ಧಾರವಾಡ 02 : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿಯವರ ಆಗ್ರಹದ ಮೇರೆಗೆ, ಮಾಜಿಮಹಾಪೌರರು ಹಾಗೂ ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ ಅವರ ಸತತ ಪ್ರಯತ್ನದಿಂದ ಅಂದಾಜು 27 ಲಕ್ಷ ವೆಚ್ಚದಲ್ಲಿ, ಧಾರವಾಡ ಮರಾಠಾ ಕಾಲೋನಿಯ ಇಡಗುಂಜಿ ಗಣಪನ ಮಹಾಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿಮಹಾಪೌರ ಈರೇಶ ಅಂಚಟಗೇರಿ, ಕಳೆದ 34 ವರ್ಷಗಳ ದೀರ್ಘಕಾಲದ ಬೇಡಿಕೆ ಇದಾಗಿತ್ತು.
ಅಯ್ಯಪ್ಪ ಮಾಲಾಧಾರಿಗಳಿಗೆ ಪೂಜೆ ಸಲ್ಲಿಸಲು ಕಟ್ಟಡ ನಿರ್ಮಾಣದ ಅವಶ್ಯಕತೆ ಇತ್ತು. ಈ ಬೇಡಿಕೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಸೂಚನೆ ಮೇರೆಗೆ ಸಕಲ ಮೂಲಭೂತ ಸೌಕರ್ಯಗಳನ್ನು ಹೊಂದಿದ ಈ ಅಯ್ಯಪ್ಪ ಸ್ವಾಮಿ ಸಭಾಭವನದ ನಿರ್ಮಾಣದಿಂದ ಸ್ಥಳೀಯ ನಾಗರಿಕರು ಹಾಗು ಅಯ್ಯಪ್ಪ ಮಾಲಾಧಾರಿಗಳು ಸತತ ನಲವತ್ತೆಂಟು ದಿನಗಳ ಕಾಲ ವೃತ ಆಚರಿಸಲು ಅನುಕೂಲಕರವಾಗಲಿದೆ ಎಂದರು.
ವೃತಧಾರಿಗಳು ವೃತ ಮಾಡಲು ಅನುಕೂಲಕರವಾಗುವ ಸುಸಜ್ಜಿತ ಸ್ನಾನಗೃಹ, ಪೂಜಾಗೃಹ ನಿರ್ಮಾಣದಿಂದ ಯಥೇಚ್ಛವಾಗಿ ಪೂಜೆ ಪುರಸ್ಕಾರ ಮಾಡಲು ಅನುವಾಗಲಿದೆ .ಏಕಕಾಲದಲ್ಲಿ ಐವತ್ತು ಅಯ್ಯಪ್ಪ ಮಾಲಾಧಾರಿಗಳು ಪೂಜಾ ಕಾರ್ಯಕ್ರಮ ಜರುಗಿಸಬಹುದು ಹಾಗು ಸಾರ್ವಜನಿಕರಿಗೆ ಸಭಾ ಭವನವನ್ನ ಲೋಕಾರ್ಪಣೆ ಮಾಡಿದ್ದು ಸಂತಸದ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಮಹಾಪೌರರೊಂದಿಗೆ ಇಡಗುಂಜಿ ದೇವಸ್ಥಾನ ಅಧ್ಯಕ್ಷರಾದ ಗಂಗಾಧರ ಹೊಸಮನಿ, ಗುರುಸ್ವಾಮಿ ಶೇಖರ ತುಪಸುಂದರ, ಹೇಮಂತ್ ಗುರ್ಲುಸೂರ್, ಚಿದಾನಂದ ಸವದತ್ತಿ, ಶ್ರೀಧರ್ ತುಪಸುಂದರ್, ಸುರೇಶ್ ಬೇಂದ್ರೆ,ಪುಟ್ಟು ನಾಯಕ್, ಸತೀಶ್ ಸವದತ್ತಿ,ಸಂತೋಷ್ ಸವದತ್ತಿ,ಸಂದೀಪ್ ಸವದತ್ತಿ,ಆನಂದ್ ಸಾಟಿ,ರಾಜು ಶಿವಾಲೆ ಹಾಗು ಅಯ್ಯಪ್ಪ ಮಾಲಾಧಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.