ಧಾರವಾಡ 13 : ಸಂತೋಷ್‌ ಲಾಡ್‌ ಫೌಂಡೇಶನ್‌ ವತಿಯಿಂದ ಬುದ್ಧ, ಬಸವ ಮತ್ತು ಅಂಬೇಡ್ಕರ: ಹೊಸ ದೃಷ್ಟಿಕೋನ ಕುರಿತು ಒಂದು ದಿನದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಇದೇ 15 ರಂದು ಭಾನುವಾರ ಬೆಳಗ್ಗೆ 8.00 ಗಂಟೆಯಿಂದ ಈ ವಿಚಾರ ಸಂಕಿರಣ ನಡೆಯಲಿದೆ.

ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ವಿಚಾರ ಸಂಕಿರಣ ಉದ್ಘಾಟನೆ ಮಾಡಿ ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ.

ಭಗವಾನ್‌ ಬುದ್ಧರ ಕುರಿತು ಉಪನ್ಯಾಸಗಳು, ಶ್ರೀ ಬಸವೇಶ್ವರದ ಕುರಿತು ಉಪನ್ಯಾಸಗಳು ಹಾಗೂ ಡಾ. ಅಂಬೇಡ್ಕರ್‌ ಕುರಿತು ಉಪನ್ಯಾಸಗಳು ನಡೆಯಲಿವೆ.

ದಿವ್ಯಸಾನಿಧ್ಯವನ್ನು ಬಾಗಲಕೋಟೆ ಹಾಗೂ ಚಿತ್ರದುರ್ಗದ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಬೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಹಾಗೂ ಹಲವು ಸ್ವಾಮೀಜಿಗಳು ವಹಿಸಲಿದ್ದಾರೆ. ಎಂದು ಸಂತೋಷ ಲಾಡ್ ಪೌಂಡೇಶನ್ ಪ್ರಕಟನೆಯಲ್ಲಿ ತಿಳಸಿದ್ದಾರೆ.