ನಾವು ನೀವೆಲ್ಲರೂ ಒಂದಾಗಿ ಬಾಳೋಣ — ಕೆ ಎಚ್ ನಾಯಕ ಕರೆ.
OR
ಸ್ತ್ರೀ ಶಕ್ತಿಯ ವಿಭಿನ್ನ ಮುಖಗಳು ಭಾಷಣ ಸ್ಪರ್ಧೆ ಮತ್ತು ಸನ್ಮಾನ ಕಾರ್ಯಕ್ರಮ.

ಧಾರವಾಡ : ನಾವು ನೀವೆಲ್ಲರೂ ಒಂದಾಗಿ ಬಾಳೋಣ ಬನ್ನಿ ಎಂಬ ಹಾಸ್ಯಕವಿ ಸಾಹಿತಿ ಎನ್ ಎನ್ ಎಸ್ ಯೋಜನೆ ಕವಿತೆ ರಚನೆಗಾರರಾದ ದಿವಂಗತ ಡಾ ಎಂ ಬಿ ದಿಲ್ ಶಾದ ಅವರು ಪ್ರತಿಷ್ಠಿತ ಅಂಜುಮನ್ ಸಂಸ್ಥೆಯ ಪ್ರಾಚಾರ್ಯರಾಗಿ ಉತ್ತಮ ಶಿಕ್ಷಣ ಕಲಿಸಿದ ಗುರುಗಳು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಮತ್ತು ಸಾಹಿತಿ ಕೆ ಎಚ್ ನಾಯಕ ಹೇಳಿದರು.
ಅವರು ಡಾ ಎಂ ಬಿ ದಿಲ್ ಶಾದ ಅವರ 73 ನೇ ಹುಟ್ಟು ಹಬ್ಬದ ಅಂಗವಾಗಿ ನಗರದ ರಂಗಾಯಣದ ಸಭಾಭವನದಲ್ಲಿ ಆಯೋಜಿಸಿದ್ದ ಸ್ತ್ರೀ ಶಕ್ತಿಯ ವಿಭಿನ್ನ ಮುಖಗಳು ಭಾಷಣ ಸ್ಪರ್ಧೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಸಸಿಗೆ ನೀರು ಉನ್ನೀಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ ಎಂ ಬಿ ದಳಪತಿ ಮಾತನಾಡಿ ಇಡೀ ದೇಶದಲ್ಲೇ ಎನ್ ಎನ್ ಎಸ್ ಯೋಜನೆ ಕವಿತೆ ಬರೆದು ಹಾಡಿ ತೋರಿಸಿದರು. ಪ್ರೊ ಡಾ ಎಂ ಬಿ ದಿಲ್ ಶಾದ ಅವರ ಸ್ಮರಣೆ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಜನಪ್ರಿಯತೆ ಪಡೆಯಬೇಕು ಎಂದರು.
ಶ್ರೀ ಸಾಯಿ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕರಾದ ಡಾ ವೀಣಾ ಬಿರಾದಾರ ಮಾತನಾಡಿ ಪ್ರೊ ಎಂ ಬಿ ದಿಲ್ ಶಾದ ಗುರುಗಳ ಆದರ್ಶ ಗುಣಗಳನ್ನು ಬೆಳೆಸಿಕೊಂಡು ಬಾಳಬೇಕು ಎಂದು ಹೇಳಿದರು.
ಡೈಟ ನಿವೃತ್ತ ಪ್ರಾಧ್ಯಾಪಕ ಕೆ ಎಸ್ ಬಂಗಾರಿ ಮಾತನಾಡಿದರು.
ಡಾ ಎಂ ಬಿ ದಿಲ್ ಶಾದ ಶಿಕ್ಷಣ ಮತ್ತು ಸೇವಾ ಸಮಿತಿ ಅಧ್ಯಕ್ಷ ಜಿ ಬಿ ದಿಲ್ ಶಾದ ಸಭೆ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮೊಹಮ್ಮದ್ ರಫೀಕ್ ದಿಲ್ ಶಾದ. ನಿವೃತ್ತ ದೈಹಿಕ ಶಿಕ್ಷಕರಾದ ಹಾಗೂ ದಿವಂಗತ ದಿಲ್ ಶಾದ ಅವರ ಬಾಲ್ಯದ ಸ್ನೇಹಿತರಾದ ಜಿ ಡಿ ಸಿಂಧೆ ಮತ್ತು ಅನೇಕ ಗಣ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸಿದರು.
ವೀರಣ್ಣ ಒಡ್ಡಿನ.ಪ್ರಮೀಳಾ ಜಕ್ಕಣ್ಣವರ.ಡಾ ಕೆ ಎಸ್ ಭರಮಗೌಡರ ನಿರ್ಣಾಯಕರಾಗಿ ಭಾಗವಹಿಸಿದ್ದರು.
ಸವಿತಾ ಜವಾಯಿ ಪ್ರಥಮ ಬಹುಮಾನ 2500.
ಮಧು ಕಿತ್ತೂರ ದ್ವಿತೀಯ ಬಹುಮಾನ 1500.
ಪೊಜಾ ಹುಡೇದ ತೃತೀಯ ಬಹುಮಾನ 1000. ಹಾಗೂ ಪ್ರೀತಂ ಸಮಾಧಾನಕರ ಬಹುಮಾನ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಡಾ ಎಂ ಬಿ ದಿಲ್ ಶಾದ ಅವರ ಕುಟುಂಬ ವರ್ಗದವರು ಹಾಗೂ ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಅಂಜುಮನ್ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಬಿ ನಾಲತವಾಡ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಶೋಕ್ ಮುತ್ತಾಗಿ ಕಾರ್ಯಕ್ರಮ ನಿರೂಪಿಸಿದರು.
ಉಪಾಧ್ಯಕ್ಷ ಹೀನಾ ಆಪ್ರೀನ ದರಗದ ವಂದಾರ್ಪಣಿ ಮಾಡಿದರು.





