
ಧಾರವಾಡ 29 : ಜಗತ್ತಿನಲ್ಲಿ ನೀರಿಗಾಗಿ ಯುದ್ಧ ನಡೆದರೂ, ಆಶ್ಚರಿ ಇಲ್ಲ. ಇಂಥ ಸಂದಿಗ್ಧತೆಯಲ್ಲಿ ನೀರಿನ ಸದ್ಬಳಕೆ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದ ಎನ್ನೆಸ್ಸೆಸ್ ಶಿಬಿರಾರ್ಥಿಗಳ ಕಾರ್ಯವನ್ನು ಕಲಕೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಸ್.ಐ.ಸಜ್ಜನ ಶ್ಲಾಘಿಸಿದರು.
ಕವಿವಿ ರಾಷ್ಟ್ರೀಯ ಸೇವಾ ಯೋಜನೆ ಕೋಶ ಹಾಗೂ ಕಲಕೇರಿ ಗ್ರಾಪಂ ಸಹಯೋಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಪದವಿ-ಸ್ನಾತಕೋತ್ತರ ಅಧ್ಯಯನ ಕೇಂದ್ರ ದೇವಗಿರಿ ಗ್ರಾಮದಲ್ಲಿ ನಡೆಸಿದ ಎನ್ನೆಸ್ಸೆಸ್ ಶಿಬಿರದ ಸಮಾರೋಪ ಭಾಷಣ ಮಾಡಿದರು.
ಗ್ರಾಪಂ ಸದಸ್ಯ ಸೋಮಲಿಂಗ ದುರ್ಗಾಯಿ, ಶಿವಾಜಿ ಕಾಲೇಜಿನ ಎನ್ನೆಸ್ಸೆಸ್ ಶಿಬಿರಾರ್ಥಿಗಳು ಏಳು ದಿನಗಳು ನಮ್ಮೂರಲ್ಲಿ ಶ್ರದ್ಧೆಯಿಂದ ಉತ್ತಮ ಕೆಲಸ ಮಾಡಿದ್ದು ಸಂತಸ ತಂದಿದೆ. ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಗ್ರಾಮಸ್ಥ ಗೌಸುಸಾಬ್ ಧಾರವಾಡ ಮಾತನಾಡಿ, ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕ ಸದೃಢತೆ ಕಾಯ್ದುಕೊಳ್ಳಬೇಕು. ಎನ್ನೆಸ್ಸೆಸ್ ಬದುಕಿನ ಮೌಲ್ಯಮಾಪನ ಮಾಡಲಿದೆ. ಜೀವದ ಪಾಠ ಹೇಳಿಕೊಡುತ್ತದೆ. ಈ ಸಂಸ್ಕೃತಿ ಅಳವಡಿಸಿಕೊಳ್ಳುವಂತೆ ಹೇಳಿದರು.
ದೇವಗಿರಿ ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಬಿ.ಎಸ್. ಪಾಟೀಲ ಮಾತನಾಡಿ, ಎನ್ನೆಸ್ಸೆಸ್ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಮಯ ಪಾಲನೆ ಜೊತೆಗೆ ನೈರ್ಮಲ್ಯ, ಕೃಷಿ ಬದುಕು ಹಾಗೂ ಶ್ರಮ ಸಂಸ್ಕೃತಿಯನ್ನು ಕೂಡ ಕಲಿಸುತ್ತದೆ ಎಂದರು.
ಪ್ರಾಚಾರ್ಯ ಎಂ.ಎಸ್.ಗಾಣಿಗೇರ ಮಾತನಾಡಿ, ದೇವಗರಿ ಗ್ರಾಮದಲ್ಲಿ 7 ದಿನಗಳು ನಡೆದ ಶಿವಾಜಿ ಕಾಲೇಜಿನ ಎನ್ನೆಸ್ಸೆಸ್ ಶಿಬಿರದ ಯಶಸ್ವಿಗಾಗಿ ಸಹಕಾರ ನೀಡಿದ ಕೆಲಕೇರಿ ಗ್ರಾಪಂ ಸದಸ್ಯರು, ದೇವಗರಿ ಸರ್ಕಾರಿ ಶಾಲೆ ಎಸ್ಡಿಎಂ ಸದಸ್ಯರ ಸಹಕಾರ ಸ್ಮರಿಸಿದರು.
ಎನ್ನೆಸ್ಸೆಸ್ ಅಧಿಕಾರಿ ಪ್ರವೀಣ ಉಳ್ಳಿಗೇರಿ ಏಳು ದಿನದ ವರದಿ ವಾಚಿಸಿದರು. ಶಿಬಿರಾರ್ಥಿಗಳಾದ ಜ್ಯೋತಿ ಗುಮ್ಮಗೋಳ, ಕುಮಾರ ಮಾನೆ, ಅಶ್ವರ್ಯ ಚಿನ್ನಪ್ಪಗೌಡರ, ಕುಮಾರ ಸಾಯಿರಾಮ್ ಅನೇಕರು ಏಳು ದಿನದ ಶಿಬಿರದ ಅನುಭವ ಹಂಚಿಕೊಂಡರು.
ಗ್ರಾಪಂ ಸದಸ್ಯ ಸುನೀಲ ದುರ್ಗಾಯಿ, ಸೋಮಲಿಂಗ ದುರ್ಗಾಯಿ, ಪ್ರಧಾನ ಗುರು ಬಿ.ಎಸ್.ಪಾಟೀಲ, ಬಾಬಣ್ಣ ಪಾಗೋಜಿ ಹಾಗೂ ಸೋಮಲಿಂಗ ವೆಂಕಮ್ಮನವರ, ಶೇಖರ, ಪುಂಡಲೀಕ ದುರ್ಗಾಯಿ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನಂದೀಶ ಕಡಕೋಳ, ಮಂಜುನಾಥ ವಾಲ್ಮೀಕಿ, ಅಜ್ಜನಗೌಡ ಮೂಲಿಮನಿ, ಸಿಬ್ಬಂದಿ ಪದ್ಮಾ ಭಜಂತ್ರಿ, ಕೃಷ್ಣ ಮತ್ತು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಸವಿತಾ ಬೆಂತೂರು ನಿರೂಪಿಸಿದರು.