ಧಾರವಾಡ 27 : ನಗರದ ಖ್ಯಾತ ಜಾನಪದ ನೃತ್ಯ ಕಲಾವಿದ ಪ್ರಕಾಶ ಮಲ್ಲಿಗವಾಡ ಮಾರ್ಗದರ್ಶನದಲ್ಲಿ ರೈಸಿಂಗ ಸ್ಟಾರ್ಸ ಆರ್ಟ ಆಯ್ಯಂಡ ಕಲ್ಚರಲ್ ಅಕಾಡೆಮಿಯ ತಂಡದಿಂದ “ಭಾರತ ಸಂವಿಧಾನ”ದ ಕುರಿತ ಜಾನಪದ ನೃತ್ಯ ರೂಪಕ ಪ್ರದರ್ಶನವಾಯಿತು.
ಜಾನಪದ ನೆರಳು ತಂಡದ ಸಂತೋಷ ಸಾಲಿಯಾನ (ನೃತ್ಯ ಸಂಯೋಜನೆ) ಕಲಾವಿದರಾದ ಅಕ್ಷತಾ ದಲಾಲ್, ಪುಂಡಲೀಕ್ ಸಾಗರೆಕರ, ಅಂಜಲಿ ಬಸವಾ, ಯಶೋಧರೆ ಮಲ್ಲಿಗವಾಡ, ಬಸಯ್ಯ ಬನ್ನಿಗೋಳಮಠ, ಭಾಗ್ಯಶ್ರೀ ಗಾಳೆಮ್ಮನವರ ಹಾಗೂ ಮುಂತಾದವರು ಮನಮೋಹಕವಾಗಿ ಪ್ರಸ್ತುತಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ
ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…