ಹುಬ್ಬಳ್ಳಿ : ಬಿಜೆಪಿಯವರು ಮಹಾನಗರ ಪಾಲಿಕೆ ಅನುದಾನದ ಹೆಸರಿನಲ್ಲಿ ನಡೆಸಿದ ಪ್ರತಿಭಟನೆಯು ಸರಿಯಲ್ಲ. ಪ್ರಚಾರದ ಗೀಳಿಗೆ ಪ್ರತಿಭಟನೆ ನಡೆಸಿರುವುದು ಸರಿಯಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಗೌರಿ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಾಲಿಕೆಗೆ ಸರಕಾರದಿಂದ ಹಣ ಬರಬೇಕಿದೆ.ಬೊಜೆಪಪಿಯವರಿಗೆ ಸರ್ವ ಪಕ್ಷದ ಸದಸ್ಯರನ್ನು ಕರೆದುಕೊಂಡು ಸಿಎಂ ಬಳಿ ಹೋಗಬೇಕಿತ್ತು. ಅಭಿವೃದ್ಧಿಗಿಂತ ರಾಜಕೀಯ ಮುಖ್ಯವಾಗಿದೆ.
ಕಾಂಗ್ರೆಸ್ನೊಂದಿಗೆ ಮಹಾಪೌರರು,ಉಪಮಹಾಪೌರರು,ಸಭಾ ನಾಯಕರು ಸಭೆ ನಡೆಸಿ ಯಾವ ಯಾವ ಸರಕಾರದಿಂದ ಎಷ್ಟು ಹಣ ಬರಬೇಕು ಎಂಬುದನ್ನು ಚರ್ಚೆ ನಡೆಸಿ ಮುಖ್ಯಮಂತ್ರಿ ಬಳಿ ಹೋಗಬಹುದು ಎಂದರು.