ಸಂಸ್ಥೆಗಳ ಹೆಸರು ಉಳಿಯಬೇಕಾದರೆ ಅರ್ಹರಿಗೆ ಪ್ರಶಸ್ತಿ ಕೊಡಬೇಕು : ಸಭಾಪತಿ ಬಸವರಾಜ ಹೊರಟ್ಟಿ

ರೈತರು ಮತ್ತು ಶಿಕ್ಷಕರಿಂದ ಮಾತ್ರ ನಾಡು ಶ್ರೇಷ್ಠತೆ ಕಾಣುತ್ತದೆ. ಶಿಕ್ಷಕರು ಸಂಸ್ಕಾರ ಕಲಿಸುವುದರಿಂದ ಸಮಾಜ ಸುಧಾರಣೆಯತ್ತ ಸಾಗುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಅವರು ಹಾವೇರಿಯ ಕಲಾ ಸ್ಪಂದನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಸ್ವರ್ಣ ಪ್ಯಾರಡೈಸ್ ಹೋಟೆಲ್‌ನ ಮಂಥನ ಸಭಾ ಭವನದಲ್ಲಿ  ಹಿರೇಬಾಸೂರು ಗ್ರಾಮದ ಕೃಷಿಕ ದಿ. ಮೌನೇಶಪ್ಪ ಕತ್ತಿ ಹೆಸರಿನಲ್ಲಿ ಕೊಡ ಮಾಡುವ ವೈದ್ಯಶ್ರೀ -2024 ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.


ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ಕ್ಷೇತ್ರದಲ್ಲೂ ಪ್ರಶಸ್ತಿಯನ್ನು ಕೊಡುತ್ತಿವೆ. ಇದರ ಹೊರತಾಗಿ ಖಾಸಗಿ ಸಂಸ್ಥೆಗಳು ಪ್ರಶಸ್ತಿ ಕೊಡುತ್ತವೆ. ಆ ಸಂಸ್ಥೆಗಳ ಹೆಸರು ಉಳಿಯಬೇಕಾದರೆ ಅರ್ಹರಿಗೆ ಪ್ರಶಸ್ತಿ ಕೊಡಬೇಕು. ಆದರೆ, ದಿ. ಮೌನೇಶಪ್ಪ ಕತ್ತಿ ಹೆಸರಿನಲ್ಲಿ ಕೊಡುವ ಪ್ರಶಸ್ತಿಯು ಬಹಳಷ್ಟು ಶ್ರೇಷ್ಠತೆ ಮತ್ತು ಅರ್ಹತೆಯನ್ನು ಹೊಂದಿದವರಿಗೆ ಕೊಡುತ್ತಿರುವುದು ಶ್ಲಾಘನೀಯ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ ಧರ್ಮ ಮತ್ತು ಶ್ರೇಷ್ಠತೆ ಹೆಚ್ಚು ಇದೆ. ಆಸ್ಪತ್ರೆಗಳಲ್ಲಿ ಕೆಟ್ಟ ಘಟನೆಗಳು ನಡೆದರೂ ಅದನ್ನು ಮರೆತು ವೈದ್ಯಕೀಯ ಸಿಬ್ಬಂದಿ ಮಾಡುವ ಸೇವೆ ಶ್ಲಾಘನೀಯ ಎಂದರು.

ಸ್ವರ್ಣ ಗ್ರೂಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವರೇ ಪರಮಾತ್ಮನ ರೂಪ. ಅವರ ಸೇವೆ ಯಾವುದೇ ರೀತಿಯಿಂದ ಬಣ್ಣಿಸಿದರೂ ಸಾಲದು. ಯಾವುದೇ ವೈದ್ಯರ ಬಳಿ ಹೋದರೂ ವಿಶ್ವಾಸ ಇರಬೇಕು. ವಿಶ್ವಾಸ ಇಲ್ಲದಿದ್ದರೆ ಚಿಕಿತ್ಸೆ ಫಲಿಸುವುದಿಲ್ಲ. ಛಲ ಇದ್ದವರು ಮಾತ್ರ ವೈದ್ಯರಾಗಲು ಸಾಧ್ಯ ಎಂದರು.

ಮಕ್ಕಳ ತಜ್ಞ ಡಾ. ದೇವರಾಜ ರಾಯಚೂರು ಮಾತನಾಡಿ, ನಮ್ಮ ವೈದ್ಯ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಚರಕ, ಶುಶ್ರುತ ಋಷಿ-ಮುನಿಗಳು ಕೂಡ ವೈದ್ಯರಾಗಿ ತಮ್ಮ ಸಮಾಜ ಸೇವೆಯನ್ನು ಸಲ್ಲಿಸಿದ್ದರು. ಆರ್ಟಿಫಿಸಿಯಲ್ ಇಂಟೆಲಿಜೆನ್ಸಿ ಕಾಲಘಟ್ಟದಲ್ಲಿರುವ ನಾವು, ನಮ್ಮ ಸೇವೆ ಪರಿಗಣಿತವಾಗುವುದು ಒಳ್ಳೆಯ ಚಿಕಿತ್ಸೆಯಿಂದ ಎಂದರು.

ಪ್ರಶಸ್ತಿ ಪುರಸ್ಕೃತೆ ಡಾ. ಕವಿತಾ ಏವೂರ ಮಾತನಾಡಿ, ನಾವು ಮಾಡಿದ ಅಲ್ಪ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿರುವುದರಿಂದ ಸಂತೋಷವಾಗಿದೆ. ನನಗೆ ನೀಡಿದ ನಗದು ಸಂಸ್ಥೆಗೆ ಮರುಪಾವತಿಸುತ್ತೇನೆ ಎಂದರು.
ಕೆಎಂಸಿಆರ್‌ಐ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಡಾ. ಪ್ರಕಾಶ ಸಂಕನೂರ, ಕಸಾಪ ಧಾರವಾಡ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಮಹೇಶ ಹೊರಕೇರಿ ಮಾತನಾಡಿದರು.
ಪ್ರಶಸ್ತಿ ಸಂಸ್ಥಾಪಕ ಮಾರ್ತಾಂಡಪ್ಪ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುತ್ತೂರಿನ ಶಸ್ತ್ರಚಿಕಿತ್ಸಕ ಡಾ. ರವಿಶಂಕರ ಪರ್ವಾಜೆ, ಕೆಎಂಸಿಆರ್‌ಐನ ಪ್ಯಾಥಾಲಜಿ ವಿಭಾಗದ ಸಹಪ್ರಾಧ್ಯಾಪಕಿ ಡಾ. ಕವಿತಾ ಏವೂರು ಅವರಿಗೆ ವೈದ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. 20ಕ್ಕೂ ಹೆಚ್ಚು ಸಾಧಕ ಆದರ್ಶ ದಂಪತಿಗಳನ್ನು ಸನ್ಮಾನಿಸಲಾಯಿತು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ. ಸತ್ಯನಾರಾಯಣ ಮಾಸ್ತಮ್ಮನವರ, ಡಾ.ಪಿ.ಎನ್. ಬಿರಾದಾರ, ಡಾ. ಕವನ್ ದೇಶಪಾಂಡೆ, ಡಾ. ಶ್ವೇತಾ ಸಂಕನೂರ ಇತರರು ಇದ್ದರು.
ಪ್ರೇಮಾನಂದ ಶಿಂಧೆ ಅವರ ತಂಡ ಸುಗಮ ಸಂಗೀತ ಹಾಗೂ ವಿವಿಧ ನೃತ್ಯ ಕಲಾ ತಂಡಗಳಿಂದ ನೃತ್ಯ ಸಂಭ್ರಮ ಜರುಗಿತು.

ಶಿಕ್ಷಕಿ ವಿಜಯಲಕ್ಷ್ಮಿ ಶೆಟ್ಟಿ ಮತ್ತು ಉಪನ್ಯಾಸಕಿ ಸಂಜನಾ ಎಮ ಕೆ ನಿರೂಪಿಸಿದರು, ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿದರು, ಸುರೇಶ ಬೆಟಗೇರಿ ವಂದಿಸಿದರು. ಅಂದಪ್ಪ ಸಂಕನೂರ,ಇಂ ಸುನೀಲ ಬಾಗೇವಾಡಿ, ಗದಿಕೇರಿ, ಶ್ರೀಶೈಲ ಚಿಕನಳ್ಳಿ, ವಿಜಯಕುಮಾರ ಪಾಟೀಲ, ಮಹ್ಮದಗೌಸ ಹಿತ್ತಲಮನಿ, ಮಂಜುನಾಥ ಕತ್ತಿ, ಜಗದೀಶ ಕತ್ತಿ, ಯೋಗೇಶ ಪಾಟೀಲ, ಚಂದ್ರು ಕಲಕೇರಿ, ಮುಂತಾದವರು ಇದ್ದರು.

  • Related Posts

    ಸಿಟಿ ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವುದೇ ನಿರ್ಧಾರಕ್ಕೆ ಬರುವುದು ತಪ್ಪು- ಸಂಸದ ಬಸವರಾಜ ಬೊಮ್ಮಾಯಿ

    ರಾಜ್ಯದಲ್ಲಿ ಪೊಲೀಸ್ ದುರ್ಬಳಕೆ ಹೆಚ್ಚಾಗುತ್ತಿದೆ ಬಸವರಾಜ ಬೊಮ್ಮಾಯಿ ನವದೆಹಲಿ  ಡಿ.21 : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರು ಸದನದಲ್ಲಿ ಅವಾಚ್ಯವಾಗಿ ಹೇಳಿಕೆ ನೀಡಿದ್ದಾರೊ ಇಲ್ಲವೊ ಎಂಬುದರ ಸತ್ಯಶೋಧನೆ ಆಗಬೇಕು. ತನಿಖೆ ಆಗಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ…

    ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಕಂಪ್ಯೂಟರ್ ಶಿಕ್ಷಣ ಬೋಧಿಸಲು ಅತಿಥಿ ಶಿಕ್ಷರರ ಹುದ್ದೆಗೆ ಅರ್ಜಿ ಆಹ್ವಾನ

    ಧಾರವಾಡ ಡಿ.೨೧ :  2024-25 ನೇ ಸಾಲಿನಲ್ಲಿ ಧಾರವಾಡ ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಹುಬ್ಬಳ್ಳಿ ಅಂಚಟಗೇರಿಯ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣ ಬೋಧಿಸಲು ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಡಿಸೆಂಬರ…

    RSS
    Follow by Email
    Telegram
    WhatsApp
    URL has been copied successfully!