ಧಾರವಾಡ 05 : ‘ಅರಣ್ಯ ನಾಶದಿಂದ ಮನುಕುಲ ಉಳಿವಿಗೆ ಪ್ರತಿಯೊಬ್ಬ ವ್ಯಕ್ತಿ ಅರಣ್ಯ ಸಂರಕ್ಷಣೆ ಜೊತೆಗೆ ಹೆಚ್ಚೆಚ್ಚು ಸಸಿಗಳು ಬೆಳೆಸುವಂತೆ’ ಮರಾಠ ವಿದ್ಯಾ ಪ್ರಸಾರಕ ಮಂಡಳದ ಕಾರ್ಯಾಧ್ಯಕ್ಷ ಸುಭಾಸ ಶಿಂಧೆ ಕಿವಿಮಾತು ಹೇಳಿದರು.

ನಗರದ ಮರಾಠ ವಿದ್ಯಾ ಪ್ರಸಾರಕ ಮಂಡಳದ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ ಹಾಗೂ ಎನ್ನೆಸ್ಸೆಸ್ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಜನ್ಮದಿನ, ಶುಭ ಸಮಾರಂಭದ ಸಂಕೇತವಾಗಿ ಸಸಿಗಳನ್ನು ನಡೆಸಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಮಾತನಾಡಿ, ‘ಅರಣ್ಯ ನಾಶದಿಂದ ಓಝೋನ್ ಪದರಲ್ಲಿ ರಂಧ್ರಗಳು ಕಾಣಿಸಿಕೊಂಡು, ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಹೆಚ್ಚೆಚ್ಚು ಮರಗಳು ನಡೆಲು ಕರೆ’ ನೀಡಿದರು.

ಪದವಿ ಕಾಲೇಜು ಸುಧಾರಣಾ ಸಮಿತಿಯ ಅಧ್ಯಕ್ಷ ಶಿವಾಜಿ ಸೂರ್ಯವಂಶಿ, ‘ಪರಿಸರ ದಿನಾಚರಣೆ ಜೂನ್ ೫ಕ್ಕೆ ಸೀಮಿತಗೊಳ್ಳದೆ, ನಿತ್ಯವೂ ಮರಗಳು ನೆಟ್ಟು, ಪೋಷಣೆ ಮಾಡುವ ಮೂಲಕ ದಿನಾಚರಣೆ ಆಚರಿಸಬೇಕು’ ಎಂದು ಹೇಳಿದರು.

ನಂತರ ಮಂಡಳ ಆವರಣದಿಂದ ಆರಂಭಗೊಂಡ ಜಾಗೃತಿ ಜಾಥಾ ಜಿಲ್ಲಾಸ್ಪತ್ರೆ ರಸ್ತೆ, ಶಿವಾಜಿ ವೃತ್ತದ ಮಾರ್ಗವಾಗಿ ಸಂಚರಿಸಿತು. ಈ ಜಾಥಾದಲ್ಲಿ ಮಕ್ಕಳು ಪರಿಸರ ಜಾಗೃತಿ ಘೋಷಣೆ ಕೂಗಿದರು. ಜಾಥಾ ಪುನಃ ಕಾಲೇಜಿನಲ್ಲಿ ಸಂಪನ್ನಗೊಂಡಿತು.

ಈ ಮೊದಲು ಮಂಡಳದ ಆವರಣದಲ್ಲಿ ಸಸಿಗಳು ನಡೆಸಲಾಯಿತು. ಮರಾಠ ಮಂಡಳದ ನಿರ್ದೇಶಕರಾದ ಈಶ್ವರ ಪಾಟೀಲ, ಅನಿಲಕುಮಾರ ಬೋಸ್ಲೆ, ಪುರುಷೋತ್ತಮ ಜಾಧವ, ಪ್ರಾಚಾರ್ಯರಾದ ಎಂ.ಎಸ್.ಗಾಣಿಗೇರ, ಎಸ್.ಎಂ.ಸಂಕೋಜಿ, ಎಂ.ಎಂ. ಘಾಟಗೆ, ಸಿ.ಪಿ.ಮಾಳೇಕರ, ಸವಿತಾ ಮುಳಿಕನವರ, ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.