
ಧಾರವಾಡ 18 : ಡಾ. ಗೌಡ, ಶ್ರೇಷ್ಠ ವಿದ್ಯಾರ್ಥಿ, ಶ್ರೇಷ್ಠ ಶಿಕ್ಷಕ, ಶ್ರೇಷ್ಠ ವಿಜ್ಞಾನಿ, ಶ್ರೇಷ್ಠ ಆಡಳಿತಗಾರ ಮತ್ತು ಶ್ರೇಷ್ಠ ಮಾನವತಾವಾಧಿ. ಡಾ. ಗೌಡರವರು ಇತ್ತಿಚಿಗೆ 31-03-2024 ರಂದು 87 ವರ್ಷ ಮುಗಿಸಿ 88 ನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಅವರ ಸಾವಿರಾರು ಅಭಿಮಾನಿಗಳು, ಶಿಷ್ಯವೃಂದ ಸೇರಿ ಅಂದು ಅವರ ಹುಟ್ಟು ಹಬ್ಬ ಆಚರಿಸುವ ಕಾರ್ಯಕ್ರಮವನ್ನು ಕೃಷಿ ವಿಶ್ವವಿದ್ಯಾಲಯ, ಧಾರವಾಡ ಆವರಣದಲ್ಲಿ ಹಮ್ಮಿಕೊಂಡಿದ್ದರು, ಬಳ್ಳಾರಿ ಜಿಲ್ಲೆಯ ಜಿಗೆನಹಳ್ಳಿಯ ಇವರು ಹೊಸಪೇಟೆ, ಕೂಡ್ಲಿಗಿ, ಹರಪನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಅಭ್ಯಾಸ ಮತ್ತು ಇಂಟರಮಿಡಿಯಟ್‌ನ್ನು ಮೈಸೂರಿನ ಸೇಂಟ್ ಫಿಲೋಮೆನಾಸ್ ಕಾಲೇಜಿನಲ್ಲಿ ಪೂರೈಸಿದ್ದರು 1955-59 ರಲ್ಲಿ ಧಾರವಾಡ ಕೃಷಿ ಕಾಲೇಜಿನಲ್ಲಿ ಕೃಷಿ ಪದವಿ ಮುಗಿಸಿ, ಅಲ್ಲಿಯೇ ಡಾ. ಎಸ್. ಡಬ್ಲೂö್ಯ. ಮೆಣಸಿನಕಾಯಿಯವರ ಮಾರ್ಗದರ್ಶನದಲ್ಲಿ ಎಂ.ಎಸ್ಸಿ. (ಕೃಷಿ) ಯನ್ನು ಪೂರೈಸಿದರು. ನವ ದೆಹಲಿಯ ಐಎಆರ್‌ಐನಲ್ಲಿ ಭಾರತ ರತ್ನ ದಿವಂಗತ ಡಾ. ಎಮ್.ಎಸ್. ಸ್ವಾಮಿನಾಥನ್‌ರವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪೂರೈಸಿ, ಕೃವಿವಿ, ಬೆಂಗಳೂರಿನಲ್ಲಿ ಸೇವೆಯನ್ನು ಪ್ರಾರಂಭಿಸಿದ್ದರು. ಧಾರವಾಡ ಕೃಷಿ ಮಹಾವಿದ್ಯಾಲಯದಲ್ಲಿ ವಿಜ್ಞಾನಿಯಾಗಿ, ಶಿಕ್ಷಕರಾಗಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಅತ್ಯಂತ ಪ್ರಗತಿಪರ ಕೆಲಸಗಳನ್ನು ಮಾಡಿದ್ದಾರೆ. 50 ವಿದ್ಯಾರ್ಥಿಗಳು ಎಮ್.ಎಸ್ಸಿ. (ಕೃಷಿ) ಮತ್ತು 25 ವಿದ್ಯಾರ್ಥಿಗಳು ಪಿಎಚ್.ಡಿ. ಪದವಿಯನ್ನು ಇವರ ಮಾರ್ಗದರ್ಶನದಲ್ಲಿ ಪೂರೈಸಿದ್ದರು
ಇವರು ಭತ್ತ, ಜೋಳ, ಅಲಸಂದಿ, ಮೆಣಸಿನಕಾಯಿ ಮತ್ತು ಕಬ್ಬು ಬೆಳೆಯಲ್ಲಿ ಹೊಸ ಹೊಸ ತಳಿ ಕಂಡು ಹಿಡಿದು ರೈತರಿಗೆ ಉಪಯುಕ್ತವಾಗುವಂತಾಗಿದೆ. 300 ವೈಜ್ಞಾನಿಕ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
ಕೃವಿವಿ, ಧಾರವಾಡದ ಪ್ರಥಮ ಕುಲಪತಿಯಾಗಿ (1986-89) ಹಲವಾರು ಸುಧಾರಣೆಗಳನ್ನು ಮಾಡಿದ್ದಾರೆ. ಆಡಳಿತದಲ್ಲಿ ಸುಧಾರಣೆ ಮತ್ತು ಪಠ್ಯಕ್ರಮಗಳಲ್ಲಿ ಬದಲಾವಣೆ ಮಾಡಿರುವರು. 304 ಶಿಕ್ಷಕ ಮತ್ತು 258 ಶಿಕ್ಷಕೇತರ ಸಿಬ್ಬಂದಿಯನ್ನು ನೇಮಿಸಿ ಕೊಂಡಿದ್ದಾರೆ. ರಾಯಚೂರಿನಲ್ಲಿ ಕೃಷಿ ಇಂಜನೀಯರಿಂಗ್ ಹೊಸ ಪದವಿ ಕೋರ್ಸ್ ಪ್ರಾರಂಭಿಸಿದ್ದರು. ಪಶುವೈದ್ಯಕೀಯ ಮತ್ತು ಕೃಷಿ ಪದವಿಯ ಹೊಸ ಮಹಾವಿದ್ಯಾಲಯಗಳನ್ನು ಅನುಕ್ರಮವಾಗಿ ಬೀದರ್ ಮತ್ತು ರಾಯಚೂರಿನಲ್ಲಿ ಪ್ರಾರಂಭಿಸಿದ್ದರು
ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಸುಧಾರಣೆಗಾಗಿ ರಾಷ್ಟç ಮಟ್ಟದ 12 ಸಮೀತಿಗಳ ಚೇರಮನ್ ಆಗಿ, 16 ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಶ್ರೀಯುತರು ಮಡದಿ, ಒಬ್ಬ ಗಂಡು ಮಗ, ಒಬ್ಬ ಹೆಣ್ಣು ಮಗಳು, ನಾಲ್ಕು ಜನ ಮೊಮ್ಮಕ್ಕಳೊಂದಿಗೆ ಧಾರವಾಡದಲ್ಲಿ ಸಂತೋಷದಾಯಕ ಜೀವನ ನಡೆಸುತ್ತಿದ್ದರು. ಇಂದು ಮಧ್ಯಾಹ್ನ 1:30 ರಿಂದ 3 ಘಂ ವರೆಗೆ ಕ್ರಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸಾರ್ವಜನಿಕ ದಶ೯ನಕ್ಕೆ ಇಟ್ಟು ತದನಂತರ ಧಾರವಾಡ ಹೊಸ ಬಸ್ ನಿಲ್ದಾಣ ಹಿಂದಿನ ಅಂತ್ಯ ಕ್ರಿಯೆ ಮಾಡಲಾಗುವದು ಎಂದು ಕುಟುಂಬದ ವರು ತಿಳಿಸಿದ್ದಾರೆ.