ಭೋವಿ ಮತ್ತು ಗೊಲ್ಲರ ಸಮುದಾಯಗಳ ನಡುವೆ ಜಗಳ ಗೊಲ್ಲರ ಕಾಲನಿಯಲ್ಲಿ ಹೊಡೆದಾಟ 6 ಮಂದಿ ಪೊಲೀಸ್ ವಶಕ್ಕೆ

ಧಾರವಾಡ 02 : ಕ್ಷುಲ್ಲಕ ಕಾರಣಕ್ಕೆ ಎರಡು ಅಕ್ಕಪಕ್ಕದ ಮನೆಯವರು ಪರಸ್ಪರ ಬಡಿದಾಡಿಕೊಂಡ ಘಟನೆ ಧಾರವಾಡದ ಸವದತ್ತಿ ರಸ್ತೆಯ ಗೊಲ್ಲರ ಕಾಲನಿಯಲ್ಲಿ ಜನೆವರಿ 1ರ ರಾತ್ರಿ ನಡೆದಿದೆ.

ಭೋವಿ ಮತ್ತು ಗೊಲ್ಲರ ಸಮುದಾಯಗಳ ನಡುವೆ ಜಗಳವಾಗಿದ್ದು, ಜಗಳದಲ್ಲಿ ಇಟ್ಟಿಗೆಗಳಿಂದ ತೂರಾಡಿಕೊಂಡಿದ್ದಾರೆ.

ಆಟೋರಿಕ್ಷಾ ಹೊರಟಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಅಡ್ಡವಾಗಿದ್ದು, ಚೂರು ಸರಿಸಿರಿ ಎಂದಿದ್ದಕ್ಕೆ ಕ್ಷುಲ್ಲಕ ಕಾರಣದಿಂದ ಜಗಳ ಶುರುವಾಗಿ ತಾರಕ್ಕೇರಿದ ಪರಿಣಾಮ ಇಟ್ಟಂಗಿ, ಇನ್ನಿತರ ವಸ್ತುಗಳಿಂದ ಹೊಡೆದಾಡಿಕೊಂಡಿದ್ದಾರೆ. ಜಗಳದಲ್ಲಿ ರಾಜು ಮುಧೋಳ ಹೆಚ್ಚು ಗಾಯವಾಗಿದ್ದು ತದನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆಯಲ್ಲಿ ರಾಜು ಮುಧೋಳ ಮತ್ತು ಸಂತೋಷ ಗೊಲ್ಲರ ಎಂಬುವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಮತ್ತು ಪ್ರತಿದೂರು ದಾಖಲಾಗಿದೆ. ಗೊಲ್ಲರ ಕುಟುಂಬದ ಹುಲಗಪ್ಪ, ವಿಠಲ, ಕುಮಾರ, ಭೀಮಪ್ಪ, ಮಣಿಕಂಠ ಮತ್ತು ಸಂತೋಷನನ್ನು ಬಂಧಿಸಲಾಗಿದೆ ಎಂದು ಧಾರವಾಡ ಶಹರ ಪೊಲೀಸ್ ಠಾಣಾ ಅಧಿಕಾರಿಗಳು ತಿಳಿಸಿದ್ದಾರೆ.

  • Related Posts

    ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಗೆ ಬಂದು ಏಕಾಗ್ರತೆಯಿಂದ ಓದಬೇಕು ಡಾ.ಆನಂದ ಪಾಂಡುರಂಗಿ

    ಧಾರವಾಡ : ವ್ಯಕ್ತಿತ್ವ ವಿಕಸನಕ್ಕೆ ಬೇಕಾಗಿರುವ ಎಲ್ಲಾ ಚಟುವಟಿಕೆಗಳನ್ನು ಒದಗಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಕಲಿಕೆ ನಿರಂತರವಾದ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಗುರಿಬೇಕು ಕಾರ್ಯ ಯೋಜನೆ ಮಾಡಿಕೊಳ್ಳಬೇಕು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸವನ್ನು ಆನಂದಿಸು, ಪರೀಕ್ಷೆಯನ್ನು ಆನಂದಿಸಿ ಬರುವ ಹೆಚ್ಚು ಕಮ್ಮಿ ಅಂಕಗಳು ಬಂದರು…

    ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ವ್ಯವಸ್ಥಿತವಾಗಿ ನಡೆಸಿ ಯಶಸ್ವಿಗೊಳಿಸಿ – ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಕರೆ

    ಧಾರವಾಡ ೦೫ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಧಾರವಾಡದ ವತಿಯಿಂದ ಇದೇ ದಿ.6 ರಿಂದ 10 ರವರೆಗೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರದ ಸಸ್ಯಚೇತನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ…

    RSS
    Follow by Email
    Telegram
    WhatsApp
    URL has been copied successfully!