
ಧಾರವಾಡ 25 : ಧಾರವಾಡ ಮಹಾನಗರ ಪಾಲಿಕೆ ಗೆ ಬಿಜೆಪಿಯಿಂದಲೇ ಅಡ್ಡಗಾಲಾಗಿದೆ ಎಂದು ಕಿಡಿಕಾರಿದ ಅರವಿಂದ ಏಗನಗೌಡರ ಕಿಡಿಕಾರಿದರು
ಅವರು ಪತ್ರಿಕಾಗೋಷ್ಠಿ ಮಾತನಾಡಿ, ಧಾರವಾಡ ಮಹಾನಗರ ಪಾಲಿಕೆಗೆ ಈಗಾಗಲೇ ರಾಜ್ಯ ಕಾಂಗ್ರೆಸ್ ಸರಕಾರ ಅನುಮೋದನೆ ನೀಡಿ ಗೆಜೆಟ್ ಹೊರಡಿಸಿದ್ದು ಧಾರವಾಡದ ಸಮಸ್ತ ಜನತೆ ಸಂತಸ ಗೊಂಡಿದ್ದು ಎಲ್ಲರಿಗೂ ತಿಳಿದ ವಿಷಯ.
ಶಾಸಕರಾದ ಕುಲಕರ್ಣಿಯವರ ಛಲಬಿಡದ ನಿರಂತರ ಪ್ರಯತ್ನ, ಧಾರವಾಡ ಜನತೆಯ ಒಕ್ಕೊರಳಿನ ಹೋರಾಟಕ್ಕೆ ರಾಜ್ಯ ಸರ್ಕಾರ ಮುಂಬರುವ ಬಜ್ಜೆಟ್ ನಲ್ಲಿ ಧಾರವಾಡ ಪಾಲಿಕೆಗೆ ಅನುದಾನ ಘೋಷಣೆ ಮಾಡುವ ಎಲ್ಲಾ ಸಾಧ್ಯತೆಗಳು ಇದೆ ಎಂದರು.
ಈ ಹಿನ್ನೆಲೆಯಲ್ಲಿ ವಿನಯ ಕುಲಕರ್ಣಿ ಯವರು 100 ಕೋಟಿ ಅನುದಾನ ನೀಡಬೇಕು ಎಂದು ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಧಾರವಾಡದ ಸಮಗ್ರ ಅಭಿವೃದ್ಧಿಯಾಗಬೇಕಾದರೆ, ಧಾರವಾಡ ಜನತೆ ಹಾಗೂ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಆದರೆ ಈಗ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ಧಾರವಾಡ ಮಹಾನಗರ ಪಾಲಿಕೆಯ ಅಸ್ತಿತ್ವ ಈಗ ಬೇಡ ಎನ್ನುತ್ತಿದ್ದಾರೆ,ಈ ಹಿಂದೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಾಗ ಸರ್ವನುಮತದಿಂದ ಠರಾವು ಮಾಡಿ ಸಲ್ಲಿಸಿದ್ದು, ಈಗ ಬೇಡ ಎನ್ನುವದು ಎಷ್ಟು ಸರಿ ? ಈಗ ಧಾರವಾಡ ಪ್ರತ್ಯೇಕ ಪಾಲಿಕೆಯ ಬಗ್ಗೆ ಬಿಜೆಪಿ ಗಿರುವ ದ್ವಿಮುಖ ನೀತಿ ಬಹಿರಂಗಗೊಂಡಿದೆ.ಧಾರವಾಡ ಸುತ್ತಮುತ್ತಲಿನ ಗ್ರಾಮದ ಜನತೆಯ ದಾರಿ ತಪ್ಪಿಸಿ ನಿಮ್ಮ ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳುತ್ತಾರೆ ಸೇರಿಸಿಕೊಳ್ಳುತ್ತಾರೆ ಎಂದು ಗ್ರಾಮೀಣ ಜನತೆಯನ್ನು ಎತ್ತಿ ಕಟ್ಟುವ ಪ್ರಯತ್ನದಲ್ಲಿ ಈಗಾಗಲೇ ಮುಖಬಂಗ ಅನುಭವಿಸಿದ್ದರೂ ತಮ್ಮ ದುರ್ಬುದ್ದಿ ಬಿಡದ ಬಿಜೆಪಿ ನಾಯಕರು ಪಾಲಿಕೆ ತಂದಿದ್ದು ನಾವು ಎಂದು ಬ್ಯಾನರಗಳನ್ನು ಧಾರವಾಡ ತುಂಬಾ ಅಳವಡಿಸಿ ಬಿಟ್ಟಿ ಪ್ರಚಾರ ತೆಗೆದುಕೊಂಡು ಈಗ ತೆರೆ ಮರೆಯಲ್ಲಿ ಮಹಾಪೌರರನ್ನು ದಾಳವಾಗಿ ಬಳಸಿಕೊಳ್ಳುವ ವ್ಯರ್ಥ ಪ್ರಯತ್ನವನ್ನು ಕೈ ಬಿಡಬೇಕು, ಧಾರವಾಡ ಜನತೆ ಪ್ರಜ್ಞಾವಂತರಿದ್ದು ನಿಮ್ಮ ನಡೆಯನ್ನು ಅವಲೋಕಿಸುತ್ತಿದ್ದಾರೆ ಎಂಬುದು ನಿಮಗೆ ತಿಳಿದಿರಲಿ ಎಂದರು.
ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ನ ಯಾವೊಬ್ಬ ಸದಸ್ಯರು ಧಾರವಾಡ ಪಾಲಿಕೆಯ ವಿರುದ್ಧವಾಗಿ ಸಹಿ ಮಾಡದೇ ಇದ್ದರೂ, ಮಹಾಪೌರರು ಸರ್ವನುಮತದಿಂದ ಅಕ್ಷಪನೆ ಸಲ್ಲಿಸಿದ್ದಾರೆ ಎಂಬುದು ಶುದ್ಧ ಸುಳ್ಳು, ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಧಾರವಾಡ ಪ್ರತ್ಯೇಕ ಪಾಲಿಕೆಗೆ ಅಡ್ಡಗಾಲು ಹಾಕುವದನ್ನು ಬಿಡಬೇಕು ಎಂದು ಅಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ರಾಜಶೇಖರ್ ಕಮತಿ, ಪಾಲಿಕೆ ಸದಸ್ಯರುಗಳಾದ ಕವಿತಾ ಕಬ್ಬೆರ, ಶಂಭು ಸಾಲಮನಿ, ಗಣೇಶ ಮುಧೋಳ, ಮುಖಂಡ ವೀರೇಶ ಶೆಟ್ಟರ ಉಪಸ್ಥಿತರಿದ್ದರು