ಧಾರವಾಡ : ಜಿಲ್ಲೆಯಾದ್ಯಂತ ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128 ನೇ ಜನ್ಮದಿನದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ನಡುವೆ ನೇತಾಜಿಯವರ ಜೀವನ ಸಂಘರ್ಷ ಹಾಗೂ ಅವರ ವಿಚಾರಗಳನ್ನು ಹರಡುವ ಉದ್ದೇಶದಿಂದ ಏಐಡಿಎಸ್ಓ ಧಾರವಾಡ ಜಿಲ್ಲಾ ಸಮಿತಿಯಿಂದ ಇಂದು ಕೆ ಇ ಬೋರ್ಡ್ ಪದವಿ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಐಎನ್ಎ ಪಾತ್ರ. ಈ ವಿಷಯದ ಕುರಿತು ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಸ್ವರಚಿತ ಕವನ, ಚಿತ್ರಕಲೆ,ರಸಪ್ರಶ್ನೆ ಹಾಗೂ ಗಾಯನ* ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ನೇತಾಜಿಯವರ ಚಿಂತನೆಗಳನ್ನು ಅರಿತು ಅವರಿಗೆ ಗೌರವ ಸಲ್ಲಿಸಲು ವಿವಿಧ ಶಾಲೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.!!
ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರಾದ ಸಿಂಧೂ ಕೌದಿ, ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ, ಕಚೇರಿ ಕಾರ್ಯದರ್ಶಿ ಸ್ಪೂರ್ತಿ ಚಿಕ್ಕಮಠ, ಕಾರ್ಯಕರ್ತರಾದ ಶಾಂತೇಶ್ ಹಾಗೂ ಮಕ್ಕಳು ಇದ್ದರು.