ಧಾರವಾಡ ಜನವರಿ ೦೩ : ಧಾರವಾಡ ರಂಗಾಯಣವು ರಂಗ ತಂಡಗಳ ಸಹಯೋಗದಲ್ಲಿ ನಾಟಕ ತರಬೇತಿ ಕಾರ್ಯಾಗಾರದಲ್ಲಿ ಸಿದ್ಧಗೊಂಡ ಹಾಗೂ ಸ್ಥಳೀಯ ತಂಡಗಳಿಂದ ಜ.4 ರಿಂದ 7 ರವರೆಗೆ ಸಂಜೆ 6 ಕ್ಕೆ ಪಂಡಿತ ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ರಂಗಾಯಣ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಅಪರ ಜಿಲ್ಲಾಧಿಕಾರಿ ಸಿ.ಡಿ ಗೀತಾ ಅವರು ನಾಟಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸುವರು. ರಂಗ ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಅವರು ಅತಿಥಿಗಳಾಗಿ ಭಾಗವಹಿಸುವರು. ರಂಗಾಯಣ ನಿರ್ದೇಶಕ ಡಾ.ರಾಜು ತಾಳಿಕೋಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಜನವರಿ 4 ರಂದು ಸಂಜೆ 6.30ಕ್ಕೆ ಅಂಗುಲಿಮಾಲ ದೊಡ್ಡಾಟ ಪ್ರಸಂಗವನ್ನು ಹುಬ್ಬಳ್ಳಿ ಜನಪದ ಕಲಾಬಳಗ ಟ್ರಸ್ಟ್(ರಿ), ಜನವರಿ 5 ರಂದು ಹೆತ್ತವಳ ಹಾಲು ವಿಷವಾಯಿತು ನಾಟಕವನ್ನು ಹುಬ್ಬಳ್ಳಿ ಕನ್ನಡ ಕಲಾ ಸೇವಾ ಸಂಘ(ರಿ), ಜನವರಿ 6 ರಂದು ಬಾಹುಬಲಿ ವಿಜಯ ನಾಟಕವನ್ನು ಧಾರವಾಡದ ಆಟ-ಮಾಟ ತಂಡ ಹಾಗೂ ಜನವರಿ 7 ರಂದು ಜೋಕುಮಾರ ಸ್ವಾಮಿ ನಾಟಕವನ್ನು ಶೂಲೇಬಾವಿ ಮನುಜಮತ ಫೌಂಡೇಶನ ತಂಡಗಳು ಪ್ರಸ್ತುತಪಡಿಸುವರು. ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು, ಸಾಹಿತಿಗಳು ಆಗಮಿಸಬೇಕು ಎಂದು ರಂಗಾಯಣ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.