ವಯೋ ನಿವೃತ್ತಿ ಹೊಂದಿದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ ಮುಖ್ಯಸ್ಥ ಡಾ.ಬಿ.ಎಚ್. ಕುರಿಯವರ ಸನ್ಮಾನ ಕಾರ್ಯಕ್ರಮ.
ಧಾರವಾಡ : ಚಿತ್ರಕಲಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಕೌಶಲ್ಯಗಳನ್ನು ಗುರುತಿಸಿ ವಿದ್ಯಾರ್ಥಿಗಳ ಏಳಿಗೆಗೆ ಹಾಗೂ ಕಲಾವಿದರ ಏಳಿಗೆಗೆ ಶ್ರಮಿಸಿದವರಲ್ಲಿ ಧಾರವಾಡ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಬಸವರಾಜ ಕುರಿಯವರ ಅಗ್ರಗಣ್ಯರು ಎಂದು ಧಾರವಾಡ ಚಿತ್ರಕಲಾಶಿಲ್ಪಿ ಡಿ.ವಿ ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ.ಮಾರುತಿ ಹೇಳಿದರು.
ಧಾರವಾಡ ನಗರದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ ಆರ್ಟ್ ಗ್ಯಾಲರಿಯಲ್ಲಿ ನಡೆದ ಹುಬ್ಬಳ್ಳಿ ಧಾರವಾಡ ಚಿತ್ರಕಲಾ ಮತ್ತು ಸಾಹಿತಿ ಬಳಗ ಹಾಗೂ ಆರ್ಟ್ ಪಾಯಿಂಟ್ ಧಾರವಾಡ ವತಿಯಿಂದ ವಯೋ ನಿವೃತ್ತಿ ಹೊಂದಿದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ ಮುಖ್ಯಸ್ಥ ಡಾ.ಬಿ.ಎಚ್ ಕುರಿಯವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರಕಲಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶದ ಬಗ್ಗೆ ಡಾ. ಬಸವರಾಜ ಕುರಿಯವರ ಮಾರ್ಗದರ್ಶನ ನೀಡಿದ್ದಾರೆ. ಇದು ಚಿತ್ರಕಲಾ ಕ್ಷೇತ್ರದಲ್ಲಿನ ವೈವಿಧ್ಯಮಯ ಕೊಡುಗೆಗಳನ್ನು ತೋರಿಸುತ್ತದೆ. ಚಿತ್ರಕಲಾ ಕ್ಷೇತ್ರವು ಪ್ರತಿಭಾವಂತ ಕಲಾವಿದರು, ಶಿಕ್ಷಕರು, ಮತ್ತು ಮಾರ್ಗದರ್ಶಕರ ಕೊಡುಗೆಗಳಿಂದ ಶ್ರೀಮಂತವಾಗಿದೆ ಎಂದರು.
ಹಿರಿಯ ಸಾಹಿತಿ ಡಾ. ಲೋಹಿತ ನಾಯ್ಕರ ಮಾತನಾಡಿ, ವೈಯಕ್ತಿಕ ಹಿತಾಸಕ್ತಿಗಾಗಿ ಹೋರಾಟ ಮಾಡುವವರ ಮಧ್ಯೆ ಸಾಧನೆಯ ಹಾದಿಯಲ್ಲಿ ಸಾಗಿ ವಿದ್ಯಾರ್ಥಿಗಳ ಭವಿಷ್ಯ ಕಟ್ಟಿಕೊಟ್ಟಿರುವ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ ಮುಖ್ಯಸ್ಥ ಡಾ.ಬಿ.ಎಚ್ ಕುರಿಯವರ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ ಮುಖ್ಯಸ್ಥ ಡಾ.ಬಿ.ಎಚ್ ಕುರಿಯವರ ಧಾರವಾಡದಲ್ಲಿ ಚಿತ್ರಕಲೆ ಬೆಳೆಸಿ ಉಳಿಸಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆರ್ಟ್ ಗ್ಯಾಲರಿ ಸ್ಥಾಪನೆಗೆ ಕಾರಣಕರ್ತರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೀರೆಮಲ್ಲೂರು ಈಶ್ವರನ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶಶಿಧರ ತೋಡಕರ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಸ್ ಎಸ್ ಅಂಗಡಿ, ಹಿರಿಯ ಕಲಾವಿದ ಎಂ.ಆರ್ ಬಾಳಿಕಾಯಿ, ಸುರೇಶ ಹಾಲಭಾವಿ, ಡಾ.ಎಸ್.ಸಿ ಪಾಟೀಲ, ಎನ್.ಎಮ್ ದಾಟನಾಳ, ಡಿ.ಎಂ ಬಡಿಗೇರ, ಆರ್.ಬಿ ಗರಗ, ಜೆ.ವಿ ಕಮ್ಮಾರ, ಡಾ.ಬಿ.ಎಂ ಪಾಟೀಲ, ಆರ್.ಎಫ್ ಹಿರೇಗೌಡರ, ಎನ್.ಎಸ್ ನಾಯಕ, ಬಿ.ಆಯ್ ಇಳಗೇರ, ಡಾ.ಸಿ.ಡಿ ಜಟ್ಟೆಣ್ಣನವರ, ಉಪನ್ಯಾಸಕ ಎಸ್.ಕೆ ಪತ್ತಾರ, ಡಾ.ಪ್ರತಾಪ ಬಹುರೂಪಿ, ಡಾ.ಶಂಕರ ಕುಂದಗೋಳ, ವಿಠ್ಠಲ ಬಸಲಿಗುಂದಿ ಸೇರಿದಂತೆ ಇತರರಿದ್ದರು.





