ಧಾರವಾಡ :ಕರ್ನಾಟಕ ಎಜ್ಯುಕೇಶನ್ ಬೋರ್ಡ ಮಾಳಮಡ್ಡಿ, ಧಾರವಾಡ ಮತ್ತು ಕೆ. ಇ. ಬೋರ್ಡ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯ,ಶಿವಾಜಿ ವರ್ತುಳ, ಸವದತ್ತಿ ರಸ್ತೆ, ಧಾರವಾಡ ಇವರ ಸಹಯೋಗದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ -2024-25 (ಜನಪದ ಸಾಹಿತ್ಯ) ಸಾಲಿನ ಕಾರ್ಯಕ್ರಮವನ್ನು ಜರುಗಲಿದೆ.
ದಿ 07 ರಂದು ಸಮಯ ಬೆಳಿಗ್ಗೆ 8:40 ಗಂಟೆಗೆ ಶಿವಾಜಿ ರಸ್ತೆ ಕೆ.ಇ. ಬೋರ್ಡ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೂಳ್ಳಲಾಗಿದೆ ಎಂದು ಎಂ.ಎ.ಸಿದ್ದಾಂತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಡಾ. ಕೆ. ಆರ್. ದುರ್ಗಾದಾಸ ಅಧ್ಯಕ್ಷರು, ಕರ್ನಾಟಕ ಬಯಲಾಟ ಆಕಾಡೆಮಿ, ಬಾಗಲಕೋಟ ಹಾಗೂ ವಿಶ್ರಾಂತ ಪ್ರಾಧ್ಯಾಪಕರು, ಕ.ವಿ.ವಿ. ಧಾರವಾಡ ಇವರು ಆಗಮಿಸುವರು.ಕಾರ್ಯಾಧ್ಯಕ್ಷರು, ಕೆ.ಇ. ಬೋರ್ಡ ಶ್ರೀಕಾಂತ ಪಾಟೀಲ ಇರುವರು. ಎಂದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರು, ಕೆ.ಇ. ಬೋರ್ಡ ಶ್ರೀಕಾಂತ ಪಾಟೀಲ, ಡಾ. ಶ್ರೀಮತಿ ಸುನೀತ ಪುರೋಹಿತ್ ಕಾಲೇಜು ಸುಧಾರಣಾ ಸಮಿತಿ ಅಧ್ಯಕ್ಷರು ಡಿ.ಎಸ್. ರಾಜಪುರೋಹಿತ, ಕಾರ್ಯದರ್ಶಿ ಡಾ.ಶರಣಮ್ಮ ಗೊರೇಬಾಳ ಪ್ರಾಚಾರ್ಯರು ವಿದ್ಯಾರಣ್ಯ ಪಿ.ಯು.ಕಾಲೇಜ ಇದ್ದರು.