
10 : ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಧಾರವಾಡದ ವತಿಯಿಂದ ಓಪನ್-ಏರ್ ಜಿಮ್ ಅನ್ನು ಸಿಲ್ವರ್ ಆರ್ಚರ್ಡ್ ಬಡಾವಣೆಯಲ್ಲಿರುವ ಉದ್ಯಾನವನದಲ್ಲಿ ಯಶಸ್ವಿಯಾಗಿ ಸ್ಥಾಪಿಸಲಾಯಿತು, ಇದನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ವಿಜಯಾನಂದ ಶೆಟ್ಟಿ ಯವರು ಉದ್ಘಾಟಿಸಿದರು.
ಬರಿ ನಡಿಗೆ ಮಾಡಲು ಬಂದ ಯವಕ, ಯುವತಿಯರು ಅದರೂಂದಿಗೆ ಈ ಉಪಕರಣಗಳ ಸಹಾಯ ದಿಂದ ತಮ್ಮ ಶರೀರ ಗಟ್ಟಿಯಾಗಿಡಲು ಸಹಕಾರಿ ಹಾಗೂ ಇದು ಸಾರ್ವಜನಿಕರ ಆರೋಗ್ಯ ಗೂಸ್ಕರ ಮಾಡಿದ ಸಾಮಾಜಿಕ ಕಾರ್ಯ ಆಗಿದೆ , ಅಲ್ಲದೆ ಸಮುದಾಯದೊಳಗೆ ಆರೋಗ್ಯ ಮತ್ತು ವ್ಯಾಯಾಮ ಮಾಡಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ, ಇಲ್ಲಿನ ನಿವಾಸಿಗಳಿಗೆ ಹೊರಾಂಗಣ ವ್ಯಾಯಾಮ ಸೌಲಭ್ಯಕ್ಕಾಗಿ ಬೇರೆ ಬೇರೆ ತರಹದ ವ್ಯಾಯಾಮ ಉಪಕರಣಗಳನ್ನು ಅಳವಡಿಸಲಾಗಿದೆ.
ವಿಜಯಾನಂದ ಶೆಟ್ಟಿಯವರು ಮಾತನಾಡಿ ಇಂತಹ ಜಿಮ್ ಸ್ಥಾಪನೆಯು ಧಾರವಾಡದ ನಾಗರಿಕರಲ್ಲಿ ಸಾರ್ವಜನಿಕ ಆರೋಗ್ಯವನ್ನು ಹೆಚ್ಚಿಸಲು ಮತ್ತು ಸಕ್ರಿಯ ಜೀವನಶೈಲಿಯನ್ನು ಪ್ರೋತ್ಸಾಹಿಸಲು ರೋಟರಿ ಕ್ಲಬ್ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ , ಇಂತಹ ಹೆಚ್ಚೆಚ್ಚು ಯೋಜನೆಗಳು ರೋಟರಿಯಿಂದ ನಡೆಯಲಿ ಎಂದು ಶುಭ ಹಾರೈಸಿದರು.
ರೋಟರಿಯ ಅಧ್ಯಕ್ಷೆ ಗೌರಿ ಮದಲಭಾವಿ ಮಾತನಾಡಿ ಸಾರ್ವಜನಿಕ ಆಸ್ತಿಯನ್ನು ನಾವೆಲ್ಲ ನಮ್ಮದೆಂದು ಭಾವಿಸಿ, ಇವುಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಆಗಲೇ ಇಂತಹ ಯೋಜನೆಗಳನ್ನು ಸ್ಥಾಪಿಸಿದ್ದು ಸಾರ್ಥಕವಾಗುತ್ತದೆ. ಸಾಮಾನ್ಯವಾಗಿ ಸಮುದಾಯದ ತೊಡಗಿಸಿಕೊಳ್ಳುವಿಕೆ ಇವುಗಳ ಸಮರ್ಪಕ ಬಳಕೆಯಾಗಲು ಸಹಾಯಕಾರಿಯಾಗಿದೆ ಎಂದರು.
ರೋಟರಿಯ ವಲಯ ಸಂಯೋಜಕರಾದ ಡಾ.ರವಿ ಹುಂಜೆ, ಈ ಓಪನ್ ಏರ್ ಜಿಮ್ನ್ನು ಬಳಸಿಕೊಂಡು, ಸ್ಥಳೀಯರು ತಮ್ಮ ಶರೀರವನ್ನು ಶ್ರೇಷ್ಟವಾಗಿ ನೋಡಿಕೊಳ್ಳಿ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಲು ಪ್ರೇರಿತರಾಗಿ ಎಂದು ಆಶಿಸಿದರು.
ಸಿಲ್ವರ್ ಆರ್ಚರ್ಡ್ ಉದ್ಯಾನವನ ಅಧ್ಯಕ್ಷರಾದ ವಾಸುದೇವ ಕೊಣ್ಣುರು ಸ್ವಾಗತಿಸಿದರು. ವಾಣಿ ಮೋಟೆಕರ್ ನಿರೂಪಿಸಿದರು. ಸ್ಮಿತಾ ಮಂತ್ರಿ ವಂದಿಸಿದರು.