ಸುಜ್ಞಾನದ ಅರಿವಿಗೆ ಯುವ ಚಿಂತನಾ ಸಮಾವೇಶ ವೇದಿಕೆಯಾಗಲಿ ಡಾ.ವಿ.ಎಸ್.ವಿ ಪ್ರಸಾದ

ಪ್ರತಿಷ್ಠಾನದ ಕಾರ್ಯಕ್ರಮಗಳು ಯುವ ಸಮುದಾಯ, ಕಲಾವಿದರು, ವೃತ್ತಿನಿರತ ವ್ಯಕ್ತಿಗಳಿಗಾಗಿ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಉಪಯುಕ್ತ ಕಾರ್ಯಗಳನ್ನು ಮಾಡಿರುವುದಕ್ಕೆ ಈ ಯುವ ಚಿಂತನಾ ಸಮಾವೇಶವೇ ಕಾರಣ ಎಂದು ಸ್ವರ್ಣ ಗ್ರುಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೆಶಕರಾದ ಡಾ.ವಿ.ಎಸ್.ವಿ ಪ್ರಸಾದ ಹೇಳಿದರು.

 

ಅವರು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ,ಧಾರವಾಡ ವತಿಯಿಂದ ಸೃಜನಾ ರಂಗಮಂದಿರದಲ್ಲಿ ಏರ್ಪಡಿಸಿದ್ದ 2ನೇ ಯುವ ಚಿಂತನಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಈ ವರ್ಷದ ಧ್ಯೇಯದಂತೆ ಹಾವೇರಿ, ಕಾರವಾರ, ಧಾರವಾಡದ ಸುಮಾರು 5ಸಾವಿರಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡಿ ಬದುಕಿನ ಧನಾತ್ಮಕ ಚಿಂತನೆಗೆ ಹಚ್ಚುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ಪಾಲಿಕೆ ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಾ ಸಾಂಸ್ಕೃತಿಕ ಕ್ಷೇತ್ರದಲ್ಲಿ ಯುವ ಸಮುದಾಯದ ಮನಸ್ಸುಗಳ ಸೆಳೆದು ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮಾರ್ತಾಂಡಪ್ಪ ಕತ್ತಿ ಅವರ ತಂಡ ಧಾರವಾಡದಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

May the Youth Thought Conference be a platform for the realization of wisdom, Dr. VSV Prasad.

ಕೆ.ಎ.ಎಸ್ ನಿವೃತ್ತ ಅಧಿಕಾರಿ ಭೀಮಸೇನರಾವ್ ಶಿಂಧೆ ಯುವ ಚಿಂತನಾ ಸಮಾವೇಶದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ ಒಂದು ತಿಂಗಳ ಕಾಲ ಮಾಡಿ ಕಾರ್ಯಗಳ ವರದಿಯನ್ನು ದಾಖಲೀಕರಣ ಮಾಡಿದ್ದು ಮುಂದಿನ ಯುವ ಸಮುದಾಯಕ್ಕೆ ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು.

೨ನೇ ಯುವ ಚಿಂತನಾ ಸಮಾವೇಶದ ಸರ್ವಾಧ್ಯಕ್ಷರಾದ ಸುನೀಲ ಬಾಗೇವಾಡಿ ಎಐ ತಂತ್ರಜ್ಞಾನದ ಮತ್ತು ಯುವ ಸಮುದಾಯದ ಆಧಾರಿತ ಒಂದು ತಿಂಗಳ ಕಾರ್ಯ ಸಂತೋಷ ತಂದಿದೆ ಎಂದು ಹೇಳಿದರು.

ಮಾಜಿ ಮಹಾಪೌರರು, ಪಾಲಿಕೆಯ ಸದಸ್ಯರಾದ ಈರೇಶ ಅಂಚಟಗೇರಿ 18 ವರ್ಷಗಳ ಕಾಲ ಪ್ರತಿಷ್ಠಾನದ ಮಾಡಿ ಕಾರ್ಯವೈಕರಿಯ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದರು.

ಮುಖಂಡರಾದ ಶ್ರೀಮತಿ ಸವಿತಾ ಅಮರಶೆಟ್ಟಿ ಸಾಧಕರಿಗೆ ಮತ್ತು ಆದರ್ಶ ದಂಪತಿಗಳಿಗೆ ಸನ್ಮಾನ ಮಾಡಿ ಮಾತನಾಡಿದರು.

ಅಂಜುಮನ್ ಸಂಸ್ಥೆಯ ಬಶೀರಾಹ್ಮದ ಜಹಗೀರಾದಾರ ಪ್ರಶಸ್ತಿ ವಿಜೇತ ತಂಡಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ನಿಕಟಪೂರ್ವ ಅಧ್ಯಕ್ಷರಾದ ಪಿ.ವ್ಹಿ.ಹಿರೇಮಠ, ಅಣ್ಣಿಗೇರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನಾಗೇಶ ಅಣ್ಣಿಗೇರಿ, ನೌಕರರ ಸಂಘದ ಎಸ್.ಎಫ್.ಸಿದ್ದನಗೌಡರ, ಪ್ರೌಢಶಾಲಾ ಶಿಕ್ಷಕರ ಸಂಘದ ನಾರಾಯಣ ಭಜಂತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಶೆಟ್ಟಿ ನಿರೂಪಿಸಿದರು. ಸಮಾವೇಶದ ಸಂಚಾಲಕರಾದ ಅರುಣಕುಮಾರ ಶೀಲವಂತ ಸ್ವಾಗತಿಸಿದರು. ಶ್ರೀಮತಿ ಪ್ರಮೀಳಾ ಜಕ್ಕಣ್ಣವರ ಪ್ರಾರ್ಥಿಸಿದರು, ಕೃಷ್ಣಮೂರ್ತಿ ಗೊಲ್ಲರ ವಂದಿಸಿದರು. ಸುರೇಶ ಬೇಟಗೇರಿ, ಪ್ರೇಮಾನಂದ ಶಿಂಧೆ ಮತ್ತು ಶ್ರೀಶೈಲ ಚಿಕನಳ್ಳಿ ಪ್ರಶಸ್ತಿ ವಿಜೇತರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆಯ ಸಂಪಾದಕರಾದ ವಿಜಯೇಂದ್ರಗೌಡ ಪಾಟೀಲ, ಅನಿತಾ ಕಡಪಟ್ಟಿ, ಪ್ರಭಾಕರ ಲಗಮ್ಮಣ್ಣನವರ, ವಸುದೇವ ಪರ್ವತಿ, ಪುರಶೋತ್ತಮ ಪಟೇಲ, ಸುರೇಶ ಬಾಂಡಗೆ, ಸುಧೀರ ಪಿ ಎಸ್,ರಮೇಶ ಲಿಂಗದಾಳ, ನೇಹಾ ಬುದ್ನಿ, ಕು. ಸಂಜನಾ ಎಮ್.ಎಸ್. ಬಸವರಾಜ ಗೊರವರ, ಮಹಾದೇವ ಸತ್ತಿಗೇರಿ, ಎನ್.ಬಿ.ದ್ಯಾಪೂರ ಮುಂತಾದವರು ಇದ್ದರು