11 ರಂದು ನಿಧಿ ದೇಶಪಾಂಡೆ.

ಗುರುವಂದನಾ ಹಾಗೂ ನೃತ್ಯಾರ್ಪಣೆ ಕಾರ್ಯಕ್ರಮ. ಧಾರವಾಡ 09 : ಉಪಾಧ್ಯೆ ನೃತ್ಯವಿಹಾರ ಧಾರವಾಡ ಇವರ ಆಶ್ರಯದಲ್ಲಿ ಗುರುವಂದನಾ ಹಾಗೂ ನೃತ್ಯಾರ್ಪಣೆ ಯನ್ನು ಇದೆ ಬರುವ ದಿನಾಂಕ 11 ಶನಿವಾರ ಸಂಜೆ 5.30 ಗಂಟೆಗೆ ಸೃಜನಾ ರಂಗಮಂದಿರ ಧಾರವಾಡದಲ್ಲಿ ವಿದುಷಿ ಕುಮಾರಿ. ನಿಧಿ ಜಿ. ದೇಶಪಾಂಡೆ ರವರು ನಡೆಸಿಕೊಡುವರು.
ವಿದುಷಿ ಪ್ರಮೋದಾ ಎನ್.ಉಪಾಧ್ಯಾಯ ರವರ ನೇತೃತ್ವದಲ್ಲಿ ಈ ನೃತ್ಯಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಸ್ನೇಹಾ ಜಿ. ದೇಶಪಾಂಡೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾಟ್ಯಾಚಾರ್ಯ ಪ್ರೊ. ಕೆ.ರಾಮಮೂರ್ತಿರಾವ್ ಮೈಸೂರು ಅಧ್ಯಕ್ಷತೆ ವಹಿಸಲಿದ್ದು, ಡಾ. ಸರ್ವಮಂಗಳಾ ದೇವರಾಜು ಉದ್ಘಾಟಿಸಲಿದ್ದಾರೆ, ಮುಖ್ಯ ಅಥಿತಿಗಳಾಗಿ ಅನಂತ ಪದ್ಮನಾಭ ಐತಾಳ ಹಾಗೂ ವರ್ಷಾ ಮನೋಜ ಹಂಚಿನಮನಿ ವಹಿಸಲಿದ್ದಾರೆ. ಅಂದು ವಿಶೇಷವಾಗಿ ವಿದುಷಿ ಪ್ರಮೋದಾ ನಟರಾಜ ಉಪಾಧ್ಯಾಯರವರಿಗೆ ಗುರುವಂದನೆಯನ್ನು ನಿಧಿ ಜಿ ದೇಶಪಾಂಡೆ ರವರು ಮಾಡುವರು. ನಂತರದಲ್ಲಿ ಕುಮಾರಿ ನಿಧಿ ಜಿ ದೇಶಪಾಂಡೆ ಇವರಿಂದ ಪುಷ್ಪಾಂಜಲಿ, ಆಲಾರಿಪು, ಜತಿಸ್ವರ, ದೇವಿ ಕೌತುವಂ, ಪದವರ್ಣ, ಜಾವಳಿ, ಕೀರ್ತನೆ ಕೊನೆಯಲ್ಲಿ ತಿಲ್ಲಾನ ನೃತ್ಯ ಗಳು ಪ್ರದರ್ಶನ ಗೊಳ್ಳಲಿದೆ.

ಹಿಮ್ಮೇಳದಲ್ಲಿ ನಟುವಾಂಗ ವಿದುಷಿ ಪ್ರಮೋದಾ ಉಪಾಧ್ಯಾಯ, ಹಾಡುಗಾರಿಕೆ ವಿದ್ವಾನ್ ರಘುರಾಮ ರಾಜಗೋಪಾಲನ ಬೆಂಗಳೂರು, ಮೃದಂಗ ವಿದ್ವಾನ್ ಪಂಚಮ ಉಪಾಧ್ಯಾಯ ಧಾರವಾಡ, ವಾಯೊಲಿನ್ ವಿದ್ವಾನ ಮಧುಸೂಧನ ಬೆಂಗಳೂರು, ವೇಣುವಾದನ ವಿದ್ವಾನ್ ದೀಪಕ ಹೆಬ್ಬಾರ ಬೆಂಗಳೂರು, ರಿದಂ ಪ್ಯಾಡ್ ವಿದ್ವಾನ್ ಲಕ್ಷ್ಮೀ ನಾರಾಯಣ ಜಿ. ಬೆಂಗಳೂರು ಮಾಡಲಿದ್ದು ಪ್ರಸಾಧನ ಸಂತೋಷ ಗಜಾನನ ಮಹಾಲೆ, ನಿರೂಪಣೆ ಮಾಯಾರಾಮನ ಧಾರವಾಡ ಮಾಡುವರು ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿ ಯಲ್ಲಿ ವಿದುಷಿ ಪ್ರಮೋದಾ ಉಪಾಧ್ಯಾಯ, ಸ್ನೇಹಾ ದೇಶಪಾಂಡೆ, ಶ್ರೇಯಾ ದೇಶಪಾಂಡೆ, ಮಾಯಾ ರಾಮನ್ ಹಾಗೂ ಸಂತೋಷ ಗಜಾನನ ಮಹಾಲೆ ಉಪಸ್ಥಿತರಿದ್ದರು.

ವಿದುಷಿ ಕುಮಾರಿ ನಿಧಿ ಜಿ. ದೇಶಪಾಂಡೆ ಕಿರು ಪರಿಚಯ

ಹಿರಿಯಕ್ಕ, ಸಣ್ಣವರಿಗೆ ಮಾದರಿಯಾಗುವುದು ಸಹಜ ಅದರ ಜೊತೆಗೆ ಹಿರಿಯಕ್ಕ ಅರಸಿಹೋದ ಕಲೆಗಳು, ಕಿರಿಯರನ್ನು ಆಕರ್ಷಿಸುತ್ತವೆ. ಅದೇರೀತಿ ಅಕ್ಕ ಶ್ರೇಯಾಳ ನೃತ್ಯ, ಸಂಗೀತ ಪ್ರೀತಿ, ಕುಮಾರಿ ನಿಧಿಗೆ ತನ್ನತ್ತ ಸೆಳೆಯಿತು, ಅಕ್ಕನ ಭರತನಾಟ್ಯದಿಂದ ಕಣ್ತುಂಬಿಕೊಂಡು ತಾಯಿ ಸ್ನೇಹಾ ಮತ್ತು ಅಕ್ಕ ಶ್ರೇಯಾ, ನಿಧಿಯ ನೃತ್ಯದಾಸೆಗೆ ತರಬೇತಿಯ ಧಾರೆ ಎರೆದು ಅವಳನ್ನು ಕಲಾವಿದೆಯಾಗಿ ರೂಪಿಸಿದ್ದಲ್ಲದೆ, ಗುರು ವಿದುಷಿ ಪ್ರಮೋದಾ ನಟರಾಜ ಉಪಾಧ್ಯಾಯ ಅವರ ನೃತ್ಯ ಕಲೆ ಇವಳನ್ನು ನಿಧಿ ಎಂಟು ವರ್ಷದಲ್ಲಿರುವಾಗಲೇ ನೃತ್ಯಾಭಾಸ ಹೇಳಲು ಪ್ರಾರಂಭಿಸಿ ನಿಧಿಯ ಹನ್ನೊಂದು ವರ್ಷಗಳ ನಿರಂತರ ತಪಸ್ಸಿನಲ್ಲಿ ನೃತ್ಯಧಾರೆ ಎರೆದವರು.

ಈಗಾಗಲೇ ನಿಧಿ ಭರತನಾಟ್ಯ ಜೂನಿಯರ್, ಸೀನಿಯರ್, ವಿದ್ವತ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ ಹೊಂದಿದ್ದಾರೆ. ಅದರಂತೆ ಕರ್ನಾಟಕ ಸಂಗೀತ, ಜೂನಿಯರ್, ಅಖಿಲ ಭಾರತ ಗಂಧರ್ವ ಮಹಾವಿದ್ಯಾಲ್ಯದವರು ಏರ್ಪಡಿಸುವ ಅಲಂಕಾರ ಪರೀಕ್ಷೆಯಲ್ಲೂ ಯಶಸ್ವಿಯಾಗಿ ಉತ್ತೀರ್ಣ ಹೊಂದಿದ್ದಾಳೆ, ಅಷ್ಟೇ ಅಲ್ಲದೆ ಸಿತಾರ್ ನುಡಿಸುವಲ್ಲಿ ಪ್ರಾವಿಣ್ಯತೆ ಪಡೆದಿದ್ದು, ಅಜಂತಾ ಪ್ರತಿಭೆ, ನಾಧಶ್ರೀ, ನಾಟೈಶ್ರೀ. ಬಿರುದು ಪುರಸ್ಕಾರಗಳನ್ನು ಪಡೆದಿದ್ದಾಳೆ .

ಹಂಪಿ, ಆಳ್ವಾಸ್ ನುಡಿಸಿರಿ, ಚಂದನ, ತಿರುಪತಿ, ಪುಣೆಯ ನೃತ್ಯ ಭಾರತ, ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ನೃತ್ಯ ಕಾರ್ಯಕ್ರಮ ನೀಡಿದ್ದಾಳೆ. ಪ್ರಾಥಮಿಕ ಪ್ರೌಡ ಶಿಕ್ಷಣವನ್ನು ಧಾರವಾಡದ ಬಾಸೆಲ್ ಮಿಶನ್ ಶಾಲೆಯಲ್ಲಿ ವಿಧ್ಯಾಬ್ಯಾಸ ಮಾಡಿ ಜೆ. ಎಸ್ ಎಸ್. ಕಾಲೇಜ್ ನಲ್ಲಿ ಪಿಯುಸಿ ನಂತರ ಸಿಎಸ್ಐ ಕಾಲೇಜ್ ನಲ್ಲಿ ಬಿ.ಕಾಂ.ಮೂರನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ನೃತ್ಯ ಸಂಗೀತದ ಜೊತೆಗೆ ಭಾಷಣ, ಚರ್ಚೆಗಳಲ್ಲಿ ಆಸಕ್ತಿ ಹೊಂದಿ ಸಾರ್ಥಕ ಕ್ಷಣಗಳನ್ನು ಪಡೆದುಕೊಂಡ ನಿಧಿ ದೇಶಪಾಂಡೆ ನಿಜಕ್ಕೂ ತಂದೆ ದಿವಂಗತ ಗೋಪಾಲ ದೇಶಪಾಂಡೆ ಅವರ ಆಶೀರ್ವಾದ ಹಾಗೂ ತಾಯಿ ಸ್ನೇಹಾ ದೇಶಪಾಂಡೆ ಹಾಕಿಕೊಂಡ ದಾರಿ ಪ್ರೇರಣೆ ಸ್ಪೂರ್ತಿ ಎನ್ನುತ್ತಾರೆ.