ಧಾರವಾಡ : ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಸಾಧಿಸಲು ವಿದ್ಯಾರ್ಥಿ ಹಂತದಲ್ಲಿ ಮೊಬೈಲ್ ಬಳಕೆ ಮಾಡದೇ ನಿರಂತರ ಅಧ್ಯಯನ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕೆಂದು ಹುಬ್ಬಳ್ಳಿ-ಧಾರವಾಡ ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾAವಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಾಳಮಡ್ಡಿಯ ಕೆ.ಇ. ಬೋರ್ಡಿನ ಸಂಯುಕ್ತ ಪದವಿ ಪೂರ್ವ ಮಾಹಾವಿದ್ಯಾಲಯದಲ್ಲಿ ಜರುಗಿದ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ಧಾರವಾಡ ಶಿಕ್ಷಣ ಕಾಶಿ, ಇಲ್ಲಿರುವ ಸೌಲಭಗಳನ್ನು ಪಡೆದುಕೊಡು ಸಾವಿರಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಂಡಿದ್ದಾರೆ. ಪರೀಕ್ಷಾ ಸಮಯದಲ್ಲಿ ಓದದೇ ಪ್ರತಿದಿನ ಅಧ್ಯಯನ ಮಾಡಬೇಕು. ದಿನಪತ್ರಿಕೆಗಳು, ಕಾದಂಬರಿ ಹಾಗೂ ಸಾಹಿತ್ಯವನ್ನು ಓದಿ ಬಹುಮುಖ ವ್ಯಕ್ತಿತ್ವವನ್ನು ಬೆಳಸಿಕೊಳ್ಳಬೇಕು. ಜೀವನದ ಸಾಧನೆಗೈಯಲು ನಿಮ್ಮ ಬಡತನ ಅಡ್ಡಿಯಾಗದೆ ಸಾಧನೆಗೆ ಅದು ಪೂರಕವಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶದಲ್ಲಿ ಸಾಧನೆಗೈದ, ಅರ್ಹ ಹಾಗೂ ಬಡ ವಿದ್ಯಾರ್ಥಿಗಳಿಗೆ ಮತ್ತು ರಾಜ್ಯಮಟ್ಟದ ಕ್ರೀಡಾಪಟುಗಳಿಗೆ ನಗದು ಪಾರಿತೋಷಕಗಳನ್ನು ನೀಡಿ ಸತ್ಕರಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎಸ್.ಎಸ್. ಹನುಮಂತಗಡ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯೆ ಡಾ. ಸುನಿತಾ ಕಡಪಟ್ಟಿ ಅಧ್ಯಕ್ಷೀಯ ಸಮಾರೋಪ ಮಾಡಿದರು. ಹಿರಿಯ ಉಪನ್ಯಾಸಕ ಎಸ್. ಎಲ್. ಶೇಖರಗೋಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೇಮಲತಾ ಕರಿಗಾರ ನಿರೂಪಿಸಿದರು.
ಉಪನ್ಯಾಸಕಿ ಕುಮಾರಿ. ಚಿತ್ರಾ ಮುರಾಳ ಪ್ರಾರ್ಥಿಸಿದರು.
ಸಂತೋಷ ಒಕ್ಕುಂದ ವಂದಿಸಿದರು.
ಉಪಪ್ರಾಚಾರ್ಯ ಡಾ. ಎಸ್.ಎಸ್. ಗೋವಿದರೆಡ್ಡಿ, ಜಿ.ಸಿ. ಕುಲಕರ್ಣಿ, ಅರುಣ ಗಂಜಿಗಟ್ಟಿ, ಭಾರ್ಗವಿ ಪಿ, ಎಚ್. ಎಮ್. ಕಳಸಪ್ಪನವರ, ಡಾ. ಸುಜಾತಾ ನಲವಡಿ, ಅಂಕಿತಾ ಕಲಾಲ, ಭುವನಾ ಪೂಜಾರ, ಲಕ್ಷಿö್ಮÃ ಮುಗಳಿ, ಸಮೀನಾ ಶೇಖ, ಬಸಲಿಂಗಯ್ಯಾ ಕುಲಕರ್ಣಿ, ಆರತಿ ನಾಯಕ ಮುಂತಾದವರು ಉಪಸ್ಥಿತರಿದ್ದರು.





