ಧಾರವಾಡ : ಇಲ್ಲಿನ ಜಿಲ್ಲಾ ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ನಿಗದಿ ಗ್ರಾಮ ನಿವಾಸಿ ಹಾಗೂ ಯುವ ಕಾಂಗ್ರೆಸ್ ಮುಖಂಡ ಮಲ್ಲನಗೌಡ ಸೋಮನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದರು.
ಬುಧವಾರ ಕೃಷಿಕ ಸಮಾಜದಲ್ಲಿ ನಡೆದ ಚುನಾವಣೆಯಲ್ಲಿ ೨೦೨೫ರಿಂದ ೨೦೩೦ನೇ ವರ್ಷದ ವರೆಗಿನ ಅಂದರೆ ಐದು ವರ್ಷಗಳ ಅವಽಗೆ ಮಲ್ಲನಗೌಡ ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಽಕಾರಿಗಳು ಘೋಷಣೆ ಮಾಡಿದರು.
ಉಪಾಧ್ಯಕ್ಷರಾಗಿ ಸಂತೋಷ ಗಂಗಪ್ಪ ಸೋಗಿ, ಪ್ರಧಾನ ಕಾರ್ಯದರ್ಶಿಯಾಗಿ ಲಿಂಗಪ್ಪ ಬಸಪ್ಪ ಬಾಡಿನ, ಖಜಾಂಚಿಯಾಗಿ ಬಸಪ್ಪ ನಿಂಗಪ್ಪ ಗುಡೆಣ್ಣವರ ಹಾಗೂ ರಾಜ್ಯ ಪ್ರತಿನಿಽಯಾಗಿ ಅರವಿಂದ ಮಹಾದೇವಪ್ಪ ಕಟಗಿ ಅವರನ್ನು ಜಿಲ್ಲಾ ಕೃಷಿಕ ಸಮಾಜದ ಚುನಾವಣಾಽಕಾರಿಗಳು ಹಾಗೂ ಜಂಟಿ ಕೃಷಿ ನಿರ್ದೇಶಕರು ಅಽಕೃತವಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಚುನಾವಣಾ ಪೂರ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ ಹಾಗೂ ಮುಂತಾದ ನಾಯಕರ ಜತೆ ಚರ್ಚಿಸಿ ಅವಿರೋಧ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಅವಿರೋಧವಾಗಿ ಆಯ್ಕೆಯಾದ ಎಲ್ಲ ಅಧ್ಯಕ್ಷರು, ಪದಾಽಕಾರಿಗಳಿಗೆ ಕೋನರಡ್ಡಿ ಶುಭ ಕೋರಿದರು. ಮಲ್ಲನಗೌಡ ಪಾಟೀಲ್ ಕೃಷಿಕ ಸಮಾಜದ ಅಧ್ಯಕ್ಷರಾಗುತ್ತಿದ್ದಂತೆ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಅವರಿಗೆ ಸಿಹಿ ತಿನ್ನಿಸಿ ಅಭಿನಂದಿಸಿದರು. ಮಲ್ಲಿಕಾರ್ಜುನ ಹೊರಕೇರಿ, ಗದಿಗೆಪ್ಪ ಕಳ್ಳಿಮನಿ, ಸುರೇಗೌಡ ಪಾಟೀಲ, ಶ್ರೀಕಾಂತ ಗಾಯಕವಾಡ, ವೀರಭದ್ರ ರೇಷ್ಮಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಜರಿದ್ದರು.