ಶ್ರೀ ಸಾಯಿ ಸಂಸ್ಥೆಯು ಶಿಕ್ಷಣ ಕ್ಷೇತ್ರಗಳಲ್ಲಿ ಅಷ್ಟೆ ಅಲದ್ಲೆ ವಿವಿದ ಸಮಾಜ ಮುಖಿ ಸೇವೆಯಲ್ಲಿ ನಿರತರಾಗಿರುವುದು ಹೆಮ್ಮೆಯ ಸಂಗತಿ- ಶಂಕರ ಕೆ ಕಲ್ಲೋಳಿಕರ

ಧಾರವಾಡ : ಶ್ರೀ ಸಾಯಿ ಶಿಕ್ಷಣ ಸಂಸ್ಥೆ ಸತತ ಎಂಟು ವರ್ಷಗಳಿಂದ ಹಲವಾರು ಕ್ಷೇತ್ರಗಳಲ್ಲಿ ಸೇವೆಯಲ್ಲಿ ನಿರತರಾಗಿರುವುದು ಹೆಮ್ಮೆಯ ವಿಷಯ, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಮಕ್ಕಳ ವೈಯಕ್ತಿಕ ಕಾಳಜಿ ಈ ಸಂಸ್ಥೆಯ ಕನಸು ಅದರಂತೆ ಈಗಿನ ಕಾಲದಲ್ಲಿ ಶಿಕ್ಷಣವು ವ್ಯಾಪಾರಿಕರಣ ಆಗಿರುವುದು ದುರದಷ್ಟಕರ ವಿಷಯ ಅದರಲ್ಲಿ ಈ ಸಂಸ್ಥೆಯು ಮಕ್ಕಳಿಗಾಗಿ ಇಂತಹ ಅಚ್ಚುಮೆಚ್ಚಿನ ಕಾರ್ಯಗಳನ್ನ ಮಾಡುತ್ತಿರುವುದು ನಮ್ಮ ಹೆಮ್ಮೆಯ ಸಂಗತಿ ಎಂದು .ಶಂಕರ ಕೆ ಕಲ್ಲೋಳಿಕರ ನಿವೃತ್ತ ಉಪ ಅರಣ್ಯ ಸಂಕ್ಷಣಾಧಿಕಾರಿಗಳು ಅರಣ್ಯ ಇಲಾಖೆ ರವರು ಹೇಳಿದರು.ಅವರು ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಧಾರವಾಡ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಹಾಗೂ 2024-25 ನೇ ಸಾಲಿನ ಜ್ಞಾನ ಸಿರಿ 08 ಸಮಾರಂಭವನ್ನು ಮೂಲಕ ಉದ್ಘಾಟಿಸಿ ಮಾತನಾಡಿದರು, ಈಗಿನ ಕಾಲದ ಮಕ್ಕಳು ಮೊಬೈಲ್ ಮೊರೆ ಹೋಗಿದ್ದು ದುರಾದೃಷ್ಟಕರ ಈಗಿನ ಜೀವನ ಶೈಲಿ, ಆಹಾರ ಪದ್ಧತಿ ಇವೆಲ್ಲವೂ ನಮ್ಮನ್ನು ಹಾಳುಮಾಡುತ್ತದೆ.ಈ ಸಮಾರಂಭದಲ್ಲಿ ಬಾಗವಹಿಸುವುದು ನನ್ನ ಸೌಭಾಗ್ಯ ಎಂದು ನುಡಿದರು. ವಿದ್ಯಾರ್ಥಿಗಳಿಗೆಈ ಸಂಸ್ಥೆಯು ಇನ್ನು ಹತ್ತು ಹಲವಾರು ಯೋಜನೆಗಳನ್ನ ರೂಪಿಸಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಾವ ರೀತಿ ಎದುರಿಸಬೇಕು ಎಂದು ವಿವರಿಸಿದರು. ಶಿಕ್ಷಣ ಕೇತ್ರದಲ್ಲಿ ಗಣನಿಯ ಸೇವೆ ಸಲ್ಲಿಸಿದಕ್ಕಾಗಿ ಕುಮಾರಿ ಸುಜಾತಾ ಎಸ್ ಶೇಗುಣಸಿ ಹಾಗೂ ಶ್ರೀ ವೀರೇಶ ಆರ್ ಶಿರುಂದಮಠ ಅವರಿಗೆ ಶ್ರೀ ಸಾಯಿ ಸಂಸ್ಥೆಯ ವತಿಯಿಂದ ಶ್ರೀ ಸಾಯಿ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಡಾ. ವೀಣಾ ಬಿರಾದಾರ, ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಶ್ರೀ ಸಾಯಿ ಮಹಾವಿದ್ಯಾಲಯ ಧಾರವಾಡ ಇವರು ಮಾತನಾಡಿ. ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಅವರ ಜೀವನ ರೂಪಿಸುವುದು ಅವರ ಸಮೃದ್ಧಿ ಗಾಗಿ ಶ್ರಮಿಸುವ ಹಾಗೂ ವಿದ್ಯಾರ್ಥಿಗಳನ್ನು ಉತ್ತಮ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿಸುವ ನಿಟ್ಟಿನಲ್ಲಿ, ಮಹಾವಿದ್ಯಾಲಯವು ಹಗಲಿರುಳು ಶ್ರಮಿಸುತ್ತಿದೆ. ನಾನು ಕಾಲೇಜ ಪ್ರಾರಂಭಿಸುವ ಉದ್ದೇಶ ಮತ್ತು ಕನಸು ಗುಣಮಟ್ಟದ ಶಿಕ್ಷಣವನ್ನು ಕೊಡುವುದಾಗಿದೆ ಎಂದು ನುಡಿದರು. ಅದರಂತೆ ದೇಶವನ್ನು ಮುನ್ನಡಸಲು ಉತ್ತಮ ಪ್ರಜೆಗಳು ಅಗತ್ಯ, ಉತ್ತಮ ಪ್ರಜೆಗಳು ದೊರಯ ಬೇಕಿದ್ದರೆ ಅವರಿಗೆ ಉತ್ತಮ ಶಿಕ್ಷಣ ಅಗತ್ಯ, ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಮಾರಿ ಸುಜಾತ ಎಸ್ ಶೇಗುಣಸಿ ಕಾರ್ಯದರ್ಶಿಗಳು ಶ್ರೀ ಬನಶಂಕರಿ ಎಜ್ಯುಕೇಶನ್ ಸೊಸೈಟಿ ರವರು ಮಾತನಾಡಿ ನಾನು ಗ್ರಾಮೀಣ ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆದು ಈಗ ವಿದ್ಯಾ ಸಂಸ್ಥೆ ಹೆಮ್ಮರವಾಗಿ ಬೆಳೆದಿರುವುದು ಅದು ನನ್ನ ಹೆಮ್ಮೆಯ ವಿಷಯ ನನ್ನ ಒಂದು ಆಶಯ ಗ್ರಾಮೀಣ ವಿದ್ಯಾರ್ಥಿಗಳು ಮುಂದೆ ಬಂದು ನಮ್ಮ ತರಹ ತಾವುಗಳು ಕೂಡ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಎಂದು ಶುಭ ಹಾರೈಸಿದ ಅವರು “ಕಲಿಸುವ ಪಾಠ ಕಲಿತ ವಿದ್ಯೆ ಯಾವತ್ತೂ ಕೈ ಬಿಡಲ್ಲ” ಅದೇ ರೀತಿ “ಎಂದಿಗೂ ಸೋಲಬೇಡಿ ಎಂದಿಗೂ ಮರೆಯಬೇಡಿ” ಎಂದು ವಿದ್ಯಾರ್ಥಿಗಳಿಗೆ ಈ ಕಿವಿ ಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ವೀರೇಶ್ ಆರ್ ಶಿರುಂದಮಠ ಮುಖ್ಯೋಪಾಧ್ಯಾಯರು ಶ್ರೀ ಶಾರದಾ ಪ್ರಾಥಮಿಕ ಹಾಗೂ ಪ್ರೌಢಶಾಲೆ ರವರು ಮಾತನಾಡಿದರು
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತುಕ್ರೀಡಾಕೋಟದಲ್ಲಿ ಹಾಗೂ ವಿವಿದ ಸಾಂಸ್ಕçತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಈ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಪ್ರಾಚಾರ್ಯರಾದ ನಾಗರಾಜ ಶಿರೂರ ರವರು ಮಹಾವಿದ್ಯಾಲಯ ಬೆಳೆದು ಬಂದ ದಾರಿ ಬಗ್ಗೆ ವಿವರಿಸಿದರು ವಿದ್ಯಾರ್ಥಿಗಳು ಪಾಲಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಈ ಸಮಾರಂಭದಲ್ಲಿ ಈ ಸಂಸ್ಥೆಯ ನಿರ್ದೇಶಕರಾದ ಡಾ. ಎಸ್.ಬಿ. ಗಾಡಿ, ಪ್ರೋ ಎಸ್ ವ್ಹಿ ಗುರುಮಠ, ಅನ್ನಪೂರ್ಣ ಎಸ್ ಗುರುಮಠ, ಬೋಧಕ-ಬೋಧಕೇತರ ಸಿಬ್ಬಂದಿ ರ‍್ಗ ಮತ್ತು ವಿದ್ಯಾರ್ಥಿಗಳು, ಪಾಲಕರು ಹಾಜರಿದ್ದರು.ಸ್ವಾಗತ ಭಾಷಣವನ್ನು ಬಾಪು ಮೊರಂಕರ , ಅತಿಥಿಗಳ ಪರಿಚಯವನ್ನು ಮೌನೇಶ ಬಡಿಗೇರ ವಂದನಾರ್ಪಣೆಯನ್ನು  ಸಾವಕ್ಕಾ ರವರು ನೆರವೇರಿಸಿದರು.

  • Related Posts

    ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ

    ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…

    ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ

    ಧಾರವಾಡ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ ಶಾಖೆಯ 2024 2025 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಂಗಳವಾರ, ದಿ 04 ರಂದು ಮುಂಜಾನೆ 10:30 ಗಂಟೆಗೆ ಕನ್ನಡ ಕುಲಪುರೋಹಿತ ಆಲೂರು ವಂಕಟರಾವ ಸಾಂಸ್ಕೃತಿಕ ಭವನದಲ್ಲಿ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ…

    RSS
    Follow by Email
    Telegram
    WhatsApp
    URL has been copied successfully!