
ಧಾರವಾಡ 20: ಇದೇ 21ರಿಂದ 23 ರ ವರೆಗೆ ಹೆಗಡೆ ಗ್ರೂಪ್ ಹಾಗೂ ವಿಜನ್ ಫೌಂಡೇಶನ್ ಧಾರವಾಡದ ಕೆ ಸಿ ಡಿ ಮೈದಾನದಲ್ಲಿ ಧಾರವಾಡ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ಗಿರೀಶ್ ಹೆಗಡೆ ತಿಳಿಸಿದ್ದಾರೆ.
ಮೂರು ದಿನಗಳ ಕಾಲ ನಡೆಯಲಿರುವ ಧಾರವಾಡ ಹಬ್ಬದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ದಿ 21 ರಂದು ಸಂಜೆ 6 ಘಂಟೆಗೆ ಧಾರವಾಡ ಹಬ್ಬದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಧಾರವಾಡ ಹಬ್ಬವನ್ನು ಉದ್ಘಾಟಿಸಲಿದ್ದಾರೆಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಎನ್.ಎಚ್ ಕೋನರೆಡ್ಡಿ, ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಮಾಜಿ ಶಾಸಕ ಅಜಂಪೀರ್ ಖಾದ್ರಿ ಭಾಗವಹಿಸಲಿದ್ದಾರೆ.ದಿ 22 ರಂದು ಯುವ ನಾಯಕ/ ಯುವನಾಯಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ವೈಶಾಲಿ ಕುಲಕರ್ಣಿ, ಹಾಗೂ ನವೀನ ಕೋನರೆಡ್ಡಿಯವರಿಗೆ ಯುವನಾಯಕ ಹಾಗೂ ಯುವನಾಯಕಿ ಪ್ರಶಸ್ತಿ ಪ್ರಧಾನ ಮಾಡಲಾಗುವದು.ಎರಡನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವಲೀಲಾ ಕುಲಕರ್ಣಿ, ವಸಂತ ಹೊರಟ್ಟಿ, ಶಾಕೀರ್ ಸನದಿ, ಸಂಗಮೇಶ ಬಬಲೇಶ್ವರ, ವಿನೋದ ಅಸೂಟಿ, ದರ್ಶನ ಲಮಾಣಿ, ಮಹೇಶ ಶೆಟ್ಟಿ, ಫಯಾಜ್ ಬಸ್ತವಾಡ ಭಾಗವಹಿಸಲಿದ್ದಾರೆಎಂದರು.
ದಿ 23 ರಂದು ಸಂಜೆ 6 ಘಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಮ್ ಆರ್ ಪಾಟೀಲ ಹಾಗೂ ಮಾಜಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಸೀಮಾ ಮಸೂತಿ, ಅಮೃತ ದೇಸಾಯಿ, ಕಾಂಗ್ರೇಸ್ ಮುಖಂಡ ದೀಪಕ ಚಿಂಚೋರೆ ಭಾಗವಹಿಸಲಿದ್ದಾರೆ ಎಂದು ತಿಳಸಿದರು.
ಸಮಾರೋಪ ಸಮಾರಂಭದಲ್ಲಿ ಇದೇ ಮೊದಲ ಬಾರಿಗೆ ವಿಜನ್ ಫೌಂಡೇಶನ್ ವತಿಯಿಂದ” ಧಾರವಾಡದ ಹೆಮ್ಮೆಯ ನಾಗರಿಕ” ಪ್ರಶಸ್ತಿ ಪ್ರಧಾನ ನಡೆಯಲಿದೆ.ಈ ವರ್ಷದ ಧಾರವಾಡದ ಹೆಮ್ಮೆಯ ನಾಗರಿಕ ಪ್ರಶಸ್ತಿಯನ್ನು ಧಾರವಾಡದ ಮೊಯಿನ್ ಶೇಖ್ ಅವರಿಗೆ ಘೋಷಿಸಲಾಗಿದೆ ಎಂದು ಮುಸ್ತಫಾ ಕುನ್ನಿಭಾವಿ ತಿಳಿಸಿದ್ದಾರೆ. ಮೊಯಿನ್ ಶೇಖ ಅವರು ಧಾರವಾಡದವರಾಗಿದ್ದು, ಚೀನಾದಲ್ಲಿ, ಆಟೋಮೋಬೈಲ್ ಕ್ಷೇತ್ರದಲ್ಲಿ ಕೈಗಾರಿಕೆ ಆರಂಭಿಸಿ ಹೆಸರು ಮಾಡಿದ್ದಾರೆ.ಅಲ್ಲದೇ ಧಾರವಾಡದಲ್ಲಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ ಎಂದರು.