ಮಲ್ಲಿಕಾರ್ಜುನ ಮನ್ಸೂರ್ ಒಬ್ಬ ಸಂಗೀತ ಶಿಖರ — ಮೃತ್ಯುಂಜಯ ಅಗಡಿ.

                                      OR

ಸಂಗೀತಜ್ಞರ ದಿನಾಚರಣೆ’ಯ ಕಾರ್ಯಕ್ರಮ.

ಧಾರವಾಡ : ಮನ್ಸೂರ್ ಅವರು ಒಬ್ಬ ಸಂಗೀತ ಶಿಖರವಾಗಿದ್ದು, ಮನ್ಸೂರ ಅವರು ತಮ್ಮ ವಿಶಿಷ್ಠವಾದ ಸಂಗೀತದ ಮೂಲಕ ಕರ್ನಾಟಕವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ದ ಕೀರ್ತಿ ಮಲ್ಲಿಕಾರ್ಜುನ ಮನ್ಸೂರ ಅವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನರಾದ ಮೃತ್ಯುಂಜಯ ಅಗಡಿ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗವು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸಭಾಂಗಣದಲ್ಲಿ‌ ಆಯೋಜಿಸಿದ ಡಾ.ಮಲ್ಲಿಕಾರ್ಜುನ ‌ಮನ್ಸೂರ ಸ್ಮರಣಾರ್ಥ ‘ಸಂಗೀತಜ್ಞರ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಸಂಗೀತದ ಕುರಿತು ಸಂಗೀತದ ಕಲಾವಿದರ ಬಗಯ ಗೌರವ ಕಡಿಮೆ ಆಗಿತ್ತಿದೆ ಈ ಹಿನ್ನೆಲೆಯಲ್ಲಿ ಸಂಗೀತ ಕಲಾವಿದರ ಸಾಧನೆ ಬಗ್ಗೆ ಗೌರವ ನೀಡಬೇಕು. ಮಲ್ಲಿಕಾರ್ಜುನ ‌ಮನ್ಸೂರ ಗ್ವಾಲಿಯರ್ ಘರಾಣೆಯ ಸಂಗೀತದಲ್ಲಿ ವಿಶಿಷ್ಠವಾದ ಸಾಧನೆ ಮಾಡಿದ್ದಾರೆ ಎಂದರು.

ಮಲ್ಲಿಕಾರ್ಜುನ ‌ಮನ್ಸೂರ ಅವರೊಬ್ಬ ಸಂಗೀತದ ಸಿದ್ದಿ ಪುರುಷರಾಗಿದ್ದಾರೆ ಎಂದ ಅವರು ಸಂಗೀತ ಭಗವಂತನಿಗೆ ಪ್ರಿಯವಾದದ್ದು. ಇಂದಿನ ಯುವಜನತೆ ಶಾಸ್ತ್ರೀಯ ಸಂಗೀತದ ವಿವಿಧ ಪ್ರಕಾರಗಳನ್ನು ಕುರಿತು ಅರಿಯಲಿ ಮತ್ತು ಸಂಗೀತದ ಕುರಿತು ಪ್ರೀತಿ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಧಾರವಾಡ ಆಕಾಶವಾಣಿ ಹಿರಿಯ ಸಂಗೀತ ಕಲಾವಿದ ಸದಾಶಿವ ಐಹೊಳೆ ಮಾತನಾಡಿ…ಇಡಿ‌ ಜಗತ್ತಿಗೆ ಮನ್ಸೂರ್ ಅವರು ತಮ್ಮ ಸಂಗೀತದ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದು, ಡಾ.ಮಲ್ಲಿಕಾರ್ಜುನ ‌ಮನ್ಸೂರ ಅವರ ಸ್ಮರಣಾರ್ಥ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ ಎಂದ ಅವರು ನಂತರ ಹಲವಾರು ಗಾಯನದ ಮ‌ೂಲಕ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಸಾರಾಂಗದ ಸಹಾಯ ನಿರ್ದೇಶಕ ಡಾ.ಎನ್.ಸಿದ್ದಪ್ಪ ಮಾತನಾಡಿ ಪ್ರಸಾರಂಗ ವತಿಯಿಂದ ಮಹಾನ್ ವ್ಯಕ್ತಿಗಳು ಕುರಿತು ಮೂಲತತ್ವ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಿತ್ತಿದೆ. ಕನ್ನಡ ಭಾಷೆ, ಸಂಶೋಧನೆ, ಸಂಸ್ಕೃತಿ, ಸಂಗೀತದ ಕುರಿತು ರಾಜ್ಯದ ಗಡಿ ಪ್ರದೇಶಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗವು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ‌.ನಿಂಗಪ್ಪ ಹಳ್ಳಿ, ಡಾ.ಅನೀತಾ ಗುಡಿ, ಡಾ.ವಿ.ಎಲ್.ಪಾಟೀಲ, ಡಾ.ಅನಸೂಯಾ ಕಾಂಬಳೆ, ಡಾ.ಆರ್.ಸಿ.ಹಿರೇಮಠ, ಡಾ.ಅನೀಲ‌ ಮೇತ್ರಿ ಡಾ.ಪಂಡಿತ ರಾಠೋಡ ಸೇರಿದಂತೆ ಸಂಗೀತ ಆಸಕ್ತರು, ವಿದ್ಯಾರ್ಥಿಗಳು, ಸಂಶೋಧಕರು ಕಾರ್ಯಕ್ರಮದಲ್ಲಿ ಇದ್ದರು.