ನಗರ ಪ್ರದೇಶಗಳಲ್ಲಿ ಸಿತಮಿತವಾಗಿದ್ದ ಡಿಜಿಟಲ್ ಗ್ರಂಥಾಲಯ ಕಲ್ಪನೆಯನ್ನು ಬಹಳ ದಿನಗಳ ಹಿಂದೆಯೆ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿದ್ದಾರೆ ಕೆಲವೆಡೆ ಹೆಸರಿಗೆ ಮಾತ್ರ ಗ್ರಂಥಾಲಯ ಎಂಬಂತಾಗಿದೆ ಆದರೆ ಈ ಗ್ರಾಮ ದ ಗ್ರಂಥಾಲಯ ವಿದ್ಯಾರ್ಥಿಗಳಲ್ಲಿ ಓದಿದ ಆಸಕ್ತಿ ಹೆಚ್ಚಿಸಿ ಮತ್ತು ಪ್ರತಿ ಶನಿವಾರ ಮತ್ತು ಭಾನುವಾರ ಮಕ್ಕಳಿಗೆ ವೇದಿಕೆ ಕಾರ್ಯಕ್ರಮ ಹಲವಾರು ಯೂಟ್ಯೂಬ್ ತರಬೇತಿ ಕಾರ್ಯಕ್ರಮ ನಡೆಸುತ್ತಾ ಮಾದರಿಯಾಗಿದೆ ಗ್ರಂಥಾಲಯ ಆವರಣದಲ್ಲಿ ಉದ್ಯಾನವನ ಮಾಡಿ ಓದುಗರ ಅಸನ್ ವ್ಯವಸ್ಥೆ ಕಲ್ಪಿಸುವ ಗುರಿಹೊಂದಿದೆ.

Model Awareness Center Hebballi

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಇದಿಗ ಗ್ರಾಮವೆ ಮೆಚ್ಚುವಂತೆ ಕಾರ್ಯ ಮಾಡುತ್ತಿದೆ ಆರಂಭದಲ್ಲಿ ಮಕ್ಕಳು ಓದಲು ನಿರಾಸಕ್ತಿ ವಹಿದ್ದು ಒಂದೆಡೆಯಾದರೆ ಪುಸ್ತಕಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಓದುವ ಹವ್ಯಸ ಕಡಿಮೆಯಾಗುತ್ತಿತ್ತು ಬಳಿಕ ಗ್ರಾಮ ಪಂಚಾಯಿತಿ ಅಧ್ಯಕ್ಷರು/ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಾಧ್ಯಕ್ಷರು ಸದಸ್ಯರು ಜೊತೆಗೆ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಸಹ ಮಕ್ಕಳಲ್ಲಿ ಓದು ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಗ್ರಂಥಾಲಯಕ್ಕೆ ಹೊಸ ಸ್ಪರ್ಶ ನೀಡಿದರು ಈ ಕಾರ್ಯ ಯಶಸ್ಸು ಕಾಣುತ್ತಿದೆ ನಿತ್ಯ ಬೆಳಿಗ್ಗೆ ಕಾರ್ಯ ನಿರ್ವಹಿಸುತಿದೆ ಗ್ರಂಥಾಲಯ ಪ್ರತಿ ಸೋಮವಾರ 2ನೇ ಮತ್ತು 4ನೇ ಮಂಗಳವಾರ ರಜೆ ಇರಲಿದ್ದು ಅಂದು ಕೂಡಾ ಓದುಗರಿಗೆ ಅನುವು ಮಾಡಿದೆ ಸಾಹಿತ್ಯ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಹಲವಾರು ಪುಸ್ತಕಗಳು ನಿಯತಕಾಲಿಕೆ
ಕಂಪ್ಯೂಟರ್ ಟಿವಿ 4 ಟ್ಯಾಬ್ ಪುರಕವಾದ ವಾತಾವರಣ ಕಲ್ಪಿಸಲಾಗಿದೆ

ಗ್ರಾಮ ಪಂಚಾಯಿತಿ ಅಧ್ಯಕ್ಷರು

 

Model Awareness Center Hebballi

ಶ್ರೀ ವಿಠ್ಠಲ ಎಸ್ ಬೋವಿ
ಈಗ ಸದ್ಯ ಇರುವ 2 ಕಂಪ್ಯುಟರ್ ಜೋತೆಗೆ 2 ಕಂಪ್ಯುಟರ್ ತರಲು ಗ್ರಾಮ ಪಂಚಾಯಿತಿ ಅನುಮೊದಿಸಲಾಗೆದೆ ಹಲವಾರು ದಾಣಿಗಳಿಂದ ಮಕ್ಕಳ ಆಟಿಕೆಗಳು ಸಂಗ್ರಹಿಸಲಾಗುತ್ತಿದೆ ಗ್ರಂಥಾಲಯದಲ್ಲಿ ಮಕ್ಕಳಿಗೆ ವೇದಿಕೆ ಧೈರ್ಯ ತುಂಬು ಸಲವಾಗಿ ಬ್ಲೂಟೂತ್ ಸ್ಪೀಕರ್ ಮತ್ತು ಅರಿವು ಕೇಂದ್ರ ಕ್ಕೆ ಮುಲಬುತ ಸೌಕರ್ಯ ಒದಗಿಸಲಾಗಿದೆ ನಮ್ಮ ಆಡಳಿತ ಮಂಡಳಿ ಶಿಕ್ಷಣಕ್ಕೆ ತುಂಬಾ ಒತ್ತು ನೀಡುತ್ತಿದೆ ಎಂದರು

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಶ್ರೀ ಬಸವರಾಜ್ ಮದನಬಾವಿ

ಈಗ ಸದ್ಯ ನಮ್ಮ ಅರಿವು ಕೇಂದ್ರದಲ್ಲಿ 3000 ಹೆಚ್ಚು ಓದುಗರು ನೊಂದಣಿಯಾಗಿದ್ದು 4000ಕ್ಕೂ ಅದಕ್ಕೂ ಪುಸ್ತಕಗಳು ಇವೆ. ಈಗ ಇರುವ ಎರಡು ಕಂಪ್ಯೂಟರ್ ಜೊತೆಗೆ ಇನ್ನೆರಡು ಕಂಪ್ಯೂಟರ್ ಇಂಟರ್ನೆಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಮುತ್ತು ನಮ್ಮ ಗ್ರಂಥಪಾಲಕರಿಗೆ ಸರಿಯಾಗಿ ಕಾಲ ಕಲಕ್ಕೆ ತರಬೇತಿಯನ್ನು ನೀಡಿ ಮಕ್ಕಳಸ್ನೇಹಿ ಗ್ರಂಥಾಲಯ ಮಾಡಿ ಸರ್ಕಾರದ ನಿಡುವ ವಿವಿದ ಚಟುವಟಿಕೆ ಮಾಡುತ್ತೆ ವೆ ಎಂದರು

ಸ್ಪರ್ಧಾತ್ಮಕವು ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿನಿ ಕುಮಾರಿ ಅನಿತಾ ಆಳವಾಡಿ

ನಮ್ಮ ಹೆಬ್ಬಳ್ಳಿ ಅರಿವು ಕೇಂದ್ರದಲ್ಲಿ ನಮಗೆ ಎಲ್ಲಾ ತರದ ಪುಸ್ತಕಗಳು ಕಂಪ್ಯೂಟರ್ ಇಂಟರ್ನೆಟ್ ಯುಪಿಎಸ್ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ. ನಮ್ಮಂತ ಅನೇಕ ವಿತ್ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ರೆಡಿಯಾಗಲು ಅತ್ಯುತ್ತಮವಾದ ವೇದಿಕೆಯನ್ನು ನಮ್ಮ ಹೆಬ್ಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಅನುವು ಮಾಡಿಕೊಟ್ಟಿದ್ದಾರೆ ಅವರಿಗೆ ತುಂಬು ಹೃದಯದ ಧನ್ಯವಾದಗಳು

ಗ್ರಂಥಪಾಲಕ

Model Awareness Center Hebballi

ಶ್ರೀ ಫಕೀರಪ್ಪ ಬಸಪ್ಪಾ ಸುಂಕದ

ಗ್ರಂಥಾಲಯವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಓದುಗರ ಅನೇಕ ಅವಶ್ಯಕತೆಗಳನ್ನು ಪೂರೈಸುತ್ತಾ ಜ್ಞಾನದ ನಿಕ್ಷೇಪಗಳಾಗಿ ಸಂಸ್ಕೃತಿಕ ರಾಯಬಾರಿಗಳಾಗಿ ಮಾಹಿತಿ ಪ್ರಸಾರ ಮತ್ತು ವಿನಿಮಯ ಮರು ವ್ಯಾಪ್ತಿಗಳಿಗೆ ಒತ್ತು ನೀಡುವ ಶೈಕ್ಷಣಿಕ ಸ್ವರೂಪದ ಸಾಮಾಜಿಕ ವ್ಯವಸ್ಥೆಗಳಾಗಿ ರೂಪಗೊಂಡಿವೆ ಓದುಗರ ವೈವಿಧ್ಯಮಯ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಅರಿವು ಕೇಂದ್ರಗಳಾಗಿ ಸಜ್ಜುಗೊಂಡು ಬಹು ಮಾಧ್ಯಮಗಳಾಗಿ ಅಳವಡಿಸಿಕೊಂಡಿದೆ