ಧಾರವಾಡದ ಓಲ್ಡ್ ಎಸ್ ಪಿ ಸರ್ಕಲ್ ಶಾಖೆಯ  ಕೆನರಾ ಬ್ಯಾಂಕ್ ನಲ್ಲಿ ಉಂಟಾಗುತ್ತಿರುವ ಗ್ರಾಹಕರ ಸೇವಾ ನ್ಯೂನ್ಯತೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಬೆಳಗಾವಿ ವಿಭಾಗೀಯ ಅಧ್ಯಕ್ಷ ಪಾಪು ಧಾರೆ ಮುಖಂಡತ್ವದಲ್ಲಿ ಶಾಖಾ
ವ್ಯವಸ್ಥಾಪಕರಿಗೆ ದೂರು ಪತ್ರ ನೀಡಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಪಾಪು ಧಾರೆ
ಧಾರವಾಡದ ಪೂನಾ-ಬೆಂಗಳೂರು ರಸ್ತೆಯಲ್ಲಿನ ಓಲ್ಡ್ ಎಸ್ ಪಿ ಸರ್ಕಲ್ ಕೆನರಾ ಬ್ಯಾಂಕ್ ಶಾಖೆಯಲ್ಲಿ ಬ್ಯಾಂಕ್ ಗ್ರಾಹಕರಿಗೆ ನೀಡಬೇಕಾದ ಸೇವಾ ಸೌಲಭ್ಯಗಳಲ್ಲಿ ಸಾಕಷ್ಟು ನ್ಯೂನ್ಯತೆಗಳು ಕಂಡು ಬಂದಿರುತ್ತವೆ ಇವುಗಳಲ್ಲಿ ಮುಖ್ಯವಾಗಿ


ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಸಾಕಷ್ಟು ಸಿಬ್ಬಂದಿಗಳಿಗೆ ಕರ್ನಾಟಕದ ಆಡಳಿತ ಭಾಷೆಯಾದ ಕನ್ನಡ ಭಾಷೆ ಓದಲು ಬರಿಯಲು ಹಾಗೂ ಮಾತನಾಡಲು ಬರುವುದೇ ಇಲ್ಲ
ಈ ಕೆನರಾ ಬ್ಯಾಂಕಿಗೆ ಬರುವ ಸಾಕಷ್ಟು ಸಂಖ್ಯೆಯ ಸ್ಥಳೀಯ ರೈತರು ಹಿರಿಯ ನಾಗರಿಕರು ಅವಿದ್ಯಾವಂತ ಗ್ರಾಹಕ ಜನರಿಗೆ ಕನ್ನಡ ಭಾಷೆ ಬಿಟ್ಟರೆ ಬೇರೆ ಯಾವ ಭಾಷೆಯು ಬರುವುದಿಲ್ಲ ಈ ರೀತಿ ಬಂದಂತಹ ಬ್ಯಾಂಕಿನ ಗ್ರಾಹಕರಿಗೆ ಅವರಿಗೆ ಅರ್ಥವಾಗಲಾರದ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ವ್ಯವಹರಿಸಲು ಸಿಬ್ಬಂದಿ ಮುಂದಾಗುತ್ತಾರೆ ಇದರಿಂದಾಗಿ ಸ್ಥಳೀಯ ಬ್ಯಾಂಕ್ ಗ್ರಾಹಕರಿಗೆ ಭಾಷಾ ತೊಂದರೆ ಉಂಟಾಗುತ್ತದೆ
ಈ ಭಾಷಾ ಸಂಹವನ ತೊಂದರೆ ಉಂಟಾಗಿ ಬ್ಯಾಂಕ್ ಗ್ರಾಹಕರಿಗೆ ಕಿರಿಕಿರಿ ಉಂಟಾಗುತ್ತದೆ
ಈ ಕಾರಣಕ್ಕೆ ತಾವುಗಳು ಕನ್ನಡ ಓದು ಬರಹ ಬಲ್ಲಂತಹ ಸಿಬ್ಬಂದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರಿಗೆ ಸೇವೆ ನೀಡಲು ನಿಯೋಜಿಸಿಕೊಳ್ಳಬೇಕು ಅಂದರು
ಬ್ಯಾಂಕಿನ ಹಿರಿಯ ವಯಸ್ಸಿನ ಗ್ರಾಹಕರ ಸೇವಾ ಅನುಕೂಲಕ್ಕಾಗಿ ಹಾಗೂ ಮಾಹಿತಿಗಾಗಿ ಹಿರಿಯ ಬ್ಯಾಂಕ್ ಗ್ರಾಹಕರ ಸಹಾಯ ಕೇಂದ್ರ ಇರುವುದಿಲ್ಲ ಇದರಿಂದಾಗಿ ಹಿರಿಯ ಬ್ಯಾಂಕ್ ಗ್ರಾಹಕರಿಗೆ ತೊಂದರೆ ಉಂಟಾಗುತ್ತದೆ ಹಾಗೂ
ಈ ಕೆನರಾ ಬ್ಯಾಂಕ್ ಶಾಖೆ ಅತ್ಯಾಧುನಿಕ ಬ್ಯಾಂಕ್ ನಿರ್ವಹಣೆ ತಂತ್ರಜ್ಞಾನ ಅಳವಡಿಸಿಕೊಂಡಿದ್ದರೂ ಸಹ ಇದರ ಸದುಪಯೋಗವನ್ನು ಹೇಗೆ ಪಡೆದುಕೊಳ್ಳಬೇಕೆಂಬ ಸಮರ್ಪಕ ಮಾಹಿತಿ ಬ್ಯಾಂಕ ಸಿಬ್ಬಂದಿಗಳಿಗೆ ಇರದೆ ಇದ್ದದ್ದರಿಂದಾಗಿ ಗ್ರಾಹಕರಿಗೆ ನೀಡಬೇಕಾದ ತ್ವರಿತ ಸೇವೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ ಎಂದು ದೂರಿದರು
ಬ್ಯಾಂಕಿಗೆ ಬರುವ ಬ್ಯಾಂಕ್ ಗ್ರಾಹಕರಿಗೆ ಶೌಚಾಲಯದ ಅನುಕೂಲ ಸಹ ಈ ಕೆನರಾ ಬ್ಯಾಂಕಿನಲ್ಲಿ ಇರುವುದಿಲ್ಲ
ಬ್ಯಾಂಕಿನ ಗ್ರಾಹಕರ ಸೇವಾ ಸಮಯದಲ್ಲಿ ಸಾಕಷ್ಟು ಬ್ಯಾಂಕಿನ ಸಿಬ್ಬಂದಿಗಳು ಪಕ್ಕದ ಸಿಬ್ಬಂದಿಗಳೊಂದಿಗೆ ಕಾಲ ಹರಣ ಮಾಡುತ್ತಾ ಗ್ರಾಹಕರಿಗೆ ನೀಡಬೇಕಾದ ತ್ವರಿತ ಸೇವೆಯಲ್ಲಿ ವಿನಾಕಾರಣ ವಿಳಂಬ ಮಾಡುತ್ತಿದ್ದು, ಹಾಗೂ ಕೆಲ ಸಿಬ್ಬಂದಿಗಳು ಬ್ಯಾಂಕಿನ ಗ್ರಾಹಕರಿಗೆ ಸರಿಯಾದ ಮಾಹಿತಿಯನ್ನು ನೀಡದೆ ಒಂದು ಟೇಬಲ್ ನಿಂದ ಮತ್ತೊಂದು ಟೇಬಲ್ ಗೆ ಅಲೆದಾಡಿಸುತ್ತಿದ್ದಾರೆ ಇದು ಗ್ರಾಹಕರ ಸೇವಾ ನ್ಯೂನ್ಯತೆಯಾಗಿದೆ ಎಂದರು.
ಆರ್ ಬಿ ಐ ಗ್ರಾಹಕರ ಹಕ್ಕು ಹಾಗೂ ಸೇವೆ
ಕಾನೂನಿನನ್ವಯ ಬ್ಯಾಂಕ್ ಸಿಬ್ಬಂದಿಗಳು ಮಧ್ಯಾಹ್ನದ ಊಟದ ಸಮಯದಲ್ಲಿ ಏಕಕಾಲಕ್ಕೆ ಎಲ್ಲ ಸಿಬ್ಬಂದಿಗಳು ಊಟಕ್ಕೆ ಹೋಗದೆ ಒಬ್ಬರಾದ ಮೇಲೆ ಇನ್ನೊಬ್ಬರು ಸಮಯದ ಹೊಂದಾಣಿಕೆ ಮಾಡಿಕೊಂಡು ಊಟ ಮಾಡಿಕೊಳ್ಳಬೇಕು ಈ ಊಟದ ಸಮಯದ ನೆಪವಡ್ಡಿ ಬ್ಯಾಂಕ್ ಸೇವೆಯನ್ನು ನಿಲ್ಲಿಸಿ ಗ್ರಾಹಕರಿಗೆ ಅನಾನುಕೂಲ ಮಾಡಬಾರದೆಂದು  ಆದೇಶಿಸಿದ್ದರು ಸಹ ಬಹುತೇಕ ಈ ಕೆನರಾ ಬ್ಯಾಂಕ ಶಾಖೆಯ ಸಿಬ್ಬಂದಿಗಳು ಏಕಕಾಲಕ್ಕೆ ಊಟಕ್ಕೆ ಹೋಗುವುದರ ಮೂಲಕ ಗ್ರಾಹರ ಅಮೂಲ್ಯ ಸಮಯವನ್ನು ವ್ಯರ್ಥಪಡಿಸುತ್ತಿದ್ದಾರೆಂದು ತಿಳಿಸಿದರು
ಆರ್ ಬಿ ಐ ಬ್ಯಾಂಕ್ ಕಡ್ಡಾಯವಾಗಿ ತನ್ನ ಎಲ್ಲಾ ಅಧೀನ ಬ್ಯಾಂಕುಗಳಿಗೆ ಗ್ರಾಹಕರ ಸೇವೆ ಹಾಗೂ ಅವರ ಹಕ್ಕುಗಳನ್ನು ಖಡ್ಡಾಯವಾಗಿ ಪಾಲಿಸಲೇ ಬೇಕೆಂಬ ಹಾಗೂ ವಿಶೇಷ ಚೇತನರಿಗೆ ವಿಶೇಷ ಸೌಲಭ್ಯಗಳನ್ನು ಸಹ ಒದಗಿಸಬೇಕೆಂಬ ನಿಯಮ ವಿಧಿಸಿದ್ದರೂ ಸಹ  ಅದನ್ನು ತಮ್ಮ ಬ್ಯಾಂಕ್ ಶಾಖೆ ಕಡ್ಡಾಯವಾಗಿ ಪಾಲಿಸದೆ ಆರ್ ಬಿ ಐ ಬ್ಯಾಂಕ ವಿಧಿಸಿದ ಕಾನೂನು ಪರಿಪಾಲನೆ ಪಾಲಿಸುವಲ್ಲಿ ವಿಫಲವಾಗಿದೆ
ಈ ಎಲ್ಲಾ ಗ್ರಾಹಕ ಸೇವಾ ನ್ಯೂಯತೆಗಳನ್ನು ಆರ್‌ಬಿಐ ದೂರು ದಾಖಲಿಸುವ ನಿಯಮ ದಂತೆ ಮೊಟ್ಟ ಮೊದಲನೆಯದಾಗಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ತಮ್ಮಲ್ಲಿ ದೂರನ್ನು ಸಲ್ಲಿಸುತ್ತಿದ್ದೇವೆ ತಾವುಗಳು ಈ ಮೇಲ್ಕಂಡ ವಿಷಯವಾಗಿ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ನೂರಾರು ಸಂಖ್ಯೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರುಗಳು ತಮ್ಮ ಬ್ಯಾಂಕ್ ಆವರಣದ ಮುಂದೆ ಅನಿವಾರ್ಯವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಹಾಗೂ ಗ್ರಾಹಕರ ಸೇವಾ ನ್ಯೂನ್ಯತೆ ಸರಿಪಡಿಸದ ತಮ್ಮ ಮೇಲೆಯೂ ಸಹ ಸೂಕ್ತ ಬ್ಯಾಂಕ್ ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳುವಂತೆ ಆರ್ ಬಿ ಐ ನ ಮುಖ್ಯಸ್ಥರಿಗೆ ದೂರು ಪತ್ರ ಬರೆಯಬೇಕಾಗುತ್ತದೆ ಎಂದು ಕೆನರಾ ಬ್ಯಾಂಕ್ ಶಾಖೆ ವ್ಯವಸ್ಥಾಪಕರಿಗೆ ಎಚ್ಚರಿಕೆ ನೀಡಿದರು ಇದೇ ರೀತಿಯ ಗ್ರಾಹಕರ ಸೇವಾ ನ್ಯೂನ್ಯತೆಯನ್ನು ಸಾಕಷ್ಟು ರಾಷ್ಟ್ರೀಕೃತ ಬ್ಯಾಂಕುಗಳು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದು ಇಂತಹ ಕನ್ನಡ ವಿರೋಧಿ ಹಾಗೂ ಗ್ರಾಹಕರ ಸೇವಾ ಹಕ್ಕನ್ನು ಕಡೆಗಣಿಸುತ್ತಿರುವ ಎಲ್ಲ ಬ್ಯಾಂಕುಗಳ ಮುಂದೆ ಮುಂದಿನ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ರಾಜ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಇವರ ಮುಖಂಡತ್ವದಲ್ಲಿ ತೀವ್ರ ಸ್ವರೂಪದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರರು
ಈ ಸಂದರ್ಭದಲ್ಲಿ
ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಬೆಳಗಾವಿ ವಿಭಾಗೀಯ ಅಧ್ಯಕ್ಷರಾದ ಪಾಪು ಧಾರೆ ಹಾಗೂ ಕರವೇ ಪದಾಧಿಕಾರಿಗಳಾದ ಚಂದ್ರಶೇಖರ್ ಬಿಜಾಪುರ  ಸುರೇಶ ಪಮ್ಮಾರ ಮಂಜುನಾಥ ನಿಮ್ಲಿಯಾರ  ಮಾಬುಲಿ ಶೇಕ್ ಹಾಗೂ ಇತರರು ಉಪಸ್ಥಿತರಿದ್ದರು