ಡಿಜಿಟಲ್ ತಂತ್ರಜ್ಞಾನದ ಪರಿವರ್ತನೆಯಿಂದ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗುತ್ತಿದೆ ಎಂದು ಅಮೇರಿಕಾದ ಸ್ಟೋನ್ ಹಿಲ್ ಕಾಲೇಜಿನ ಸ್ಟಾಟಜಿಕ್ ಅಡ್ವೈಸರ ಡಾ.ಶ್ರೀರಾಮ ಬೆಲ್ಡೋನಾ ಹೇಳಿದರು

ಅವರು ನಗರದ ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ‌ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ 50 ವರ್ಷದ ಸಂಭ್ರಮಾಚರಣೆಯ ನಿಮಿತ್ತವಾಗಿ ಕಿಮ್ಸ್ ಆವರಣದಲ್ಲಿ ಆಯೋಜಿಸಿದ ‘ದರ್ಪಣ್-2026 ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ‌ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು.

ಪ್ರಸ್ತುತ ಕಲಿಕೆಯಲ್ಲಿ ಬೋಧನಾ ವಿಧಾನಗಳು ಬದಲಾಗುತ್ತಿದ್ದು, ಡಿಜಿಟಲ್ ತಂತ್ರಜ್ಞಾನ ಹೆಚ್ಚು ಮುನ್ನಲೆಗೆ ಬಂದಿದ್ದು, ಇಂದು ಸಮಾಜಿಕ ಮಾಧ್ಯಮ ತಂತ್ರಜ್ಞಾನವು ಹೆಚ್ಚು ಅವಕಾಶಗಳನ್ನು ಒದಗಿಸುತ್ತದೆ ಎಂದ ಅವರು ಕರ್ನಾಟಕ ವಿಶ್ವವಿದ್ಯಾಲಯ ಕೌಸಾಳಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್‌ ನನ್ನಲ್ಲಿ ಪರಿವರ್ತನೆ ತಂದಿದೆ ಎಂದರು.

 

Darpan-2026 Golden Jubilee Program

ಎಂಬತ್ತರ ದಶಕದ ವ್ಯವಹಾರದ
ಶಿಕ್ಷಣವು ಸಾಂಪ್ರದಾಯಿಕ ಬೋಧನಾ ವಿಧಾನವನ್ನು ಒಳಗೊಂಡಿತ್ತು ಈಗ ತಂತ್ರಜ್ಞಾನದ ಸಹಾಯದಿಂದ ಬೋಧನೆಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಪ್ರಸ್ತುತ ಭಾರತದಲ್ಲಿ 6500 ಕ್ಕಿಂತ ಹೆಚ್ಚು ವಿವಿಧ ಬಿಸಿನೆಸ್ ಕೋರ್ಸ್ ಗಳು ಲಭ್ಯವಿವೆ ಅವುಗಳಲ್ಲಿ ಪ್ರಸ್ತುತ ವ್ಯವಹಾರದ ಸ್ಥಿತಿ ಗತಿಯನ್ನು ಅರಿತು ಇಂದಿನ ಯುವ ಸಮುದಾಯಕ್ಕೆ ಒದಗಿಸಬೇಕಾಗಿದೆ ಎಂದ ಅವರು ಯಶಸ್ಸು ಸಿಗಬೇಕಾದರೆ ನಿರಂತರ ಶ್ರಮದ ಅಗತ್ಯತೆ ಇದೆ ಎಂದರು.

ಕೌಸಾಳಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಅಶೋಕ ಚಚಡಿ ಮಾತನಾಡಿ…ಅಂತರಾಷ್ಟ್ರೀಯ ಮಟ್ಟದಲ್ಲಿ ಕಿಮ್ಸ್ ಬೆಳಸಬೇಕಾಗಿದೆ ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಬಹಳ ಇದೆ ಎಂದ ಅವರು ಭವಿಷ್ಯದಲ್ಲಿ ಹೆಚ್ಚು ಸವಾಲುಗಳು ಇವೆ ಅವುಗಳನ್ನು ಎದುರಿಸಿ ಮುನ್ನಡೆಯ ಬೇಕಾಗಿದೆ ಎಂದರು.

ಕೌಸಾಳಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಮ್.ಎಸ್.ಸುಭಾಷ್ ಮಾತನಾಡಿ…ಕಿಮ್ಸ್ ಬೆಳವಣಿಗೆಯಲ್ಲಿ ಹಳೆಯ ವಿದ್ಯಾರ್ಥಿಗಳ ಪಾತ್ರ ಅಪಾರವಾಗಿದೆ ಎಂದ ಅವರು ಕಿಮ್ಸ್ ಸಂಸ್ಥೆಯನ್ನು ಇನ್ನಷ್ಟು ಬೆಳಸಲು ಇಲ್ಲಿನ ಪ್ರಾಧ್ಯಾಪಕರು ಹೆಚ್ಚು ಗಮನ ನೀಡಬೇಕು ದೇಶದಲ್ಲಿ ಕಿಮ್ಸ್ ಸಂಸ್ಥೆಯನ್ನು ಮಾದರಿ ಸಂಸ್ಥೆಯನ್ನಾಗಿ ಮಾಡಲು ಪಣ ತೋಡಬೇಕು ಎಂದರು.

ಕಿಮ್ಸ್ ನಿರ್ದೇಶಕ ಪ್ರೊ.ಉತ್ತಮ ಕಿನಂಗೆ‌ ಮಾತನಾಡಿ…ಭವಿಷ್ಯದಲ್ಲಿ ಡಿಜಿಟಲ್ ವೇದಿಕೆಗಳು ಪರಿಣಾಮಕಾರಿಯಾಗಿ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಹೆಚ್ಚು ಕೌಶಲ್ಯಯುತ ಶಿಕ್ಷಣ ನೀಡಲು ಕಿಮ್ಸ್ ಪಾಡ ಕಾಸ್ಟ್ ಡಿಜಿಟಲ್‌ ವೇದಿಕೆ ಪ್ರಾರಂಭಿಸಲಾಗುವದು ಈಗಾಗಲೇ ವಿದ್ಯಾರ್ಥಿಗಳ ಜೊತೆಗೆ ವಿವಿಧ ಪರಿಣಿತ ಉದ್ಯಮದಾರರ ಜೊತೆಗೆ ಸಂವಾದ, ಉದ್ಯಮ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪ್ರಯೋಗಾತ್ಮಕ ಬೋಧನೆ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಹೈದರಾಬಾದಿನ ಐ.ಎಸ್.ಬಿ ಹಿರಿಯ ಡೀನ್…ಮದನ್ ಪಿಲ್ಲುಟ್ಟಾ, ಕೌಸಾಳೆ ಕುಟುಂಬ ಸದಸ್ಯರಾದ ಡಾ.ವಿವೇಕ ಗಬ್ಬೂರ, ಕವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಬಿ.ಗುಡಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ.ಉತ್ತಮ ಕಿನಂಗೆ, ಕೌಸಾಳೆ ಇನಸ್ಟಿಟ್ಯೂಟ್ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನರೇಶ ಷಾ, ಕಿಮ್ಸ ಅಸೋಸಿಯೇಷನ್ ಪ್ರೊಜೆಕ್ಟ್ ಹೆಡ್ ಸಂಜಯ ಗನಾಟೆ, ಕಿಮ್ಸ್ ಡೀನ್ ಡಾ. ಎನ್ ರಾಮಾಂಜನಯಲು ಡಾ.ಪುಷ್ಪಾ ಹೊಂಗಲ್, ಪ್ರೊ.ಮಹೇಶ ಕುಲಕರ್ಣಿ, ಸೇರಿದಂತೆ ಇತರರು ಇದ್ದರು