ಮೂರು ಕವನ ಸಂಕಲನಗಳ ಬಿಡುಗಡೆ

ಧಾರವಾಡ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸುಲೋಚನಾ ಮಾಲಿಪಾಟೀಲರ ಚಿಗುರಿದ ಹೂಬಳ್ಳಿ, ಅಂತರಂಗದ ನಿನಾದ ಹಾಗೂ ಡಾ.‌ಸುಧಾ ಚಂದ್ರಶೇಖರ ಹುಲಗೂರ ಅವರ ಅಂತರಂಗದ ಅಲೆಗಳು ಕವನ ಸಂಕಲನಗಳನ್ನು ಪ್ರೊ. ಮಾಲತಿ ಪಟ್ಟಣಶೆಟ್ಟಿ ಬಿಡುಗಡೆ ಮಾಡಿದರು.


ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಕವಯಿತ್ರಿರು ಸಮಾಜಮುಖಿಯಾದ ಕವನಗಳನ್ನು ಬರೆಯುವಾಗ ಮೌಲ್ಯಾಧಾರಿತ ಸಂದೇಶ ಇರಬೇಕು. ಭಾಷೆ , ಅಭಿವ್ಯಕ್ತಿ , ಭಾವನೆಗಳು, ವಿಷಯಗಳು ಓದುಗರ ಸಹೃದಯರನ್ನು ಆಕರ್ಷಿಸುವಂತಿರಬೆಕೆಂದು ಕಿವಿಮಾತು ಹೇಳಿದರು. ಸಾಹಿತ್ಯ ಪರಿಷತ್ತು ಉದಯೋನ್ಮುಖ ಕವಿಗಳ ಕೃತಿಗಳನ್ನು ಬಿಡುಗಡೆ ಮಾಡಿ ಪ್ರೋತ್ಸಾಹಿಸುತ್ತಾ ಬಂದಿರುವುದನ್ನು ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರು ಪ್ರಶಂಸಿಸಿದರು. ಬಿಡುಗಡೆ ಗೊಂಡ ಕವನ ಸಂಕಲನಗಳ ಕುರಿತು ಡಾ. ಎಮ್ ವೈ ಸಾವಂತ್, ಲೀಲಾ ಕಲಕೋಟಿ ಹಾಗೂ ಬಸಂತಿ ಇಂಗಳಳ್ಳಿ ಅವರು ಮಾತನಾಡಿದರು.‌

ಅಧ್ಯಕ್ಷತೆ ವಹಿಸಿದ್ದ ಡಾ. ಎಸ್ ಆರ್ ಗುಂಜಾಳ ಅವರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಬೇಕು ಎಂದರು.
ಡಾ . ಲಿಂಗರಾಜ ಅಂಗಡಿ ಮಾತನಾಡಿ ಅನಿತಾ ಅರಬಳ್ಳಿ ಹಾಗೂ ‌ಲಲಿತಾ ಪಾಟೀಲ ಅತಿಗಳ ಪರಿಚಯ ಮಾಡಿದರು. ಕು ತೇಜಸ್ವಿನಿ ಹಾಗೂ ಸಂಜನಾ ಪ್ರಾರ್ಥಿಸಿದರು.ವೇದಿಕೆ ಮೇಲೆ ಸುಲೋಚನಾ ಅಪ್ಪಾಸಾಹೇಬ ಮಾಲಿಪಾಟೀಲ ದಂಪತಿಗಳು ಹಾಗೂ ಡಾ. ಸುಧಾ ಚಂದ್ರಶೇಖರ ಹುಲಗೂರ ದಂಪತಿಗಳು ಉಪಸ್ಥಿತರಿದ್ದರು.‌
ಶ್ರೀಮತಿ ಮೇಘಾ ಹುಕ್ಕೇರಿ ಕಾರ್ಯಕ್ರಮ ನಿರೂಪಿಸಿದರು.‌ ಶಾಂತವೀರ ಬೆಟಗೇರಿ, ಡಾ. ಎಸ್ ಎಸ್ ದೊಡಮನಿ,ಮಹಾಂತೇಶ ನರೇಗಲ್, ಶ್ರೀಮತಿ ಸುಜಾತಾ ಹಡಗಲಿ, ಶ್ರೀಮತಿ ಜಯಶ್ರೀ ಪಾಟೀಲ, ಶ್ರೀಮತಿ ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ ಮುಂತಾದವರು ಉಪಸ್ಥಿತರಿದ್ದರು. ಸಾಹಿತ್ಯ ಆಸಕ್ತರು ಹಾಗೂ ಮಾಲಿಪಾಟೀಲ ಹಾಗೂ ಹುಲಗೂರ ಅವರ ಅಭಿಮಾನಿಗಳು ಬಳಗದವರು, ಕುಟುಂಬದ ಸದಸ್ಯರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

  • Related Posts

    ಸಿಟಿ ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವುದೇ ನಿರ್ಧಾರಕ್ಕೆ ಬರುವುದು ತಪ್ಪು- ಸಂಸದ ಬಸವರಾಜ ಬೊಮ್ಮಾಯಿ

    ರಾಜ್ಯದಲ್ಲಿ ಪೊಲೀಸ್ ದುರ್ಬಳಕೆ ಹೆಚ್ಚಾಗುತ್ತಿದೆ ಬಸವರಾಜ ಬೊಮ್ಮಾಯಿ ನವದೆಹಲಿ  ಡಿ.21 : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರು ಸದನದಲ್ಲಿ ಅವಾಚ್ಯವಾಗಿ ಹೇಳಿಕೆ ನೀಡಿದ್ದಾರೊ ಇಲ್ಲವೊ ಎಂಬುದರ ಸತ್ಯಶೋಧನೆ ಆಗಬೇಕು. ತನಿಖೆ ಆಗಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ…

    ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಕಂಪ್ಯೂಟರ್ ಶಿಕ್ಷಣ ಬೋಧಿಸಲು ಅತಿಥಿ ಶಿಕ್ಷರರ ಹುದ್ದೆಗೆ ಅರ್ಜಿ ಆಹ್ವಾನ

    ಧಾರವಾಡ ಡಿ.೨೧ :  2024-25 ನೇ ಸಾಲಿನಲ್ಲಿ ಧಾರವಾಡ ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಹುಬ್ಬಳ್ಳಿ ಅಂಚಟಗೇರಿಯ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣ ಬೋಧಿಸಲು ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಡಿಸೆಂಬರ…

    RSS
    Follow by Email
    Telegram
    WhatsApp
    URL has been copied successfully!