ಧಾರವಾಡ : ಮೃತ್ಯುಂಜಯ ನಗರದ ಕೊಟ್ಟಣದ ಓಣಿಯ ಶ್ರೀ ವೀರಭದ್ರೇಶ್ವರ ಜಾತ್ರಾಹೋತ್ಸವದ ಅಂಗವಾಗಿ,ಇಂದು ಸಾಮೂಹಿಕ ಕಾರ್ಯಕ್ರಮಗಳು ಜರುಗಿದವು.
ಶ್ರೀ ಮುರುಘಾಮಠದ ಶ್ರೀಗಳಾದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ನಾಲ್ಕು ಜೋಡಿಗಳು ಗೃಹಸ್ತಾಶ್ರಮಕ್ಕೆ ಕಾಲಿಟ್ಟರು.

ಈ ಸಂಧರ್ಭದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿಯ ಅಧ್ಯಕ್ಷರಾದ ಅರವಿಂದ ಏಗನಗೌಡರ ಪ್ರಸ್ತಾವಿಕವಾಗಿ ಮಾತನಾಡಿ,ಸುಮಾರು ನೂರಾ ಐವತ್ತು ವರ್ಷಗಳ ಇತಿಹಾಸದ ದೇವಸ್ಥಾನ ಇದಾಗಿದ್ದು, ವಿಜೃಂಭನೆಯ ಜಾತ್ರಾ ಮಹೋತ್ಸವಕ್ಕೆ ಇಂದಿಗೆ ಹದಿನೈದು ವರ್ಷಗಕು ತುಂಬಿದ್ದು ಸಂತಸದ ವಿಷಯವಾಗಿದ್ದು, ಪ್ರತಿವರ್ಷ ಸಾಮೂಹಿಕ ವಿವಾಹದ ಜೊತೆಗೆ ಅನೇಕ ಕಾರ್ಯಕ್ರಮಗನ್ನು, ಸಾರ್ವಜನಿಕರ ಸಹಕಾರದಿಂದ ಆಯೋಜಿಸುತ್ತ ಬಂದಿದ್ದೇವೆ.
ಈ ವಿಜೃಂಭನೆಗೆ ಈ ಭಾಗದ ತಾಯಂದಿರು,ಹಿರಿಯರು, ಹಾಗೂ ಯುವಕರ ನಿರಂತರ ಶ್ರಮವೇ ಕಾರಣ ಎಂದರು.
ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ಸಮಿತಿಯ ಅಧ್ಯಕ್ಷರು ಹಾಗೂ ಸಮಿತಿಯ ಶ್ರಮ, ಹಾಗೂ ಸೇವಾ ಮನೋಭಾವವೇ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಕಾರಣ. ಪ್ರತಿವರ್ಷವೂ ಜಾತ್ರಾ ಮಹೋತ್ಸವವು ವಿಜೃಂಭಣೆ ಇಂದ ಜರುಗುತ್ತಿರುವದು ಸಂತಸದ ವಿಷಯ ಎಂದರು.ಹಾಗೂ ನೂತನ ವಧುವರರಿಗೆ ಅನ್ಯೋನ್ಯ ಜೀವನ ನಡೆಸಿ ತಂದೆ ತಾಯಿಯರ ಹೆಸರು ತರುವಂತೆ ಜೀವನ ನಡೆಸುವಂತೆ ಕಿವಿ ಮಾತು ಹೇಳಿದರು.

ಅಮ್ಮಿನಬಾವಿಯ ಅಭಿನವ ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ,ಎಲ್ಲಿ ಶ್ರದ್ಧೆ, ಪ್ರಾಮಾಣಿಕತೆ, ಹಾಗೂ ಇಚ್ಚಾಶಕ್ತಿಯು ಇರುತ್ತದೆಯೋ ಅಲ್ಲಿ ಯಶಸ್ವೀ ಇರುತ್ತದೆ, ಒಗ್ಗಟ್ಟಿನ ಶ್ರಮ ಈ ಜಾತ್ರೆಯಲ್ಲಿ ಎದ್ದು ಕಾಣುತ್ತಿದೆ. ಸಮಿತಿಯವರು ಇನ್ನು ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಶಕ್ತಿ ಆ ಭಗವಂತ ನಿಮಗೆ ನೀಡಲಿ, ನಮ್ಮ ಆಶೀರ್ವಾದ ಸದಾ ನಿಮ್ಮೊಂದಿಗೆ ಇದೆ ಎಂದು ವೀರಭದ್ರೇಶ್ವರ ಸೇವಾ ಸಮಿತಿ ಸದಸ್ಯರನ್ನು ಅಭಿನಂದಿಸಿದರು.
ಸುಳ್ಳದ ಶ್ರೀ ಶಿವ ಸಿದ್ಧ ರಾಮೇಶ್ವರ ಸ್ವಾಮಿಗಳು, ಹದಿನೈದು ವರ್ಷಗಳಿಂದ ಅಚ್ಚು ಕಟ್ಟಾದ ಕಾರ್ಯಕ್ರಮವನ್ನು ಹದಿನೈದು ವರ್ಷಗಳಿಂದ ಆಯೋಜಿಸುವದು ಸಾಮಾನ್ಯ ಕೆಲಸವಲ್ಲ ಇದು ಶ್ರೀ ವೀರಭದ್ರಶ್ವರ ನ ಪವಾಡವೇ ಸರಿ, ಆ ಭಗವಂತ ಇನ್ನು ಹೆಚ್ಚಿನ ಶಕ್ತಿ ನೀಡಲಿ, ಹಾಗೂ ಇಂದು ದಾಂಪತ್ಯ ಜೀವನ ಕ್ಕೆ ಕಾಲಿಟ್ಟ ದಂಪತಿಗಳಿಗೆ ಶುಭವಾಗಲಿ ಎಂದು ಆಶೀರ್ವಾದ ಮಾಡಿದರು.
ಮಾಜಿ ಶಾಸಕಿ ಸೀಮಾ ಮಸೂತಿಯವರು ಮಾತನಾಡಿ, ಗಂಡು ಹೆಣ್ಣಿನ ಈ ಬಂಧನ ಅಮೂಲ್ಯವಾಗಿದ್ದು, ತಾವು ಒಬ್ಬರಿಗೊಬ್ಬರು ಗೌರವ ಕೊಡುವದರ ಜೊತೆಗೆ ಅತ್ತೆ ಮಾವಂದಿರನ್ನು ಹಾಗೂ ಹಿರಿಯರನ್ನು ಗೌರವಿಸಬೇಕು ಎಂದು
ನೂತನ ವಿವಾಹ ಜೀವನಕ್ಕೆ ಕಾಲಿಟ್ಟ ದಂಪತಿಗಳಿಗೆ ಸಲಹೆ ನೀಡಿದರು.
ನಂತರ ಸಾವಿರಾರು ಜನ ಬುಂದೆ ಪ್ರಸಾದವನ್ನು ಸವಿದರು.
ಈ ಸಂಧರ್ಭದಲ್ಲಿ ಮೃತ್ಯುಂಜಯ ಸಿದ್ನಾಳ, ಈಶ್ವರ ಮಾಲಾಗರ, ಮಹಾಂತೇಶ ಕುರಾಟ್ಟಿದೇಸಾಯಿ,ಈರಪ್ಪ ಗೋಡಿಕಟ್ಟಿ, ಸಿದ್ದಪ್ಪ ಕರಡಿಗುಡ್ಡ, ಗುರುಸಿದ್ದಪ್ಪ ಭಾವಿಕಟ್ಟಿ, ಮಹಾಂತೇಶ ಗೊರವನಕೊಳ್ಳ, ಬಸವರಾಜ ಹಡಗಲಿ, ಶಿವಯೋಗಿ ಧರ್ಮಣ್ಣವರ, ಶಿವನಗೌಡ ಪಾಟೀಲ ,ಸೋಮಣ್ಣ ಗೋಡಿಕಟ್ಟಿ,ಶಿವಯೋಗಿ ಹಂಚಿನಾಳ, ಮೃತ್ಯುಂಜಯ ಬಟ್ಟುರ ಸೇರಿದಂತೆ ನೂರಾರು ಜನರು ಸೇರಿದ್ದರು. ಪ್ರಸಾದದ ವ್ಯವಸ್ಥೆಯಯನ್ನು ಮರಿತ್ಯುಂಜಯ ಯುವಕ ಮಂಡಳದ ಸದಸ್ಯರು ನಿರ್ವಹಿಸಿದರು.





