ಹೊರನಾಡ ಕನ್ನಡಿಗರ ಸಮ್ಮೇಳನಕ್ಕೆ ಚಾಲನೆ.

ಕನ್ನಡ ಭಾಷೆಗೆ ದಕ್ಕೆ ಬಂದರೆ ಕೆಚ್ಚೆದೆಯ ಹೋರಾಟ ನಡೆಸುತ್ತೆವೆ : ಬಸವರಾಜ ಗುರಿಕಾರ

ಧಾರವಾಡ : ಕನ್ನಡಿಗರು ಯಾವುದೇ ಪ್ರದೇಶದಲ್ಲಿ ವಾಸಿಸಿದರು ನಮ್ಮ ಕನ್ನಡ ಭಾಷೆಯನ್ನು ಪೋಷಿಸಿ ಬೆಳೆಸುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಅಖಿಲ ಭಾರತ ಶಿಕ್ಷಕರ ಪಡೆರೇಷ್ ನ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಅಭಿಪ್ರಾಯಪಟ್ಟರು.

ಅವರು ದಕ್ಷಿಣ ಕನ್ನಡ ಮಂಗಳೂರು ಕುದ್ಮಲ ರಂಗರಾವ ಪುರಭವನದಲ್ಲಿ ಜರುಗಿದ ಅನಿವಾಸಿ ಕನ್ನಡಿಗರ ಹಾಗೂ ಹೊರನಾಡ ಕನ್ನಡಿಗರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಸಾವಿರಾರು ಐತಿಹಾಸಿಕ ಹಿನ್ನೆಲೆಯಲ್ಲಿ ಬೆಳೆದು ಬಂದಿರುವ ಕನ್ನಡ ಭಾಷೆ ಬದ್ರವಾದ ನೆಲೆಗಟ್ಟಿನಲ್ಲಿ ನಿಂತಿದೆ, ಕನ್ನಡಿಗರು ಅನ್ಯ ಭಾಷೆಯ ವಿರೋಧಿಗಳಲ್ಲ ಆದರೆ ನಮ್ಮ ಭಾಷೆಗೆ ದಕ್ಕೆ ಬಂದರೆ ಕೆಚ್ಚೆದೆಯ ಹೋರಾಟ ನಡೆಸುತ್ತೆವೆ ಎಂದು ಬಸವರಾಜ ಗುರಿಕಾರ ಆಕ್ರೋಶ ವ್ಯಕ್ತಪಡಿಸಿದರು.
ಲೆಪಿನೆಂಟ್ಟ್ ಜನರಲ್ ಫ್ರಾಂಕ್ ಪರ್ನಾಂಡಿಸ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಶಾಸಕರಾದ ವೇದವ್ಯಾಸ ಕಾಮತ ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿಸೋಜಾ ಪ್ರಥಮ ಸಮ್ಮೇಳಾನಾಧ್ಯಕ್ಷ ಡಾ ಸರ್ವೋತಮ್ಮ ಶೇಟ್ಟಿ ಪದ್ಮರಾಜ ಪೂಜಾರಿ ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದರು ವಿಶ್ವ ಕನ್ನಡಿಗರ ಸಮಿತಿ ಅಧ್ಯಕ್ಷ ಮಂಜುನಾಥ ಸಾಗರ ಕಾರ್ಯಕ್ರಮ ಸಂಘಟಿಸಿದ್ದರು.

ಶಿವರಾಜ್ ಪಾಂಡೇಶ್ವರ ಅಂತರ ರಾಷ್ಟ್ರೀಯ ಹಾಸ್ಯ ಕಲಾವಿದ ಮಹದೇವ ಸತ್ತಿಗೇರಿ ಇತರ ಗಣ್ಯರು ಬಾಗವಹಿಸಿದ್ದರು.