ರೇರಿತ ಎಂದು ಅನಿಸುತ್ತಿದೆ. ಎಂದು. ಅಧ್ಯಕ್ಷರು, ಧಾರವಾಡ ನಗರ ಘಟಕ -71 ಶಂಕರ ಶೇಳಕೆ ಹೇಳಿದರು.