
ಧಾರವಾಡ : ಅಂಬೇಡ್ಕರ್ ಅವರ ವಿಚಾರ ಮತ್ತು ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಸಿ.ಎಂ.ಡಿ.ಆರ್.ನಿರ್ದೇಶಕ ಪ್ರೊ.ಬಸವರಾಜ ಜಿರ್ಲಿ ಅಭಿಪ್ರಾಯಪಟ್ಟರು.
ಅವರು ಧಾರವಾಡದ ಬಹುಶಿಸ್ತೀಯ ಅಭಿವೃದ್ಧಿ (ಸಿ.ಎಂ.ಡಿ.ಅರ್) ಸಂಶೋಧನಾ ಕೇಂದ್ರವು ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆಯ ಅಂಗವಾಗಿ ಸ್ಥಳದಲ್ಲೇ ಚಿತ್ರ ಕಲೆ ಬಿಡಿಸುವ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂವಿಧಾನಕ್ಕೆ ಮತ್ತು ಭಾರತದ ಅಭಿವೃದ್ಧಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಪಾರವಾಗಿದ್ದು, ಎಂದ ಅವರು ಅಂಬೇಡ್ಕರ್ ಅವರು ಜಯಂತಿ ಅಂಗವಾಗಿ “ಆನ್ ದಿ ಸ್ಪಾಟ್ ಚಿತ್ರಕಲಾ ಸ್ಪರ್ಧೆ”, ಏರ್ಪಡಿಸಿದ್ದು ಇದರಲ್ಲಿ 50 ಕ್ಕೂ ಹೆಚ್ಚು ವ್ಯಕ್ತಿಗಳು ಉತ್ಸಾಹದಿಂದ ಭಾಗವಹಿಸಿದ್ದು ಸಂತಸದ ಸಂಗತಿ ತಂದಿದೆ ಎಂದ ಅವರು ಈ ಚಿತ್ರಕಲಾ ಸ್ಪರ್ಧೆಯಲ್ಲಿ ಕೊಪ್ಪಳ, ಗದಗ, ಬೆಳಗಾವಿ, ಶಿರಸಿ, ಹಾನಗಲ್ ಮತ್ತು ಹುಬ್ಬಳ್ಳಿ-ಧಾರವಾಡದ 19 ವಿವಿಧ ಕಾಲೇಜುಗಳಿಂದ ಸ್ಪರ್ಧಿಗಳು ‘ಆನ್ ದಿ ಸ್ಪಾಟ್ ಚಿತ್ರಕಲಾ ಸ್ಪರ್ಧೆ’ಯಲ್ಲಿ ‘ಅಂಬೇಡ್ಕರ್ ಅವರು ಕಂಡಂತೆ ಭಾರತದ ಕನಸು’ ಮತ್ತು ‘ವಿಕಾಸ ಭಾರತ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೃಷ್ಟಿಕೋನ’ ಎಂಬ ವಿಷಯದ ಮೇಲೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.
ಖ್ಯಾತ ಹಿರಿಯ ಕಲಾವಿದ ಬಿ.ಮಾರುತಿ ಮಾತನಾಡಿ ಡಾ.ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ನೀಡಿದ್ದು ಈ ಸಂದರ್ಭದಲ್ಲಿ ಅವರ ವಿಚಾರಗಳನ್ನು ಪ್ರತಿಬಿಂಬಿಸಲು ಚಿತ್ರಕಲಾ ಸ್ಪರ್ಧೆ ಬಹಳ ಪ್ರಸ್ತುತವಾಗಿವವೆ. ಪ್ರತಿಯೊಂದು ಕ್ಷೇತ್ರದಲ್ಲೂ ಕಲೆಗೆ ತನ್ನದೇ ಆದ ಪಾತ್ರವಿದೆ ಮತ್ತು ಉತ್ತಮ ಭವಿಷ್ಯವೂ ಇದೆ ಎಂದರು.
ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರು :
ಶಿವರಾಜ ಕೆ.ಪೂಜಾರಿ ಅವರ ಅಸಾಧಾರಣ ಕಲಾತ್ಮಕ ಚಿತ್ರಕಲೆಗೆ 5000 ಪ್ರಥಮ ಬಹುಮಾನ ಪಡೆದರು.
ಮಂಜುಶ್ರೀ ಗಾವಡೆ 3000 ದ್ವಿತೀಯ ನಗದು ಬಹುಮಾನ ಪಡೆದರು. ತೃತೀಯ ಬಹುಮಾನವನ್ನು ಆನಂದ ಇಮಡೆನ್ನವರ್ ಅವರು 2000 ರೂಪಾಯಿ ನಗದು ಸಬಾ ಪರ್ವೆನ್ ಪೀರ್ಜಾದೆ, ರಾಧಿಕಾ ಎನ್. ವಿಜೇತಾ ವಿ.ಪ್ರಭು ಅವರು 500 ರೂಪಾಯಿ ನಗದು ಸಮಾಧಾನಕರ ಬಹುಮಾನಗಳನ್ನು ಪಡೆದರು.
ಈ ಸಂದರ್ಭದಲ್ಲಿ ಸಿಎಂಡಿಆರ್ ಬೋಧಕರು,ಸಿಬ್ಬಂದಿ ವರ್ಗದವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಲಾವಿದರಾದ ಬಿ.ಮಾರುತಿ ಎಫ್.ವಿ.ಚಿಕ್ಕಮಠ ಚಿತ್ರಕಲಾ ಸ್ಪರ್ಧೆಯ ನಿರ್ಣಾಯಕರಾಗಿದರು.
ಈ ಸಂದರ್ಭದಲ್ಲಿ ಸಿ.ಎಂ.ಡಿ.ಆರ್ ಸಂಸ್ಥೆಯ ಪ್ರೊ.ನಯನತಾರಾ ನಾಯಕ್, ಪ್ರೊ.ಟಿ.ಬ್ರಹ್ಮಾನಂದಂ, ಡಾ.ಎ.ಆರ್.ಕುಲಕರ್ಣಿ, ಡಾ.ಜೈ ಪ್ರಭಾಕರ್ ಎಸ್.ಸಿ., ಡಾ.ಪ್ರತೀಕ್ ಮಾಳಿ, ಡಾ.ದುಂಡಪ್ಪ ವೈ.ಬಿ., ಡಾ.ಡಿ.ಆರ್.ರೇವಣ್ಕರ್ ಹಾಗೂ ಸಿಎಂಡಿಆರ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.