ಐಐಟಿ ಧಾರವಾಡ ಕುಲಸಚಿವರಿಗೆ 30 ನೇ ಅಂತರ-ಐಐಟಿ ಸಿಬ್ಬಂದಿ ಕ್ರೀಡಾಕೂಟದಲ್ಲಿ ಚಿನ್ನದ ಪದಕ.
ಧಾರವಾಡ : ಭಾರತೀಯ ತಂತ್ರಜ್ಞಾನ ಸಂಸ್ಥೆ ಮುಮ್ಮಿಗಟ್ಟಿ ಧಾರವಾಡದ ಕುಲಸಚಿವರಾದ ಡಾ. ಕಲ್ಯಾಣ್ ಕುಮಾರ್ ಭಟ್ಟಾಚಾರ್ಜಿ ಅವರು 55 ವರ್ಷ ಮೇಲ್ಪಟ್ಟ ವಿಭಾಗದ 100 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಡಿಸೆಂಬರ್ 23ರಿಂದ 29ರವರೆಗೆ ಭಾರತೀಯ ತಂತ್ರಜ್ಞಾನ ಸಂಸ್ಥೆ ಹೈದರಾಬಾದ್‌ನಲ್ಲಿ ನಡೆದ 30 ನೇ ಅಂತರ-ಐಐಟಿ ಸಿಬ್ಬಂದಿ ಕ್ರೀಡಾಕೂಟ-2025 ದಲ್ಲಿ ಈ ಸಾಧನೆ ಮಾಡಿದ್ದಾರೆ.
ಇದು ಅಂತರ-ಐಐಟಿ ಸಿಬ್ಬಂದಿ ಕ್ರೀಡಾಕೂಟದಲ್ಲಿ ಐಐಟಿ ಧಾರವಾಡ ಸಿಬ್ಬಂದಿ ತಂಡಕ್ಕೆ ದೊರೆತ ಮೊದಲ ಚಿನ್ನದ ಪದಕವಾಗಿದ್ದು, ಸಂಸ್ಥೆಗೆ ವಿಶೇಷ ಗೌರವ ತಂದಿದೆ.
ಡಾ. ಭಟ್ಟಾಚಾರ್ಜಿ ಅವರ ಈ ಗಮನಾರ್ಹ ಸಾಧನೆಗೆ ಸಂಸ್ಥೆ ಹೃತ್ತೂರ್ವಕ ಅಭಿನಂದನೆ ಸಲ್ಲಿಸಿದೆ.





