ಸರ್ಕಾರಿ ಶಾಲಾ ಮಕ್ಕಳ ಜೊತೆಗೆ ಹೊಸ ವರ್ಷ ಆಚರಿಸಿದ ಕೆಎಎಸ್ ಅಧಿಕಾರಿ.

KAS officer celebrates New Year with government school children.

ಧಾರವಾಡ : ಧಾರವಾಡ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಕೆ ಎ ಎಸ್ ಅಧಿಕಾರಿ ಮಲ್ಲಿಕಾರ್ಜುನ ತೊದಲಬಾಗಿ, ಧಾರವಾಡ ತಾಲೂಕಿನ ಗೊಂಗಡಿಕೊಪ್ಪ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ, ಟ್ರ್ಯಾಕ್‌ ಸೂಟ ಖರೀದಿಸಿ, ಶಾಲೆಯ ಎಲ್ಲಾ ಮಕ್ಕಳಿಗೆ ವಿತರಿಸುವ ಮ‌ೂಲಕ ವಿಶಿಷ್ಟವಾಗಿ, ವಿಭಿನ್ನವಾಗಿ ಹೊಸ ವರ್ಷವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,ನಾವು ಸಕಾರಾತ್ಮಕವಾಗಿ ಮುನ್ನಡೆದಷ್ಟು ನಮ್ಮ ಜೀವನ ಚೆನ್ನಾಗಿರುತ್ತದೆ, ನಮ್ಮ ಆಲೋಚನೆಗಳು ವಿಶೇಷತೆಯಿಂದ ಕೂಡಿರಬೇಕು, ಕಂಡ ಕನಸುಗಳನ್ನು ಸಾಕಾರಗೊಳಿಸುವಂತಿರಬೇಕು, ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರಬೇಕು, ಮಕ್ಕಳು ಮೊಬೈಲ್ ಬಳಕೆ ಮಾಡದೇ ಓದುವುದರ ಕಡೆಗೆ ಹೆಚ್ಚು ಗಮನಹರಿಸಲು ಸಲಹೆ ನೀಡಿ, ನಮ್ಮ ಧಾರವಾಡದ ಪರಿಸರ ಪ್ರೇಮ ತಂಡದ ಆಶಯದಂತೆ, ಹೊಸ ವರ್ಷವನ್ನು ಈ ಪುಟ್ಟ ಗ್ರಾಮದಲ್ಲಿ ಮಕ್ಕಳಿಗೆ ಟ್ರ್ಯಾಕ್ ಸೂಟ ನೀಡುವದರ ಮೂಲಕ ಆಚರಿಸಿದ್ದೇವೆ ಎಂದರು.

ಮುಖ್ಯ ಅತಿಥಿಯಾಗಿದ್ದ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ತಾಲೂಕಿನ ಅಧ್ಯಕ್ಷ ಅಜೀತ ದೇಸಾಯಿ, ಸಂಘದ ವತಿಯಿಂದ ಮಲ್ಲಿಕಾರ್ಜುನ ತೊದಲಬಾಗಿ ಅವರಿಗೆ ಸನ್ಮಾನ ಮಾಡಿ, ಒಬ್ಬ ಕೆ ಎ ಎಸ್ ಅಧಿಕಾರಿ ಹೊಸ ವರ್ಷವನ್ನು ತುಂಬಾ ಸರಳವಾಗಿ ಮತ್ತು ವೈಶಿಷ್ಟಪೂರ್ಣವಾಗಿ ಮಕ್ಕಳ ಜೊತೆಗೆ ಮಗುವಾಗಿ ಮಕ್ಕಳಿಗೆ ಟ್ರ್ಯಾಕ್ ಸೂಟ ನೀಡುವುದರ ಜೊತೆಗೆ ಮಕ್ಕಳಿಗೆ ಭಾವನಾತ್ಮಕ ಸಲಹೆಗಳನ್ನು ನೀಡಿ, ನಮ್ಮ ಭಾರತೀಯ ಸಂಸ್ಕೃತಿ ಉಳಿಯುವ ನಿಟ್ಟಿನಲ್ಲಿ ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಪರಿಸರ ಪ್ರೇಮ ತಂಡದ ಸಂಚಾಲಕರಾದ ವೀರೇಶ ಹಿರೇಮಠ್ ಎಲ್ ಐ ಲಕ್ಕಮ್ಮನವರ ಸದಸ್ಯರಾದ ಬಸವರಾಜ ಬಡಿಗೇರ ಎಲ್ಲಪ್ಪ ಸಾಲುಂಕೆ ಬಸವರಾಜ ಕುಡುವಾಕ್ಕಲಿಗೇರ ಚನಬಸನಗೌಡ ಪಾಟೀಲ,ಸೋಮನ ಗೌಡ ಪಾಟೀಲ,ಯಲ್ಲಪ್ಪಗೌಡ ಪಾಟೀಲ,ಶಂಕರಗೌಡ ಪಾಟೀಲ,ಅಲ್ಲಾಭಕ್ಷ ಡಾವಣಗೇರಿ,ಲಕ್ಷ್ಮಿ ಕರಮಡಿ,ರಮಜಾನಬಿ ಲಾಡಕನ್ ಲಕ್ಷ್ಮಿ ಕರಮಡಿ
ರಮಜಾನಬಿ ಲಾಡಕನ್ ಮುಂತಾದವರು ಇದ್ದರು.

ನಾಗಲಿಂಗ ಹುಗ್ಗಿ ಸ್ವಾಗತಿಸಿ ನಿರೂಪಿಸಿದರು ಮುಖ್ಯ ಶಿಕ್ಷಕಿ ನದಾಫ್ ವಂದಿಸಿದರು