ಡಾ. ಶರಣಮ್ಮ ಗೊರೆಬಾಳ ಅವರ ಮತ್ತೆ ನಕ್ಕಿತು ಭೂಮಿ ಕವನ ಸಂಕಲನದ ಬಿಡುಗಡೆ

ಧಾರವಾಡ 16 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಡಾ. ಶರಣಮ್ಮ ಗೋರೆಬಾಳ ರಚಿಸಿದ ಮತ್ತೆ ನಕ್ಕಿತು ಭೂಮಿ ಕವನ ಸಂಕಲನವನ್ನು ಡಾ. ಎಂ ಎಂ ಕಲಬುರ್ಗಿ ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷರಾದ ಡಾ. ವೀರಣ್ಣ ರಾಜೂರ ಅವರು ದತ್ತಿ ಉಪನ್ಯಾಸ ಉದ್ಘಾಟಿಸಿ ಪುಸ್ತಕ ಬಿಡುಗಡೆಗೊಳಿಸಿ ಕಾವ್ಯ ಜೀವನಾನುಭವಗಳ ಸುಂದರ ಅಭಿವ್ಯಕ್ತಿ, ಲೇಖಕಿ ತಮ್ಮ ಜೀವನದ ನೋವು ನಲಿವು, ಪ್ರೀತಿ, ಪ್ರೇಮಗಳನ್ನು ಕವನದಲ್ಲಿ ಹಿಡಿದಿಟ್ಟಿದ್ದಾರೆ. ರೈತ ಕುಟುಂಬದಲ್ಲಿ ಜನಿಸಿದ ಶರಣಮ್ಮ ರೈತರ ಕಷ್ಟ ಸುಖ, ಆತಂಕಗಳನ್ನು ಕಣ್ಣಾರೆ ಕಂಡವರು, ರೈತನ ಮುಖದಲ್ಲಿ ನಗು ಬರಲು ಮಳೆ ಬೇಕು, ಬೆಳೆ ಬರಬೇಕು, ಅಂದಾಗ ಪ್ರತಿಯೊಬ್ಬನ ಮುಖದಲ್ಲಿ ಮಂದಹಾಸ ಕಾಣುತ್ತದೆ ಎಂಬ ಆಶಾ ಭಾವವನ್ನು ತಮ್ಮ ಕವನದಲ್ಲಿ ವ್ಯಕ್ತಪಡಿಸಿದ್ದಾರೆ ತಿಳಿಸಿದರು .

ಬಸವ ಅಂತರಾಷ್ಟ್ರೀಯ ತಿಳುವಳಿಕೆ ಕೇಂದ್ರ ಪುಣೆ ಇದರ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಕೃತಿ ಪರಿಚಯ ಮಾಡಿ, ಮಹಿಳೆಯ ಬದುಕೇ ಒಂದು ಕಾವ್ಯ, ಲೇಖಕಿ ಆಂತರಿಕ ತಲ್ಲಣಗಳಿಗೆ, ತಮ್ಮ ನೋವು ನಲಿವುಗಳಿಗೆ ಕವನದ ರೂಪ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಡಾ.ಶ್ರೀಧರ್ ಹೆಗಡೆ ಭದ್ರನ್ ಅವರು ಅನ್ಯ ನಿರೂಪಣಾ ಆತ್ಮಕಥನಗಳು ತಾತ್ವಿಕ ಚಿಂತನೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಜೀವನದಲ್ಲಿ ಸಾಧನೆ ಮಾಡಿದ ಎಷ್ಟೋ ಮಹಾನ್ ವ್ಯಕ್ತಿಗಳು ಅನಕ್ಷರಸ್ಥರಾಗಿದ್ದು ಆತ್ಮಕಥೆಗಳನ್ನು ಬೇರೆಯವರ ಕಡೆ ಬರೆಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಆತ್ಮಕಥೆಗಳನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡುವಾಗ ಅದರ ಹಕ್ಕು ಆತ್ಮಕಥೆಗಾರನದು ಅಥವಾ ನಿರೂಪಣ ಮಾಡಿದ ಲೇಖಕರದು ಎಂಬ ಗೊಂದಲ ಉಂಟಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಡಾ. ಲಿಂಗರಾಜ್ ಅಂಗಡಿಯವರು ಲೇಖಕಿಯ ಕುರಿತು ಮಹಿಳೆಯರ ಜೀವನದ ಹೋರಾಟದ ಕುರಿತು ಅತ್ಯಂತ ಆತ್ಮೀಯವಾದ ನುಡಿಗಳನ್ನಾಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಡಾ. ಶರಣಮ್ಮ ಗೊರೆಬಾಳ ಅವರ ಕವನ ಸಂಕಲನದ ಕೆಲವು ಕವನಗಳನ್ನು ಡಾ. ಜ್ಯೋತಿ ಲಕ್ಷ್ಮಿ ಡಿಪಿ ಅವರು ರಾಗ ಸಂಯೋಜನೆ ಮಾಡಿ ಹಾಡಿದರು. ಕುಮಾರಿ ಲಕ್ಷ್ಮಿ ಹಳ್ಳೂರ ಪ್ರಾರ್ಥಿಸಿದಳು. ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಡಾ.ಶರಣಮ್ಮ ಗೋರೆಬಾಳ ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಹಾಂತೇಶ್ ನರೇಗಲ್ ವಂದಿಸಿದರು. ಮೇಘಾ ಹುಕ್ಕೇರಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಮಹಾದೇವ ಹೊರಟ್ಟಿ , ಡಾ .‌ಎಸ್ ಎಸ್ ದೊಡಮನಿ, ವೆಂಕಟೇಶ್ ಮಾಚಕನೂರ, ಮೃತ್ಯುಂಜಯ ಶೆಟ್ಟರ್, ಡಾ. ಶಿವಾನಂದ ಶೆಟ್ಟರ್, ಎ ಎಲ್ ಗೊರೆಬಾಳ, ಸೋಮಶೇಖರ ದೇವಲಾಪುರ, ಉಮಾ ಬಾಗಲಕೋಟೆ , ಶಾಂತವೀರ ಬೆಟಗೇರಿ, ಚೆನ್ನಪ್ಪ ಅಂಗಡಿ, ಎಸ್ ಎಚ್ ಪ್ರತಾಪ್,ಪ್ರಮಿಳಾ ಜಕ್ಕನ್ನವರ, ಗೀತಾ ಕುಲಕರ್ಣಿ,ಮಾರ್ತಾಂಡ ಪ್ಪಾ ಕತ್ತಿ, ಎಫ್ ಬಿ ಕಣವಿ, ಬಸವರಾಜ ಗಂಟೆ ಗೊರವರ, ಸಿ ಎಮ್ ಕೆಂಗಾರ,ಎಲ್‌.ಎಸ್.ಕಿಲ್ಲೇದಾರ ಮುಂತಾದವರು ಉಪಸ್ಥಿತರಿದ್ದರು.

  • Related Posts

    ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಗೆ ಬಂದು ಏಕಾಗ್ರತೆಯಿಂದ ಓದಬೇಕು ಡಾ.ಆನಂದ ಪಾಂಡುರಂಗಿ

    ಧಾರವಾಡ : ವ್ಯಕ್ತಿತ್ವ ವಿಕಸನಕ್ಕೆ ಬೇಕಾಗಿರುವ ಎಲ್ಲಾ ಚಟುವಟಿಕೆಗಳನ್ನು ಒದಗಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಕಲಿಕೆ ನಿರಂತರವಾದ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಗುರಿಬೇಕು ಕಾರ್ಯ ಯೋಜನೆ ಮಾಡಿಕೊಳ್ಳಬೇಕು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸವನ್ನು ಆನಂದಿಸು, ಪರೀಕ್ಷೆಯನ್ನು ಆನಂದಿಸಿ ಬರುವ ಹೆಚ್ಚು ಕಮ್ಮಿ ಅಂಕಗಳು ಬಂದರು…

    ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ವ್ಯವಸ್ಥಿತವಾಗಿ ನಡೆಸಿ ಯಶಸ್ವಿಗೊಳಿಸಿ – ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಕರೆ

    ಧಾರವಾಡ ೦೫ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಧಾರವಾಡದ ವತಿಯಿಂದ ಇದೇ ದಿ.6 ರಿಂದ 10 ರವರೆಗೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರದ ಸಸ್ಯಚೇತನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ…

    RSS
    Follow by Email
    Telegram
    WhatsApp
    URL has been copied successfully!