ಹುಬ್ಬಳ್ಳಿ 26 :– ಮಕ್ಕಳು ಗಣರಾಜ್ಯೋತ್ಸವದ ಆಚರಣೆಯ ಹಿನ್ನೆಲೆಯನ್ನು ಅರಿಯಬೇಕು ದೇಶ ಹಾಗೂ ಗುರುಗಳನ್ನು ಗೌರವಿಸಬೇಕೆಂದು ಭಾರತಿಯ ಸೇನೆಯ ಮಾಜಿ ಕ್ಯಾಪ್ಟನ್ ಡಾ.ಮಾರಿಯೊ ಅಭಿಪ್ರಾಯ ಪಟ್ಟರು.
ಅವರು ನವನಗರ ರೋಟರಿ ಶಿಕ್ಷಣ ಸಂಸ್ಥೆಯ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ 76 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಧ್ವಜಾರೋಹಣ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷರಾದ ರೋ.ಎಸ್.ವಿ.ಶಿರಗುಪ್ಪಿ , ಸಂಸ್ಥೆಯ ಕಾರ್ಯದರ್ಶಿ ಡಾ..ಪಿ.ಅಣ್ಣಿಗೇರಿ , ಖಜಾಂಚಿ .ಎಂ.ಎಫ್ . ಮನಗುಂಡಿ , ಕಾರ್ಯಕಾರಿ ಮಂಡಳಿಯ ಸದಸ್ಯರಾದ , .ಎಸ್.ಜಿ.ಮಾಳಾಪುರ,.ಎಸ್.ಜಿ.ಟೆಂಗಿನಕಾಯಿ – ಡಾ.ಎನ್.ಪಿ.ಸಾನು .ಗಿರೀಶ ಬಮ್ಮನಗೌಡರ, ಶಶಿಕಾಂತ ಮಾಳಾಪರ ಹಾಗೂ ಸಂಸ್ಥೆಯ ಸದಸ್ಯರಾದ, ಓ. .ಜಿ.ಪಾಟೀಲ , .ಡಾ.ಎಂ,ಎ.ರಡೇರ , ಮಹಾಂತೇಶ ಕಡಪಟ್ಟಿ , ಸಂಜೋತ ಬೇವೂರ ಆಗಮಿಸಿದ್ದರು.
ಶಾಲೆಯ ಪ್ರಾಚಾರ್ಯರಾದ ಡಾ.ವಿಜಯಶ್ರೀ ಕಲಬುರ್ಗಿ ಸ್ವಾಗತಿಸಿದರು . ಶಾಲಾ ಶಿಕ್ಷಕರು, ಸಿಬ್ಬಂದಿ , ಬಾಲಕರು ಮತ್ತು ಮಕ್ಕಳು ಆಗಮಿಸಿದ್ದರು. ಮಕ್ಕಳು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು .