
ಬಸವಣ್ಣನವರ ಕಾಲದಲ್ಲಿ ಇಂದಂತಹ ಕೊಂಡಿ ಮಂಜಣ್ಣನವರು ಈ ಕಾಲದಲ್ಲಿಯೂ ಇದ್ದಾರೆ ಹೀಗಾಗಿ ನನಗೆ ಈ ಪರಿಸ್ಥಿತಿ ಬಂದಿದೆ- ಶಾಸಕ ವಿನಯ ಕುಲಕರ್ಣಿ
ಕಿತ್ತೂರು 12 : ರಾಜಕೀಯದಲ್ಲಿ ನನ್ನ ಏಳಿಗೆ ಸಹಿಸದೇ ಇರುವವರು, ನನ್ನ ವಿರುದ್ದ ಷಡ್ಯಂತ್ರ ಮಾಡಿ, ನನ್ನ ಸಂಪೂರ್ಣವಾಗಿ ಮುಗಿಸುವ ಕೆಲಸ ನಡೆದಿದೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಧಾರವಾಡ ಗ್ರಾಮೀಣ ಶಾಸಕ ಹಾಗೂ ಮಾಜಿ ಸಚಿವ ಮತ್ತು ನಿಗಮ ಮಂಡಳಿ ಅಧ್ಯಕ್ಷ ವಿನಯ ಕುಲಕರ್ಣಿ ಹೇಳಿದರು.
ಕಿತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರಿಗೆ ಕಾಡುವವರು ಬಿಟ್ಟಿಲ್ಲಾ. ಇನ್ನು ನಾನು ಯಾವ ಲೆಕ್ಕ. ನನಗೆ ಕಾನೂನಿನ ಮೇಲೆ ಸಂಪೂರ್ಣ ಗೌರವವಿದೆ. ನಾನು ಶುಕ್ರವಾರ ಬೆಂಗಳೂರಿನ ಜನಪ್ರತಿಧಿಗಳ ನ್ಯಾಯಾಲಯಕ್ಕೆ ಹಾಜರಾಗುವೆ ಎಂದರು.
ನಾನು ಕ್ಷೇತ್ರದ ಜನರಿಗೆ ಯಾವತ್ತೂ ಕೆಲಸ ಮಾಡುತ್ತಾ ಇದ್ದು, ಜನರು ನನ್ನ ಪರಿಸ್ಥಿತಿ ನೋಡಿ ಕಣ್ಣೀರು ಹಾಕುವಂತೆ ಆಗಿದೆ. ಆದರೆ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿಲ್ಲಾ ಎಂದರು.
ಕ್ಷೇತ್ರದಲ್ಲಿ ನಮ್ಮ ಹೊಲ ನಮ್ಮ ರಸ್ತೆ, ಯುಜಿಡಿ ಕಾಮಗಾರಿ, ಹಕ್ಕುಪತ್ರಗಳ ವಿತರಣೆ, ಕೃಷಿ ಸಲಕರಣೆಗಳು ಹಾಗೂ ಫಲಾನುಭವಿಗಳಿಗೆ ಸೌಲಭ್ಯಗಳ ಪೂರೈಕೆ ಸೇರಿದಂತೆ ಕೋಟ್ಯಾಂತರ ರೂಪಾಯಿ ಅನುದಾನ ತಂದು ಮಾದರಿ ಕೆಲಸವನ್ನು ಮಾಡಿ ತೋರಿಸಿದ್ದೇನೆ ಎಂದರು.
ಬಾಕ್ಸ- ಹೊಸ ಜಿಲ್ಲಾಸ್ಪತ್ರೆಗೆ ಕಾಯಕಲ್ಪ ಸಿಗಲಿದೆ.
ಧಾರವಾಡ ಜಿಲ್ಲೆಯಲ್ಲಿ ಹೊಸದಾಗಿ ಜಿಲ್ಲಾ ಆಸ್ಪತ್ರೆ ಮಾಡಲು ಈಗಾಗಲೇ ಸರಕಾರದ ಮಟ್ಟದಲ್ಲಿ ತಯಾರಿ ನಡೆದಿದ್ದು, ಇದಕ್ಕಾಗಿ 10 ಎಕರೆ ಜಾಗವನ್ನು ಮೀಸಲಿಡಲಾಗಿದೆ. 450 ಕೋಟಿ ವೆಚ್ಚದ ಸರಕಾರಿ ಆಸ್ಪತ್ರೆ ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.
ಬಾಕ್ಸ-ಪಾಲಿಕೆ ಆಸ್ಪತ್ರೆ ಆರೋಗ್ಯ ಇಲಾಖೆಗೆ ಹಸ್ತಾಂತರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಧಾರವಾಡ ಹಳೆ ಬಸ ನಿಲ್ದಾಣದ ಪಕ್ಕದಲ್ಲಿರುವ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿ, ಗರ್ಭಿಣಿಯರಿಗೆ ಅನುಕೂಲವಾಗುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ವಿನಯ ಕುಲಕರ್ಣಿ ತಿಳಿಸಿದರು.
ನನ್ನ ಗೈರು ಅನುಪಸ್ಥಿತಿಯಲ್ಲಿ ಪತ್ನಿ ಹಾಗೂ ಮಕ್ಕಳು ಮುಂದೆ ನಿಂತು ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತಾರೆ.ಇದಕ್ಕೆ ಅಧಿಕಾರಿಗಳು ಕ್ಷೇತ್ರದ ಜನರು ಸಹಕಾರ ಕೊಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಎಂಎಫ್ ನಿರ್ದೇಶಕಿ ಶಿವಲೀಲಾ ವಿನಯ ಕುಲಕರ್ಣಿ, ಕಾಂಗ್ರೆಸ್ ಮುಖಂಡರಾದ ಅರವಿಂದ ಏಗೌನಗೌಡರ, ಈಶ್ವರ ಶಿವಳ್ಳಿ, ಸಿದ್ದಣ್ಣ ಪ್ಯಾಟಿ ಮುಂತಾದವರು ಇದ್ದರು.