ನವಲಗುಂದ 31 : ಕರುನಾಡಿನ ಋಣ ತೀರಿಸಲು ಬಂದಿರುವೆ ಎಂದು ಕೇಂದ್ರದ ಮಾಜಿ ಸಚಿವರಾದ ತಮಿಳುನಾಡಿನ ರಾಧಾಕೃಷ್ಣ ಅವರು ಹೇಳಿದರು.
ಅವರು ತಾಲ್ಲೂಕಿನ ಕರ್ಲವಾಡ ಗ್ರಾಮದಲ್ಲಿ ಸಂಘಟನಾ ಪರ್ವ ಸಭೆಯನ್ನುದ್ದೇಶಿಸಿ ಮಾತನಾಡುತ್ತ, ಕರುನಾಡಿನ ಬಿಜೆಪಿ ಕಾರ್ಯಕರ್ತರು ನಮ್ಮ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿ ಹೆಚ್ಚು ಕ್ರೀಯಾಶಿಲರಾಗಿ ಕೆಲಸ ಮಾಡಿದ ಪರಿಣಾಮ ನಾನು ಕೇಂದ್ರದ ಸಚಿವನಾಗಿ ಕಾರ್ಯನಿರ್ವಹಿಸಲು ಸಾದ್ಯವಾಗಿದ್ದು ಮತ್ತು ಬೂತ್ ಮಟ್ಟದಲ್ಲಿ ಸಮಿತಿಗಳು ಕ್ರಿಯಾಶೀಲವಾಗಿ ಗಮನವಹಿಸಿ ಆ ಸಮಿತಿಗಳು ಮುಂಬರುವ ಚುನಾವಣೆಯಲ್ಲಿ ಮಹತ್ವ ಪಡೆಯಲಿವೆ ಎಂದರು.
ಮಾಜಿ ಸಚಿವರಾದ ಶಂಕರ ಪಾಟೀಲಮುನೇನಕೊಪ್ಪ ಅವರು ಮಾತನಾಡಿ, ಪಕ್ಷ ಸಂಘಟನೆಗೆ ಬೂತ್ ಸಮಿತಿಗಳು ಮುನ್ನುಡಿಯಾಲಿವೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಕಾರ್ಯನಿರ್ವಹಿಸಿದಲ್ಲಿ ಮುಂಬರುವ ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ಪಕ್ಷಕ್ಕೆ ಲಾಭವಾಗಲಿದೆ ಮತ್ತು ಪಕ್ಷದ ಸಂಘಟನೆಗಾಗಿ ತಮ್ಮ ಸಂಪೂರ್ಣ ಸಮಯವನ್ನು ಮೀಸಲಿಡುವದಾಗಿ ಕಾರ್ಯಕರ್ತರಿಗೆ ತಿಳಿಸಿದರು.
ನವಲಗುಂದ ಮಂಡಲದ ಅಧ್ಯಕ್ಷ ಗಂಗಪ್ಪ ಮನಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಬೂತ್ ಸಮಿತಿಗಳನ್ನು ಯಶಸ್ವಿಯಾಗಿ ಮಾಡುವದರ ಮೂಲ ಉದ್ದೇಶವೆ ಫಲಿತಾಂಶದ ದಿಕ್ಸೂಚಿಯಾಗಿರಲಿವೆ. ಅಧಿಕಾರದ ಚುಕ್ಕಾಣಿ ಹಿಡಿಯುವುದು
ಎಂದರು.
ಮುಂದೆ ಎಲ್ಲ ಚುನಾವಣೆಗಳು ಕಾರ್ಯಕ್ರಮಗಳಿಗೆ ಕಂಕಣ ಬದ್ಧರಾಗಿ ಕಾರ್ಯ ನಿರ್ವಹಿಸೋಣ ಎಂದರು.
ಇದೆ ವೇಳೆ ಮಡಿವಾಳಯ್ಯ ಹಿರೇಮಠ, ಈರಣ್ಣ ಧಾರವಾಡ, ಅಣ್ಣಪ್ಪ ಬೊಮ್ಮಗೌಡ್ರರವರನ್ನು ಬೂತ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ರಾಜ್ಯ ಶಿಸ್ತು ಸಮಿತಿ ಅದ್ಯಕ್ಷ ಲಿಂಗರಾಜ ಪಾಟೀಲ, ಜಿಲ್ಲಾ ಗ್ರಾಮೀಣ ಅದ್ಯಕ್ಷ ನಿಂಗಪ್ಪ ಸುತಗಟ್ಟಿ, ಈರಣ್ಣ ಜಡಿ, ಸಾಯಿಬಾಬಾ ಆನೆಗುಂದಿ, ಸಿದ್ದನಗೌಡಪಾಟಿಲ, ದೇವರಾಜಸ್ವಾಮಿ ಹಿರೇಮಠ, ಅರುಣ ಮೆಣಸಿನಕಾಯಿ, ಚಂದ್ರಶೇಖರ ಕರ್ಲವಾಡ, ಆನಂದ ಜಕ್ಕನಗೌಡರ ಪ್ರಕಾಶ ಪಾಟೀಲ ರೋಹಿತ ಮಟ್ಟಿಹಳ್ಳಿ ಆನಂದ ಅಮಾತ್ಯನವರ ಮುಂತಾದವರು ಉಪಸ್ಥಿತರಿದ್ದರು.