ಧಾರವಾಡ 26 : 1950ರ ಜನವರಿ 26ರಂದು ಸಂವಿಧಾನ ಅಂಗೀಕರಿಸಿ, ವಿಶ್ವದಲ್ಲಿ ತಾನೂ ಒಂದು ಸಾರ್ವಭೌಮ ರಾಷ್ಟ್ರವೆಂದು ಸಾರಿದುದರ ದ್ಯೋತಕವಾಗಿ ನಾವೆಲ್ಲರೂ ಒಂದಾದೆವು. ಅಲ್ಲದೇ ನಮ್ಮ ಯುವಜನರು ಗಣರಾಜ್ಯೋತ್ಸವ ಮಹತ್ವದ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ ಎಂದು ನ್ಯಾಯವಾದಿ ಪ್ರಕಾಶ ಉಡಕೇರಿ ಹೇಳಿದರು.
ಅವರು ಧಾರವಾಡ ಜಿಲ್ಲಾ ಮತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ಏರ್ಪಡಿಸಿದ್ದ 76 ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ರಾಜ ಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದಲ್ಲಿ ತನ್ನ ನಿಜ ಅಸ್ಥಿತ್ವವನ್ನು ಸ್ಥಾಪಿಸಿದ ದಿನವಾಗಿದೆ. ಈ ಕಾರಣಕ್ಕಾಗಿ ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಅಧ್ಯಕ್ಷರಾದ ಡಾ ಲಿಂಗರಾಜ ಅಂಗಡಿ ಮಾತನಾಡಿ ನಮಗೆಲ್ಲರಿಗೂ ಬಹಳ ಮುಖ್ಯವಾದ ದಿನ.ನಾಳಿನ ಪ್ರಜೆಗಳನ್ನು ರೂಪಿಸುವ ಅವಕಾಶ ಸಿಕ್ಕಿರುವುದು ನಮಗೆ ಗೌರವ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ ಲೋಕಲ್ ಸೆಂಟರ್ ನ ದಾಮೋದರ ಹೆಗಡೆ, ಸರಕಾರಿ ಮಹಿಳಾ ಪದವಿ ಕಾಲೇಜಿನ ಪ್ರಚಾರ್ಯರಾದ ಡಾ. ಎಸ್ ಎಸ್ ಅಂಗಡಿ ಮಾತನಾಡಿದರು.
ಕಸಾಪ ತಾಲೂಕಾ ಅಧ್ಯಕ್ಷರಾದ ಮಹಾಂತೇಶ ನರೇಗಲ್ ನಿರೂಪಿಸಿದರು. ಗೌರವಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ವಂದಿಸಿದರು. ಶಾಂತವೀರ ಬೆಟಗೇರಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಇಂಜಿನಿಯರ್ ಅಸೋಸಿಯೇಷನ್ ನ ಅಧ್ಯಕ್ಷ ಸುನಿಲ್ ಬಾಗೇವಾಡಿ, ಉಪಾಧ್ಯಕ್ಷ ಅರುಣ ಶೀಲವಂತ, ಕಬ್ಬೀರ ನಧಾಪ್, ಎಸ್ ಎಮ್ ಧಾನಪ್ಪಗೌಡರ, ಬಿ ಜಿ ಬಾರ್ಕಿ, ಡಾ ಜಿನದತ್ತ ಹಡಗಲಿ, ಕಸಾಪ ಪದಾಧಿಕಾರಿಗಳು ಮತ್ತು ಇಂಜಿನಿಯರ್ ಅಸೋಸಿಯೇಷನ್ ಪದಾಧಿಕಾರಿಗಳು ಇದ್ದರು.