ಬಿಲ್ಡ್ ಎಕ್ಸ್ಪೋನಲ್ಲಿ ಮಾಹಿತಿ ಕೈಪಿಡಿಯ ಸದುಪಯೋಗ ಪಡಿಸಿಕೊಳ್ಳಿ – ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ

ಬಿಲ್ಡಿಂಗ್ ಮತ್ತು ಕಟ್ಟಡ ವಸ್ತುಗಳ ವ್ಯಾಪಾರ ಪ್ರದರ್ಶನ ಬಿಲ್ಡ್ ಎಕ್ಸ್ಪೋದ ಮಾಹಿತಿಗಾಗಿ ಮಾಹಿತಿ ಕೈಪಿಡಿಯನ್ನು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ ಧಾರವಾಡ ಲೋಕಲ್ ಸೆಂಟರನಿಂದ ಬಿಡುಗಡೆ ಮಾಡಿದ್ದು ಬಹಳ ಉಪಯುಕ್ತವಾಗಿದೆ ಎಂದು ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ ಹೇಳಿದರು.
ಅವರು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ, ಲೋಕಲ್ ಸೆಂಟರ್ ಧಾರವಾಡ ಮತ್ತು ಟರ್ಬೊ ಸ್ಟೀಲ್ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ ಬಿಲ್ಡ್ ಎಕ್ಸ್ಪೋ -2025 ರಲ್ಲಿ ಬಿಲ್ಡ್ ಎಕ್ಸ್ಪೋ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿ ಕಟ್ಟಡ ವಸ್ತುಗಳು, ನಿರ್ಮಾಣ ತಂತ್ರಜ್ಞಾನಗಳು, ಪರಿಸರ ಸ್ನೇಹಿ ಉತ್ಪನ್ನಗಳು ಮತ್ತು ನವೀಕೃತ ಸಾಧನಗಳು ಮತ್ತು ಇತರ ಸೇವೆಗಳ ಕುರಿತು ಉಪಯುಯ ಮಾಹಿತಿ ಒದಗಿಸಲು ಕೈಪಿಡಿ ಮಾಡಿದ್ದು ಸಂತಸ ತಂದಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಅಂಜುಮನ್-ಇ-ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಇಸ್ಮಾಯಿಲ್ ತಮಾಟಗಾರ, ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಮ್.ಎಸ್ ಸಾಳುಂಕೆ ಹಾಗೂ ಅಧ್ಯಕ್ಷತೆಯನ್ನು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸನ ಅಧ್ಯಕ್ಷರಾದ ಸುನೀಲ ಬಾಗೇವಾಡಿ ಮಾತನಾಡಿದರು.
ಇಂ. ದಾಮೋದರ ಹೆಗಡೆ ಪ್ರಾರ್ಥಿಸಿ, ನಿರೂಪಿಸಿದರು.ಅಸೋಸಿಯೇಷನ್ ನ ಉಪಾಧ್ಯಕ್ಷರಾದ ಅರುಣಕುಮಾರ ಶೀಲವಂತ ಸ್ವಾಗತಿಸಿದರು. ಬಿಲ್ಡ್ ಎಕ್ಸ್ಪೋ -2025 ರ ಸಂಚಾಲಕರಾದ ಅಜಿತ ಕರೋಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಸೋಸಿಯೇಷನ್ ನ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ ವಂದಿಸಿದರು.
ನಂತರ ಸಂಜೆ 6-00ಕ್ಕೆ ಮಾರ್ತಾಂಡಪ್ಪ ಕತ್ತಿ ಅವರ ನೇತೃತ್ವದಲ್ಲಿ ಕಲಾಶಕ್ತಿ ಫೌಂಡೇಷನ್, ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಶ್ರೀಮತಿ ವೀಣಾ ಮಠ ಮತ್ತು ಸ್ವಾತಿ ಅಭಿಷೇಕ ಪಾಟೀಲ ಅವರಿಂದ ಜಾನಪದ ವೈಭವ, ಪ್ರಮೀಳಾ ಜಕ್ಕಣ್ಣವರ ಅವರಿಂದ ಹಾಡುಗಳ ವೈವಿಧ್ಯಮಯ ಹಾಗೂ ವಿವಿಧ ಕಲಾ ತಂಡಗಳ, ವೈಯಕ್ತಿಕ ಜನಪದ ವೈಭವ, ಡ್ಯಾನ್ಸ್, ಮನರಂಜನಾ ಕಾರ್ಯಕ್ರಮಗಳು ನಡೆದವು.
ಈ ಕಾರ್ಯಕ್ರಮದಲ್ಲಿ ಟರ್ಬೋ ಸ್ಟೀಲ್ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕರಾದ ರವಿ ಕುಳೇನೂರು ಹಾಗೂ ಅಭಿಷೇಕ್ ಕಾಳೆ ಜೊತೆಗೆ ಅಸೋಸಿಯೇಷನ್ ಸದಸ್ಯರಾದ ಸಂಜಯ್ ಲೋಂಡೇ, ಸಂಶುದ್ದೀನ್ ದಿಡಗೂರು, ಅಶೋಕ್ ಕೌಜಗೇರಿ, ಅಲ್ತಾಫ್ ಅಲೀ ಹತ್ತೀಮತೂರ್, ಕಬೀರ್ ನದಾಫ್, ಜುಬೇರ್ ಅಬ್ಬೀಹಾಳ, ಸುಮೀತ್ ಸುಣಗಾರ, ಅಮಿತ್ ಪಾಟೀಲ, ಕೃಷ್ಣಾ ಎಲಿಗಾರ್, ಪರವೇಜ್ ಶಿಮೋಗ್ಗಾ, ಮಂಜುನಾಥ ಕೋಟೂರು,ನಾಗರಾಜ ದೇಸಾಯಿ,ಹರೀಶ ದವಡೆ, ಮಹೇಶ ಮಠದ, ಸಂಜಯ ಕಬ್ಬೂರ, ಪವನ ಬೆಟಗೇರಿ, ದರ್ಶನ ಹೂಲಿ, ಲಿಂಗರಾಜ ತೊರವಿ ವಿಜಯೇಂದ್ರ ಪಾಟೀಲ, ಸೋಮಶೇಖರ ಬೆರಿ, ವಿಜಯ ತೋಟಗೇರ, ದಯಾನಂದ ಮಾಸೂರ ಮತ್ತಿತರರು ಉಪಸ್ಥಿತರಿದ್ದರು.





