ಧಾರವಾಡ : ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯಾ ಘಟಕ ಧಾರವಾಡ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪಾವಗಡ ತಾಲೂಕು ಘಟಕದ ವತಿಯಿಂದ ಪಾವಗಡ ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯ ಪ್ರಯುಕ್ತವಾಗಿ ಶೈಕ್ಷಣಿಕ ಕಾರ್ಯಗಾರ ಮತ್ತು ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಭವ್ಯ ಸಮಾರಂಭದ ಉದ್ಘಾಟನೆ ಮಾಡಿದ ಪಾವಗಡ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಹೆಚ್ ವಿ ವೆಂಕಟೇಶ್ ರವರು ಹಾಗೂ ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಭಾರತೀಯ ಚಲನಚಿತ್ರ ರಂಗದ ಜನಪ್ರಿಯ ಹಿರಿಯ ನಟಿಯಾದ ವಿನಯಾ ಪ್ರಸಾದ್ ರವರು ಮತ್ತು ಅಂತರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿ ಪಡೆದ “ಸಾವಿತ್ರಿಬಾಯಿ ಫುಲೆ” ಕನ್ನಡ ಚಲನಚಿತ್ರದ ನಿರ್ಮಾಪಕರಾದ ಬಸವರಾಜ್ ಭೂತಾಳಿಯವರು ಹಾಗು ಪಾವಗಡ ತಾಲೂಕು ಘಟಕದ ಅಧ್ಯಕ್ಷೆ ದುರ್ಗಮ್ಮ, ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ
ಸಾವಿತ್ರಿ ಬಾಯಿ ಫುಲೆ ರಾಷ್ಟೀಯ ಶಿಕ್ಷಕಿಯರ ಫೇಡರೇಷನ್ ನವದೆಹಲಿ ಇದರ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಹಾಗೂ
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡ. ಇದರ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಡಾ.ಲತಾ. ಎಸ್ ಮುಳ್ಳೂರ್ ರವರನ್ನು ಸತ್ಕರಿಸಿ ಸನ್ಮಾನಿಸಿದರು ಈ ಸಂದರ್ಭದಲ್ಲಿ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಅನಸೂಯಾ ದೇವಿ ಹಾಗು ರಾಜ್ಯ ಪ್ರದಾನ ಕಾರ್ಯದರ್ಶಿ ರಾಜಶ್ರೀ. ಸಜ್ಜೆಶ್ವರ್ ಹಾಗೂ ರಾಧಮ್ಮ ಜಿಲ್ಲಾ ಅಧ್ಯಕ್ಷರು ಮಧುಗಿರಿ ಶೈಕ್ಷಣಿಕ ಜಿಲ್ಲೆ. ಲತಾಮನಿ ಉಪಸ್ಥಿತರಿದ್ದರು.