ಧಾರವಾಡದಲ್ಲಿ ಸಿಲಿಂಡರ್ ದುರಂತ — 3 ಮಕ್ಕಳು ಸೇರಿ 6 ಜನರಿಗೆ ಗಂಭೀರ ಗಾಯ.
ಧಾರವಾಡ : ಗ್ಯಾಸ್ ಸಿಲಿಂಡರ್ ಸೋರಿಕೆಯಿಂದಾಗಿ ಮನೆಗೆ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ್ದ ಆರು ಜನ ಗಾಯಗೊಂಡಿರುವ ಘಟನೆ ನಗರದ ಹೊಸಯಲ್ಲಾಪುರ ಸುಣ್ಣದ ಭಟ್ಟಿ ಬಡಾವಣೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಇಸ್ಮಾಯಿಲ್ ಹೊರಕೇರಿ ಎಂಬುವವರಿಗೆ ಸೇರಿದ ಮನೆಯಲ್ಲೇ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ತಗುಲಿದೆ. ಈ ಘಟನೆಯಲ್ಲಿ 6 ಜನ ಗಾಯಗೊಂಡಿದ್ದಾರೆ. ಇದರಲ್ಲಿ ಮೂವರು ಮಕ್ಕಳೂ ಸಹ ಇದ್ದಾರೆ. ಸದ್ಯ ಮೂವರ ಸ್ಥಿತಿ ಗಂಭೀರವಾಗಿದೆ.
ಸಿಲಿಂಡರ್ ಸೋರಿಕೆಯಾಗುತ್ತಿದ್ದ ವಿಷಯ ಗೊತ್ತಾಗದೇ ಬೆಳಿಗ್ಗೆ ಗ್ಯಾಸ್ ಹಚ್ಚಿದ್ದರಿಂದ ಫ್ಲ್ಯಾಶ್ ಫೈರ್ ಆಗಿ ಬೆಂಕಿ ತಗುಲಿದೆ.
ಇದರಿಂದ ಮಕ್ಕಳೂ ಸೇರಿದಂತೆ ಒಟ್ಟು ಆರು ಜನ ಗಾಯಗೊಂಡಿದ್ದಾರೆ. ಇನಾಯಾ (3), ಕೈಫ್ (7), ಅಮೀನಾ (26), ಇಸ್ಮಾಯಿಲ್ (35), ಜರೀನಾ (65) ಹಾಗೂ ಮಹಿರಾನ್ (13) ಎಂಬುವವರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಭೇಟಿ ನೀಡಿ ಬೆಂಕಿ ನಂದಿಸುವ ಕೆಲಸ ಮಾಡಿದ್ದು, ಗಾಯಾಳುಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಆದರೂ ಇನ್ನೂ ಹೆಚ್ಚಿನ ಚಿಕಿತ್ಸೆ ಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿದೆ.






