![Jijamata and Sri Swami Vivekananda Jayanti celebrations](https://independentsangramnews.com/wp-content/uploads/2025/01/WhatsApp-Image-2025-01-13-at-1.32.12-AM.jpeg)
ಧಾರವಾಡ : ಮರಾಠ ವಿದ್ಯಾ ಪ್ರಸಾರಕ ಮಂಡಳ ಹಾಗೂ ಅಂಗ ಸಂಸ್ಥೆಗಳ ಸಂಯೋಗದಲ್ಲಿ ಶ್ರೀ ಜೀಜಾಮಾತಾ ಹಾಗೂ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎನ್.ಮೊರೆ ಅವರು ವಹಿಸಿದ್ದರು ರಾಜಮಾತ ಜೀಜಾಬಾಯಿ ಅವರು ಶಿಸ್ತುಭದ್ಧವಾಗಿ ಶಿವಾಜಿಯನ್ನು ಬೆಳೆಸದಿದ್ದರೆ ಹಿಂದುತ್ವ ಉಳಿಯುತ್ತಿದ್ದಿಲ್ಲ ಎಂದು ಸಂಸ್ಥೆಯ ಉಪಾಧ್ಯಕ್ಷರಾದ ಎಲ್ಲಪ್ಪ ಚೌಹಾಣ ಅವರು ಮಾತನಾಡಿದರು ಸ್ವಾಮಿ ವಿವೇಕಾನಂದರ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಭವಿಷ್ಯ ಉಜ್ವಲವಾಗುವುದು ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ರಾಜು ಬಿರಜೇನವರ ಅವರು ನುಡಿದರು ವೇಷ ಭೂಷಣಗಳನ್ನು ನೋಡಿ ಮನುಷ್ಯನನ್ನು ಅಳಿಯಬಾರದು ಅವನ ವ್ಯಕ್ತಿತ್ವವನ್ನು ನೋಡಿ ಮನುಷ್ಯನನ್ನು ತೂಗಬೇಕು ಎಂದು ಸಂಸ್ಥೆಯಲ್ಲಿ ನಿರ್ದೇಶಕರಾದ ಸುನಿಲ ಮೊರೆ ಅವರು ಹೇಳಿದರು ಮಹಾನುಭಾವರ ಜೀವನ ಚರಿತ್ರೆಯನ್ನು ಸವಿವರವಾಗಿ ಸಹಶಿಕ್ಷಕಿಯಾದ ಅಶ್ವಿನಿ ವಾಡ್ಕರ ಅವರು ವಿವರಿಸಿದರು ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ದತ್ತಾತ್ರೇಯ ಮೋಟೆ ಅಂಗ ಸಂಸ್ಥೆಯ ಮುಖ್ಯೋಧ್ಯಾಪಕರಾದ ಅಶೋಕ ಬಾಬರ , ಮೀನಾಕ್ಷಿ ಘಾಟಗೆ ಪ್ರಾಚಾರ್ಯ ಶ್ ಎಸ್ಎಂ ಸಂಕೋಜಿ ಎಂ ಎಸ್ ಗಾಣಗೇರ ಸಂಸ್ಥೆಯ ಶಿಕ್ಷಕ ಶಿಕ್ಷೇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.