ಹುಬ್ಬಳ್ಳಿ 22 : ಇಂದು ವರೂರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ಆಗಮಿಸಿದ್ದ ರಾಜಸ್ಥಾನದ ರಾಜ್ಯಪಾಲ ಸನ್ಮಾನ್ಯ ಹರಿಭಾವು ಬಾಗಡೆ ಯವರನ್ನು ಕರ್ನಾಟಕ ರಾಜ್ಯ ನಾಮದೇವ ಸಿಂಪಿ ಸಮಾಜದ ವತಿಯಿಂದ ಭೇಟಿಮಾಡಲಾಯಿತು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ, ಸಮಾಜದ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿ ರಾಜ್ಯ ಸಮಾಜದ ವತಿಯಿಂದ ನಾಗರಿಕ ಸನ್ಮಾನ ಸ್ವೀಕರಿಸಲು ಬೆಂಗಳೂರಿಗೆ ಬರಲು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ನಾಮದೇವ ಸಿಂಪಿ ಸಮಾಜದ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಸಲ್ಕರ,ರಾಣೆಬೆನ್ನೂರು ಸಮಾಜದ ಅಧ್ಯಕ್ಷ ಪ್ರವೀಣ ಕೋಪಡೆ೯, ಹುಬ್ಬಳ್ಳಿ ಸಮಾಜದ ಅಧ್ಯಕ್ಷ ಬಸವರಾಜ ಬಗಾಡೆ, ರಾಜೇಶ್ ಗಾಂಡೊಳಕರ,ಮತ್ತು ರಾಮಕೃಷ್ಣ ಕೋಪಡೆ೯ ಶಿಗ್ಗಾಂವಿ ಸಮಾಜದ ಹಿರಿಯರಾದ ಕೆದಾರೆಪ್ಪ ಬಗಾಡೆ,ಧಾರವಾಡ ಸಮಾಜದಿಂದ ಅಶೋಕ ಬೊಂಗಾಳೆ , ವಿವೇಕ ಖಟಾವಕರ್ ಉಪಸ್ಥಿತರಿದ್ದರು.