ಧಾರವಾಡದ ಉಡುಪಿ ಓಣಿಯಲ್ಲಿ ನೂತನ ಅಂಗನವಾಡಿ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ : ಶಿವಲೀಲಾ ವಿನಯ್ ಕುಲಕರ್ಣಿ

Mrs. Shivalila Vinay Kulkarni performed the Bhoomi Puja for the new Anganwadi building at Udupi Oni, Dharwad.

ಧಾರವಾಡ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್ ನಂಬರ್ 8ರ ಉಡುಪಿ ಓಣಿಯಲ್ಲಿ 15ನೇ ಹಣಕಾಸು ಆಯೋಗದ ಅನುದಾನದಡಿ ನಿರ್ಮಿಸಲು ಉದ್ದೇಶಿಸಿರುವ ನೂತನ ಅಂಗನವಾಡಿ ಕಟ್ಟಡದ ಕಾಮಗಾರಿಗೆ ಕರ್ನಾಟಕ ರಾಜ್ಯ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾದ  ಶಿವಲೀಲಾ ವಿನಯ್ ಕುಲಕರ್ಣಿ ಅವರು ಇಂದು ಭೂಮಿ ಪೂಜೆ ನೆರವೇರಿಸಿದರು.

ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು “ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಂಗನವಾಡಿಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳಿಗೆ ಪೌಷ್ಟಿಕ ಆಹಾರದ ಜೊತೆಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವುದು ನಮ್ಮ ಸರ್ಕಾರದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ 15ನೇ ಹಣಕಾಸು ಯೋಜನೆಯಡಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ” ಎಂದು ತಿಳಿಸಿದರು.

ಪ್ರಮುಖ ಮುಖ್ಯಾಂಶಗಳು :

* ಅನುದಾನ: 15ನೇ ಹಣಕಾಸು ಆಯೋಗದ ವತಿಯಿಂದ ಈ ಕಟ್ಟಡಕ್ಕೆ ಹಣ ಬಿಡುಗಡೆ ಮಾಡಲಾಗಿದೆ.
* ಗುಣಮಟ್ಟದ ಭರವಸೆ: ಕಾಮಗಾರಿಯನ್ನು ಅತ್ಯಂತ ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
* ಸ್ಥಳೀಯರ ಸಹಕಾರ: ವಾರ್ಡ್‌ನ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಇದೆ ಸಂದರ್ಭದಲ್ಲಿ ವಾರ್ಡ್ 4 ರ ವ್ಯಾಪ್ತಿಯಲ್ಲಿ, ರಸ್ತೆ ಕಾಮಗಾರಿಗಳಿಗೆ ಹಾಗೂ ಕೃಷಿ ಮಾರುಕಟ್ಟೆಯ ಮುಂದೆ ಇರುವ ಹೈ ಮಾಸ್ಕ್ ದೀಪ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ, ಪ್ರಕಾಶ ಘಾಟಗೆ,ರಾಜಶೇಖರ್ ಕಮತಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ, ಬಸವಂತಪ್ಪ ಮಾಲನವರ, ಬಸವರಾಜ ಸೋಗಿ, ಭಾಸ್ಕರ,ಶಿವಾಜಿ ಘಾಟ ಟಗೆ, ಶೌಕತ ಮುತವಲ್ಲಿ, ನಾರಾಯಣ ಸುಳ್ಳದ, ಅಮೀನ್ ಸಂಗೊಳ್ಳಿ, ಚಂದ್ರು ಕಡಾಡೇ, ಸೇರಿದಂತೆ ಜಿರಲಿ ಪ್ಲಾಟ್, ಉಡುಪಿ ಓಣಿ, ವಾಲ್ಮೀಕಿ ಓಣಿ,ಹಿರಿಯ ಮುಖಂಡರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಓಣಿಯ ಸಾರ್ವಜನಿಕರು ಉಪಸ್ಥಿತರಿದ್ದರು.